
ನವದೆಹಲಿ (ಮೇ.24): ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ಶನಿವಾರ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಮತ್ತು ವೈಯಕ್ತಿಕ ಪೋಸ್ಟ್ ಅನ್ನು ಹಂಚಿಕೊಂಡ ನಂತರ ಸಾಮಾಜಿಕ ಮಾಧ್ಯಮ ಮತ್ತು ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದರು. ಈ ಪೋಸ್ಟ್‌ನಲ್ಲಿ, ಅವರು ಕಳೆದ 12 ವರ್ಷಗಳಿಂದ ಅನುಷ್ಕಾ ಯಾದವ್ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮೊದಲ ಬಾರಿಗೆ ಬಹಿರಂಗಪಡಿಸಿದರು.
ಇಬ್ಬರ ಫೋಟೋವನ್ನು ಪೋಸ್ಟ್ ಮಾಡಿ, ತೇಜ್ ಪ್ರತಾಪ್ ಬರೆದುಕೊಂಡಿದ್ದು, "ನಾನು ತೇಜ್ ಪ್ರತಾಪ್ ಯಾದವ್, ಮತ್ತು ಈ ಚಿತ್ರದಲ್ಲಿರುವ ಮಹಿಳೆ ಅನುಷ್ಕಾ ಯಾದವ್. ನಾವು ಕಳೆದ 12 ವರ್ಷಗಳಿಂದ ಪರಸ್ಪರ ತಿಳಿದಿದ್ದೇವೆ ಮತ್ತು ಪ್ರೀತಿಸುತ್ತಿದ್ದೇವೆ. ನಾವು ಇಷ್ಟು ವರ್ಷಗಳಿಂದ ಸಂಬಂಧದಲ್ಲಿದ್ದೇವೆ. ನಾನು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ, ಆದರೆ ಹೇಗೆ ಎಂದು ತಿಳಿದಿರಲಿಲ್ಲ. ಇಂದು, ಈ ಪೋಸ್ಟ್ ಮೂಲಕ ಹಂಚಿಕೊಳ್ಳಲು ನಾನು ಧೈರ್ಯವನ್ನು ಪಡೆದಿದ್ದೇನೆ. ನೀವು ನನ್ನನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ." ಎಂದು ಬರೆದಿದ್ದಾರೆ.
ಈ ಪೋಸ್ಟ್ ಭಾವನಾತ್ಮಕ ಮತ್ತು ಪ್ರಾಮಾಣಿಕವಾಗಿದ್ದರೂ, ಅದು ಬೇಗನೆ ವೈರಲ್ ಆಯಿತು ಮತ್ತು ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ಹುಟ್ಟುಹಾಕಿತು. ಅನೇಕ ಸೋಶಿಯಲ್ ಮೀಡಿಯಾ ಯೂಸರ್‌ಗಳು ತೇಜ್ ಪ್ರತಾಪ್ ಅವರ ಹಿಂದಿನ ಕ್ರಮಗಳನ್ನು, ವಿಶೇಷವಾಗಿ ಅನುಷ್ಕಾ ಅವರೊಂದಿಗೆ ಸಂಬಂಧದಲ್ಲಿದ್ದೇನೆ ಎಂದು ಹೇಳಿಕೊಳ್ಳುವಾಗ 2018 ರಲ್ಲಿ ಐಶ್ವರ್ಯಾ ರೈ ಅವರನ್ನು ಮದುವೆಯಾಗುವ ಅವರ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ.
ಒಬ್ಬ ಯೂಸರ್ ಕಾಮೆಂಟ್ ಮಾಡಿದ್ದು, “ನೀವು 12 ವರ್ಷಗಳಿಂದ ಅನುಷ್ಕಾ ಅವರೊಂದಿಗೆ ಇದ್ದರೆ, ನೀವು ಇನ್ನೊಬ್ಬ ಮಹಿಳೆಯನ್ನು ಏಕೆ ಮದುವೆಯಾದಿರಿ ಮತ್ತು ಅವರ ಜೀವನವನ್ನು ಹಾಳುಮಾಡಿದಿರಿ?” ಎಂದು ಪ್ರಶ್ನಿಸಿದ್ದಾರೆ.
