ಜೀವ ಬೆದರಿಕೆ ಇದೆ, ಕ್ಯಾಬ್ ಚಾಲಕನ ಮೆಸೇಜ್ ನೋಡಿ ಕಕ್ಕಾಬಿಕ್ಕಿಯಾದ ಟೆಕ್ಕಿಗೆ ಗೂಗಲ್ ಟ್ವಿಸ್ಟ್

Published : Nov 22, 2025, 06:41 PM IST
Uber Driver message

ಸಾರಾಂಶ

ಜೀವ ಬೆದರಿಕೆ ಇದೆ, ಕ್ಯಾಬ್ ಚಾಲಕನ ಮೆಸೇಜ್ ನೋಡಿ ಕಕ್ಕಾಬಿಕ್ಕಿಯಾದ ಟೆಕ್ಕಿಗೆ ಗೂಗಲ್ ಟ್ವಿಸ್ಟ್, ಎರಡು ನಿಮಿಷ ಕಾಯಲು ಹೇಳಿದ ಬಳಿಕ ಬಂದ ಈ ಸಂದೇಶ ನೋಡಿ ಟೆಕ್ಕಿ ಬೆವತು ಹೋಗಿದ್ದಾರೆ. ಆದರೆ ಮೆಸೇಜ್ ಅಸಲಿಯತ್ತು ಗೊತ್ತಾದಾಗ ನಿಟ್ಟುಸಿರು ಬಿಟ್ಟ ಘಟನೆ.

ದೆಹಲಿ (ನ.22) ನನಗೆ ಜೀವ ಬೆದರಿಕೆ ಇದೆ. ಉಬರ್ ಚಾಲಕನ ಸಂದೇಶ ನೋಡಿದ ಟೆಕ್ಕಿ ಗಾಬರಿ ಬಿದ್ದಿದ್ದಾನೆ. ಎರಡು ನಿಮಿಷ ಕಾಯಲು ಹೇಳಿದಾಗ ಒಕೆ ಎಂದು ಸಂದೇಶ ಕಳುಹಿಸಿದ್ದ ಚಾಲಕ, ಕೆಲ ನಿಮಿಷದಲ್ಲೇ ಜೀವ ಬೆದರಿಕೆ ಇದೆ ಎಂದರೇ ಯಾರಿಗಾದರೂ ಆತಂಕವಾಗದೇ ಇರುತ್ತಾ? ತಕ್ಷಣ ಚಾಲಕನ ಬಳಿ ಓಡಿ ಹೋಗಲೆ, ಅಥವಾ ಕಾಯಲು ಹೇಳಿದ ಕಾರಣ ನನಗೆ ಪರೋಕ್ಷವಾಗಿ ಹೇಳಿದನೆ? ನನ್ನ ಮನೆ ಪಕ್ಕದಲ್ಲೇ ಚಾಲಕನ ಮೇಲೆ ದಾಳಿಯಾಗುತ್ತಾ? ಎಂದು ಆತಂಕಗೊಂಡಿದ್ದಾನೆ. ಮಸೇಜ್ ಎರಡೆರಡು ಬಾರಿ ಓದಿದ್ದಾನೆ. ಅದೇ ಜೀವ ಬೆದರಿಕೆ ಸಂದೇಶ, ಬೇರೆ ಸಂದೇಶವೇನು ಇಲ್ಲ. ಇದೇ ವೇಳೆ ಆಟೋ ಟ್ರಾನ್ಸಲೇಶನ್ ಕ್ಲಿಕ್ ಮಾಡಿ ಒರಿಜನಲ್ ಮೆಸೇಜ್ ಓದಿದಾಗ ಇಡೀ ಘಟನೆಗೆ ಬಹುದೊಡ್ಡ ತಿರುವು ಸಿಕ್ಕಿದೆ.

ಏನಿದು ಬೆದರಿಕೆ ಮಸೇಜ್?

