
ಭಾರತ ಕಂಡ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾದ ಅಮೆರಿಕದ ಫಾರ್ಮಾ ಕಿಂಗ್ ರಾಮರಾಜು ಮಂಟೇನಾ ಅವರ ಪುತ್ರಿ ನೇತ್ರಾ ಮಂಟೇನಾ ಅವರ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಘಟಾನುಘಟಿಗಳು ಇದಾಗಲೇ ಆಗಮಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಟ್ರಂಪ್ ಕೂಡ ಭಾರತಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರು, ಅನಂತ್ ಅಂಬಾನಿ ಅವರು ನಡೆಸುತ್ತಿರುವ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಯೋಜನೆಯಾದ ವಂತರಾವನ್ನು ವೀಕ್ಷಿಸಿದರು. ಪ್ರಾಣಿಗಳಿಗೆ ಇಲ್ಲಿ ಸಿಗುತ್ತಿರುವ ಸೌಲಭ್ಯಗಳನ್ನು ನೋಡಿ ಕಣ್ಣುಗಳನ್ನೇ ನಂಬದಾದೆ ಎಂದು ಉದ್ಗರಿಸಿದ ಜ್ಯೂನಿಯರ್ ಟ್ರಂಪ್,, ಈ ಸೌಲಭ್ಯವನ್ನು "ವಿಶ್ವದ ಅದ್ಭುತ" ಎಂದು ಕರೆದಿದ್ದಾರೆ. ಈ ಭೇಟಿ ಒಂದು ರೋಮಾಂಚನಕಾರಿಯಾಗಿತ್ತು, ಬಹುಶಃ ಇಂಥ ಯಾವ ಸೌಲಭ್ಯವನ್ನೂ ಪ್ರಾಣಿಗಳಿಗಾಗಿ ಈ ಮೊದಲು ನೋಡಿಲ್ಲ ಎಂದು ಭಾವುಕರೂ ಆದರು ಜ್ಯೂನಿಯರ್ ಟ್ರಂಪ್!
ಅನಂತ್ ಅಂಬಾನಿ (Ananth Ambani) ಅವರು ನಡೆಸುತ್ತಿರುವ ವಂತರಾದಲ್ಲಿ ತೊಂದರೆಗೀಡಾದ ಪ್ರಾಣಿಗಳನ್ನು ಹೇಗೆ ರಕ್ಷಿಸುತ್ತದೆ, ಅವುಗಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ವಿವರಣೆ ತಿಳಿದುಕೊಳ್ಳುತ್ತಲೇ ಆಶ್ಚರ್ಯಚಕಿತರಾದರು ಜ್ಯೂನಿಯರ್ ಟ್ರಂಪ್. ಯೋಜನೆಯ ಪ್ರಮಾಣ ಮತ್ತು ವಿವರಗಳಿಂದ ಪ್ರಭಾವಿತರಾದ ಅವರು, "ಈ ಪ್ರಾಣಿಗಳು ನನಗಿಂತ ಉತ್ತಮವಾಗಿ ಬದುಕುತ್ತಿವೆ ಎಂದು ಎನ್ನಿಸುತ್ತಿದೆ. ಈ ಅನುಭವ ನಂಬಲಸಾಧ್ಯವಾದದ್ದು ಎಂದು ಶ್ಲಾಘಿಸಿದ್ದಾರೆ.
ಇಲ್ಲಿನ ಪ್ರಾಣಿಗಳು ತಮ್ಮ ನೈಸರ್ಗಿಕ ಆವಾಸಸ್ಥಾನವನ್ನು ಅನುಕರಿಸುವ ಆವಾಸಸ್ಥಾನವನ್ನು ಪಡೆಯುವುದನ್ನು ನೋಡುವುದು ತುಂಬಾ ಅದ್ಭುತವಾಗಿದೆ ಎಂದ ಅವರು, ಪ್ರತಿಯೊಬ್ಬರೂ ಇಲ್ಲಿ ಭೇಟಿ ಕೊಡಲೇಬೇಕು. ಇದು ನಿಜಕ್ಕೂ ಜಗತ್ತಿನ ಅದ್ಭುತ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಭೇಟಿಯ ಸಮಯದಲ್ಲಿ, 3 ಸಾವಿರ ಎಕರೆ ವಿಸ್ತೀರ್ಣದ ವಂತರಾ ಎಷ್ಟು ವಿಸ್ತಾರವಾದ ಪ್ರಾಣಿಗಳನ್ನು ರಕ್ಷಿಸುತ್ತದೆ, ಅವುಗಳಿಗೆ ಚಿಕಿತ್ಸೆ ನೀಡುತ್ತದೆ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಪ್ರತಿಬಿಂಬಿಸಲು ನಿರ್ಮಿಸಲಾದ ಆವರಣಗಳಾಗಿ ಬದಲಾಯಿಸುತ್ತದೆ ಎಂಬುದರ ಕುರಿತು ಸಿಬ್ಬಂದಿ ಅವರಿಗೆ ವಿವರಿಸಿದರು.
ಪ್ರವಾಸದ ನಂತರ, ಟ್ರಂಪ್ ಜೂನಿಯರ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ಜಾಮ್‌ನಗರದಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಅವರು ಅಂಬಾನಿ ಕುಟುಂಬ ಆಯೋಜಿಸಿದ್ದ ಖಾಸಗಿ ದಾಂಡಿಯಾ ಕೂಟದಲ್ಲಿ ಸೇರಿಕೊಂಡರು. ಗುಜರಾತ್‌ಗೆ ಆಗಮಿಸುವ ಮೊದಲು ಅವರು ಆಗ್ರಾದ ತಾಜ್ ಮಹಲ್‌ನಲ್ಲಿ ಸ್ವಲ್ಪ ಸಮಯ ತಂಗಿದರು.
ಗುಜರಾತ್‌ನ ಜಾಮ್‌ನಗರದಲ್ಲಿರುವ ಅವರ 'ವಂತಾರಾ' ಎಂಬ ಪ್ರಾಣಿ ಸಂರಕ್ಷಣಾ ಕೇಂದ್ರದ ಮೂಲಕ ಪ್ರಾಣಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಅನಂತ್ ಅಂಬಾನಿ. ವಂತಾರಾ ಒಂದು ಅತ್ಯಾಧುನಿಕ ವನ್ಯಜೀವಿ ಆಶ್ರಯ ತಾಣವಾಗಿದ್ದು, ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಪ್ರಾಣಿಗಳನ್ನು ರಕ್ಷಿಸುತ್ತದೆ. ಇದು ಪ್ರಾಣಿ ಕಲ್ಯಾಣಕ್ಕಾಗಿ ಅತ್ಯುನ್ನತ ಗೌರವ 'ಪ್ರಾಣಿ ಮಿತ್ರ' ರಾಷ್ಟ್ರೀಯ ಪ್ರಶಸ್ತಿಯನ್ನು ಸಹ ಪಡೆದಿದೆ. ಇದು ಮೃಗಾಲಯ ಅಥವಾ ವಸ್ತುಸಂಗ್ರಹಾಲಯವಲ್ಲ, ಬದಲಿಗೆ ವೈದ್ಯಕೀಯ ಆರೈಕೆ ಮತ್ತು ಪುನರ್ವಸತಿ ಕೇಂದ್ರವಾಗಿದೆ. ಸಾವಿರಾರು ಪ್ರಾಣಿಗಳನ್ನು ರಕ್ಷಿಸಿ, ಚಿಕಿತ್ಸೆ ನೀಡಲಾಗಿದೆ. ವಂತಾರಾದಲ್ಲಿ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳು, ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಒಳಗೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