“ಇದು ಆಚರಣೆ ಮಾಡಬೇಕಾದ ವಿಷಯವಲ್ಲ. ಐಶ್ವರ್ಯಾ ರೈ ಬಗ್ಗೆ ಏನು? ಅವಳು ಯಾರದ್ದೋ ಮಗಳು ಅಲ್ಲವೇ? ನೀವು ಅವಳ ಜೀವನದ ಬಗ್ಗೆಯೂ ಯೋಚಿಸಬೇಕಿತ್ತು.” ಎಂದು ಮತ್ತೊಬ್ಬರು ಬರೆದಿದ್ದಾರೆ.
ಸಾರ್ವಜನಿಕ ಜೀವನದಲ್ಲಿರುವ ಯಾರಾದರೂ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಜನರ ಭಾವನೆಗಳೊಂದಿಗೆ ನೀವು ಆಟವಾಡುತ್ತಿದ್ದೀರಿ ಎಂದು ತೇಜ್ ಪ್ರತಾಪ್ ಅವರನ್ನು ದೂರಿದ್ದಾರೆ.
ಆದರೂ, ಕೆಲವು ಯೂಸರ್‌ಗಳು ತೇಜ್ ಪ್ರತಾಪ್‌ನ ಪ್ರಾಮಾಣಿಕತೆಯನ್ನು ಮೆಚ್ಚಿದರು. ಒಬ್ಬ ವ್ಯಕ್ತಿ ಬರೆದಿದ್ದು, “ತೇಜು ಭಯ್ಯಾ ಅಚ್ಚರಿಯ ಪ್ಯಾಕೇಜ್ ಆಗಿ ಹೊರಹೊಮ್ಮಿದ್ದೀರಿ. ತನ್ನ ಗೆಳತಿಯ ಫೋಟೋದೊಂದಿಗೆ ಫೇಸ್‌ಬುಕ್‌ನಲ್ಲಿ ಬಂದಿದ್ದೀರಿ ಮತ್ತು 12 ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಹೇಳಿದ್ದೀರಿ. ಇಲ್ಲಿಯವರೆಗೆ ಅದನ್ನು ಹೇಗೆ ಹಂಚಿಕೊಳ್ಳಬೇಕೆಂದು ನಿಮಗೆ ತಿಳಿದಿರಲಿಲ್ಲ ಎನ್ನುವುದು ಕೇಳಿ ಅಚ್ಚರಿಯಾಯಿತು' ಎಂದುದ್ದಾರೆ.
ಐಶ್ವರ್ಯ ರೈ, ತೇಜ್‌ಪ್ರತಾಪ್ ಮೊದಲ ಪತ್ನಿ: ಬಿಹಾರದ ಮಾಜಿ ಮಂತ್ರಿ ಚಂದ್ರಿಕಾ ರೈ ಅವರ ಮಗಳು ಮತ್ತು ಮಾಜಿ ಸಿಎಂ ದರೋಗಾ ರೈ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರೊಂದಿಗಿನ ತೇಜ್ ಪ್ರತಾಪ್ ಅವರ ವಿವಾಹವು ವ್ಯಾಪಕವಾಗಿ ಪ್ರಚಾರಗೊಂಡ ವಿಚ್ಛೇದನದಲ್ಲಿ ಕೊನೆಗೊಂಡಿತು. ಈ ದೀರ್ಘಕಾಲೀನ ಸಂಬಂಧದ ಬಹಿರಂಗಪಡಿಸುವಿಕೆಯು ಈಗ ಅವರ ಜೀವನದ ಆ ಅಧ್ಯಾಯದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