ಅರ್ನವ್ ಗುಪ್ತಾ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವಿವರಿಸಿದ್ದಾರೆ. ಅರ್ನವ್ ಗುಪ್ತಾ ಕಚೇರಿಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಾರೆ. ಊಹೆಗೂ ಮೊದಲೇ ಕ್ಯಾಬ್ ಮನೆ ಬಳಿ ಬಂದಿದೆ. ಆದರೆ ಅಷ್ಟೊತ್ತಿಗೆ ಅರ್ನವ್ ಗುಪ್ತಾ ಇನ್ನೂ ರೆಡಿ ಆಗಿರಲಿಲ್ಲ. ಹೀಗಾಗಿ ಕ್ಯಾಬ್ ಚಾಲಕನ ಅರೈವ್ಡ್ ಸಂದೇಶ ಬಂದ ಬೆನ್ನಲ್ಲೇ ಎರಡು ನಿಮಿಷ ಕಾಯಲು ಹೇಳಿದ್ದಾರೆ. ಇದಕ್ಕೆ ಕ್ಯಾಬ್ ಚಾಲಕ ಒಕೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಬಳಿಕ ಅರ್ನವ್ ಗುಪ್ತಾ ಬೇಗನೆ ರೆಡಿಯಾಗಿ ಹೊರಡಲು ತಯಾರಿ ಚುರುಕುಗೊಳಿಸಿದ್ದಾರೆ. ಆದರೆ ತಾನು 2 ನಿಮಿಷ ಎಂದ ಸಮಯ ಮುಗಿದರೂ ಹೊರಡಲು ಸಾಧ್ಯವಾಗಿರಲಿಲ್ಲ. ಅಷ್ಟರಲ್ಲೇ ಕ್ಯಾಬ್ ಚಾಲಕನಿಂದ ಸಂದೇಶ ಒಂದು ಬಂದಿದೆ. ನಾನು ಜೀವ ಬೆದರಿಕೆ ಎದುರಿಸುತ್ತಿದ್ದೇನೆ (ಐ ಆ್ಯಪ್ ಫೇಸಿಂಗ್ ದಿ ಥ್ರೆಟ್ ಆಫ್ ಮರ್ಡರ್). ಈ ಸಂದೇಶ ಓದಿದ ಅರ್ನವ್ ಗುಪ್ತಾ ಕೈಕಾಲು ನಡುಗಿದೆ. ನಾನು ಬುಕ್ ಮಾಡಿದ ಕ್ಯಾಬ್, ಮನೆ ಬಳಿ ಬಂದಾಗಿದೆ. ಈಗ ಜೀವ ಬೆದೆರಿಕೆ ಇದೆ ಎಂದರೆ ಏನು ಮಾಡಲಿ, ಹೇಳಿ ಕೇಳಿ ಇದು ದೆಹಲಿ, ಇಲ್ಲಿ ಏನು ಬೇಕಾದರೂ ನಡೆಯಬಹುದು ಎಂದು ಟೆಕ್ಕ ಅರ್ನವ್ ಗುಪ್ತಾ ಆತಂಕಗೊಂಡಿದ್ದಾರೆ.

ತಕ್ಷಣವೆ ಕೆಳಕ್ಕೆ ಹೋಗಿ ಆತನ ಸಹಾಯಕ್ಕೆ ನಿಲ್ಲಬೇಕಾ, ಅಥವಾ ನಾನು ಕಾಯಿಸಿದ್ದೇನೆ ಅನ್ನೋ ಕಾರಣಕ್ಕೆ ನನಗೆ ಪರೋಕ್ಷವಾಗಿ ಈ ಸಂದೇಶ ಕಳುಹಿಸಿದ್ದನಾ ಎಂದು ಗೊಂದಲವೂ ಹೆಚ್ಚಾಗಿದೆ. ಈ ಸಂದೇಶವನ್ನು ಅರ್ನವ್ ಗುಪ್ತಾ ಎರೆಡರಡು ಬಾರಿ ಓದಿದ್ದಾರೆ. ಬೇರೆ ಏನಾದರು ಸಂದೇಶ ಕಳುಹಿಸುತ್ತಿದ್ದಾರ, ಟೈಪಿಂಗ್ ಮಾಡುತ್ತಿದ್ದಾರಾ ಎಂದು ಗಮನಿಸಿದ್ದಾರೆ, ಆದರೆ ಯಾವುದೂ ಇಲ್ಲ, ಪ್ರತಿಕ್ರಿಯೆ ನೀಡಲು, ಟೈಪ್ ಮಾಡಲು ಸಾಧ್ಯವಾಗದಷ್ಟು ಆತಂಕ ಆಗಿದೆ.

