ಕಾಂಚೀಪುರಂ(ಮಾ.9): ತಮಿಳುನಾಡಿನ ಮಹಿಳೆಯೊಬ್ಬರು ಹಲ್ಲುಜ್ಜುತ್ತಿದ್ದ ವೇಳೆ ಬಾತ್ ರೂಮಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದು ಇದರಿಂದ ಹಲ್ಲುಜ್ಜುವ ಬ್ರಶ್ ಬಾಯಿಯಲ್ಲಿ ಹಲ್ಲಿನ ಮಧ್ಯೆ ಸಿಲುಕಿಕೊಂಡು ಒದ್ದಾಡುವಂತಾದ ಘಟನೆ ನಡೆದಿದೆ. ಪರಿಣಾಮ ಆಕೆಯ ಬಾಯಿಯಲ್ಲಿ ಸಿಲುಕಿಕೊಂಡಿದ್ದ ಬ್ರಶ್ ತೆಗೆಯಲು ವೈದ್ಯರೇ ಬರಬೇಕಾಯಿತು.
ತಮಿಳುನಾಡಿನ (Tamil Nadu) ಕಾಂಚೀಪುರಂ(Kanchipuram) ನಿವಾಸಿ ರೇವತಿ (34) ಮಾರ್ಚ್ 4 ರಂದು ಹಲ್ಲುಜ್ಜುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಬಾತ್‌ರೂಮ್‌ನಲ್ಲಿ ಅವರು ಆಕಸ್ಮಿಕವಾಗಿ ಕಾಲುಜಾರಿ ನೆಲದ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರ ಹಲ್ಲುಜ್ಜುವ ಬ್ರಶ್ ಕೆನ್ನೆಯನ್ನು ತೂತು ಮಾಡಿ ಅಲ್ಲೇ ಸಿಕ್ಕಿಕೊಂಡಿದೆ. ಇದರಿಂದ ರೇವತಿ (Revathi) ಬಾಯಿ ತೆರೆಯಲು ಅಥವಾ ಮುಚ್ಚಲು ಸಾಧ್ಯವಾಗದ ರೀತಿಯಲ್ಲಿ ಹಲ್ಲುಜ್ಜುವ ಬ್ರಷ್ ಸಿಕ್ಕಿಹಾಕಿಕೊಂಡಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹುಳುಕಾಗಿರುವ ಹಲ್ಲುಗಳನ್ನು ಸರಿ ಪಡಿಸಲು 6 ನೈಸರ್ಗಿಕ ಮಾರ್ಗಗಳು
ಅಲ್ಲಿ ತಪಾಸಣೆ ನಡೆಸಿದ ಸರ್ಕಾರಿ ಜನರಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಶಸ್ತ್ರಚಿಕಿತ್ಸೆ ಮಾಡಿ ಆಕೆಯ ಕೆನ್ನೆಯ ಮೂಲಕ ಹಲ್ಲುಜ್ಜುವ ಬ್ರಷ್ ಅನ್ನು ತೆಗೆಯಲು ನಿರ್ಧರಿಸಿದರು. ನಂತರ ಸರ್ಜರಿಗಾಗಿ ಆಕೆಗೆ ಅರಿವಳಿಕೆ ನೀಡಲಾಯಿತು, ಕೆನ್ನೆಯಿಂದ ಹೊರಬರುತ್ತಿದ್ದ ಹಲ್ಲುಜ್ಜುವ ಬ್ರಷ್‌ನ ಅರ್ಧ ಭಾಗವನ್ನು ಕತ್ತರಿಸಲಾಯಿತು. ಬಳಿಕ ಹಲ್ಲಿನ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಇನ್ನರ್ಧವನ್ನು ಆಪರೇಷನ್ ಮಾಡಿ ಹೊರತೆಗೆಯಲಾಯಿತು.
