ಬುಡಕಟ್ಟು ಪ್ರದೇಶದಲ್ಲಿ ರಾಜ್ಯಪಾಲರ ಗ್ರಾಮವಾಸ್ತವ್ಯ

By Kannadaprabha NewsFirst Published Oct 24, 2019, 8:53 AM IST
Highlights

ಬುಡಕಟ್ಟು ಜನರ ಮೂಲಭೂತ ಸಮಸ್ಯೆಗಳನ್ನು ಅರಿಯಲು, ಅಲ್ಲದೆ, ಆ ಜನಾಂಗ ಸಾಮಾಜಿಕವಾಗಿ ಹೇಗೆ ಉಳಿದವರಿಂದ ಬೇರ್ಪಟ್ಟಿದೆ ಎನ್ನುವುದನ್ನು ತಿಳಿಯಲು ತೆಲಂಗಾಣ ರಾಜ್ಯಪಾಲೆ ತಮಿಳಿಸಾಯ್‌ ಸುಂದರ್‌ರಾಜನ್‌ ಬುಡಕಟ್ಟು ಪ್ರದೇಶದಲ್ಲಿ ಉಳಿದುಕೊಳ್ಳಲಿದ್ದಾರೆ. 

ಹೈದರಾಬಾದ್‌ [ಅ.24]: ಬುಡಕಟ್ಟು ಜನಾಂಗದರು ವಾಸವಿರುವ ಸ್ಥಳಗಳಿಗೆ ಭೇಟಿ ನೀಡಿ ಒಂದು ರಾತಿ  ಕಳೆದುಬರಲು ತೆಲಂಗಾಣ ರಾಜ್ಯಪಾಲೆ ಮುಂದಾಗಿದ್ದಾರೆ. 

ಈ ಮೂಲಕ ಬುಡಕಟ್ಟು ಜನರ ಮೂಲಭೂತ ಸಮಸ್ಯೆಗಳನ್ನು ಅರಿಯಲು ಸಾಧ್ಯ. ಅಲ್ಲದೆ, ಆ ಜನಾಂಗ ಸಾಮಾಜಿಕವಾಗಿ ಹೇಗೆ ಉಳಿದವರಿಂದ ಬೇರ್ಪಟ್ಟಿದೆ ಎನ್ನುವುದನ್ನು ತಿಳಿಯಲು ಸಾಧ್ಯವಾಗಲಿದೆ ಎಂದು ರಾಜ್ಯಪಾಲೆ ತಮಿಳಿಸಾಯ್‌ ಸುಂದರ್‌ರಾಜನ್‌ ಅಭಿಪ್ರಾಯಪಟ್ಟಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು, ಬುಡಕಟ್ಟು ಜನಾಂಗದ ಯುವಕರಲ್ಲಿ ಔಷಧೀಯ ಜ್ಞಾನ ಸಾಕಷ್ಟಿರುತ್ತದೆ. ಅವರಿಗೆ ಸೂಕ್ತ ರೀತಿಯ ವೈದ್ಯಕೀಯ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದ ಅವರು ಮುಲುಗು ಜಲ್ಲೆಯಲ್ಲಿ ಬುಡಕಟ್ಟು ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದರು. 

ಇದೇ ವೇಳೆ ತಾವು ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಸ್ನೇಹಿತ ಜೊತೆ ಅಂಡಮಾನ್‌ ದ್ವೀಪಕ್ಕೆ ಭೇಟಿ ನೀಡಿ ವೈದ್ಯಕೀಯ ಸೇವೆ ಸಲ್ಲಿಸಿದ ದಿನಗಳನ್ನೂ ಮೆಲುಕುಹಾಕಿದರು.

click me!