 

 

ಗೂಗಲ್ ಕೊಟ್ಟ ಟ್ವಿಸ್ಟ್‌ಗೆ ಸುಸ್ತಾಗಿ ಹೋದ ಟೆಕ್ಕಿ

ಅರ್ನವ್ ಗುಪ್ತಾ ಆತಂಕದಲ್ಲೇ ಮತ್ತೊಮ್ಮೆ ಸಂದೇಶ ಓದಲು ಮುಂದಾಗಿದ್ದಾರೆ. ಕೊಂಚ ಶಾಂತವಾಗಿ, ತಾಳ್ಮೆಯಿಂದ ಮೆಸೇಜ್ ಓದಿದ್ದಾರೆ. ಆಗಲೂ ಸಂದೇಶದಲ್ಲಿ, ಅರ್ಥದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸಂದೇಶದ ಕೆಳಗೆ ಸೀ ಒರಿಜನ್ (See Original)ಎಂದಿತ್ತು. ಆದರೆ ಚಾಲಕ ಕಳುಹಿಸಿದ ಒರಿಜನ್ ಮೆಸೇಜ್ ಗೂಗಲ್ ಟ್ರಾನ್ಸಲೇಟ್ ಮಾಡಿ ನೀಡಿತ್ತು. ಸರಿ ಚಾಲಕ ಕಳುಹಿಸಿದ ಒರಿಜನ್ ಮಸೇಜ್ ಏನು? ನಿಜಕ್ಕೂ ಆತ ಬೆದರಿಕೆ ಎದುರಿಸುತ್ತಿದ್ದಾನ ಎಂದು ಪರಿಶೀಲಿಸಲು ಸೀ ಒರಿಜನ್ ಕ್ಲಿಕ್ ಮಾಡಿದ್ದಾರೆ. ಒರಿಜನಲ್ ಸಂದೇಶದಲ್ಲಿ ಉಬರ್ ಚಾಲಕ ಹಿಂದಿ ಸಂದೇಶವನ್ನು ಇಂಗ್ಲೀಷ್ ಅಕ್ಷರದಲ್ಲಿ ಟೈಪ್ ಮಾಡಿ ಕಳುಹಿಸಿದ್ದಾನೆ. ಆತ ಹೇಳಿದ್ದು ಮದರ್ ಡೈರಿ ಕೇ ಸಾಮ್ನೆ ಹು (ಮದರ್ ಡೈರಿ ಪಕ್ಕದಲ್ಲಿ ಇದ್ದೇನೆ) ಆದರೆ ಇಂಗ್ಲೀಷ್ ಡಿಕ್ಷನರಿ ಕಾರಣ ಮದರ್ ಟೈಪ್ ಮಾಡಿದಾಗ ಮರ್ಡರ್ ಎಂದಾಗಿದೆ. ಇನ್ನುಳಿದ ವಾಕ್ಯದಲ್ಲಿ ತಪ್ಪೇನು ಇಲ್ಲ (Murder deri ke saamne hu). ಇದನ್ನು ಗೂಗಲ್ ಟ್ರಾನ್ಸಲೇಟ್ ಮಾಡಿ ಐ ಆ್ಯಪ್ ಫೇಸಿಂಗ್ ದಿ ಥ್ರೆಟ್ ಆಫ್ ಮರ್ಡರ್ ಎಂದು ಮಾಡಿದೆ. ಈ ಗೂಗಲ್ ಟ್ರಾನ್ಸಲೇಶನ್‌ನಿಂದ ನನ್ನ ಜೀವ ಬಾಯಿಗೆ ಬಂದಿತ್ತು ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ
ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!