ಸೆಪ್ಟೆಂಬರ್ 2020 ರಲ್ಲಿ, ಅರುಣಾಚಲ ಪ್ರದೇಶದ (Arunachal Pradesh) ವ್ಯಕ್ತಿಯೊಬ್ಬರು ತಮ್ಮ ಗಂಟಲನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಹಲ್ಲುಜ್ಜುವ ಬ್ರಷ್ ಅನ್ನು ನುಂಗಿದರು. ವೈದ್ಯರು ಎಕ್ಸ್-ರೇ (X-ray) ಮತ್ತು ಹೆಚ್ಚಿನ ಪರೀಕ್ಷೆಗಳನ್ನು ನಡೆಸಿದಾಗ, ಅವರಿಗೆ ಆತನ ಅನ್ನನಾಳದಲ್ಲಿಯೂ (oesophagus) ಬ್ರಷ್ ಅನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
Dakshina Kannada: ಟೂತ್‌ಪೇಸ್ಟ್ ಎಂದು ಭಾವಿಸಿ ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು
ಅಲ್ಲದೇ ಬ್ರಶ್ ನುಂಗಿದ ನಂತರ ರೋಗಿಯು ಯಾವುದೇ ನೋವನ್ನು ಅನುಭವಿಸಲಿಲ್ಲ ಮತ್ತು ಹೊಟ್ಟೆಯ ಮೇಲ್ಭಾಗದಲ್ಲಿ ಮಾತ್ರ ಸಣ್ಣ ಕಿರಿಕಿರಿ ಅನುಭವಿಸಿದನು. ನಂತರ ಸಾಮಾನ್ಯ ಅರಿವಳಿಕೆ (anaesthesia) ನೀಡಿ ಸಣ್ಣ ಶಸ್ತ್ರಚಿಕಿತ್ಸೆಯಲ್ಲಿ ವೈದ್ಯರು ಆತನ ದೇಹದಿಂದ ಹಲ್ಲುಜ್ಜುವ ಬ್ರಷ್ ಅನ್ನು ತೆಗೆದು ಹಾಕಿದರು. ಸುಮಾರು 30 ರಿಂದ 35 ನಿಮಿಷಗಳ ಕಾಲ ಈ ಆಪರೇಷನ್ ಮಾಡಿ ವೈದ್ಯರು ಈತನ ಹೊಟ್ಟೆಯಿಂದ ಹಲ್ಲುಜ್ಜುವ ಬ್ರಷ್ ಅನ್ನು ಹೊರತೆಗೆಯಲಾಯಿತು ಎಂದು ವೈದ್ಯ ಬೊಮ್ನಿ ತಾಯೆಂಗ್ (Dr Bomni) ಹೇಳಿದ್ದರು. ಶಸ್ತ್ರಚಿಕಿತ್ಸೆಯ ಒಂದು ದಿನದ ನಂತರ ರೋಗಿಯು ಬಾಯಿಯ ಮೂಲಕ ದ್ರವಾಹಾರವನ್ನು ಸ್ವೀಕರಿಸಲು ಆರಂಭಿಸಿದ ಎಂದು ವೈದ್ಯರು ಹೇಳಿದರು.
ಬಾಯಿ (Mouth)ಯ ಸ್ವಚ್ಛತೆ (Clean) ಬಹಳ ಮುಖ್ಯ. ಇದು ಕೇವಲ ಹಲ್ಲಿ (Teeth)ನ ಆರೋಗ್ಯ (Health)ಕ್ಕೆ ಸಂಬಂಧಿಸಿದ್ದಲ್ಲ ಮೌಖಿಕ ನೈರ್ಮಲ್ಯವನ್ನು ನಿರ್ಲಕ್ಷಿಸುವುದರಿಂದ ಇಡೀ ದೇಹಕ್ಕೆ ಹಾನಿಯಾಗುತ್ತದೆ. ಹಲ್ಲುಗಳು, ಒಸಡುಗಳು ಮತ್ತು ನಾಲಿಗೆ ಇತ್ಯಾದಿಗಳ ಮೇಲಿನ ಸೋಂಕು ಹೃದಯ ಮತ್ತು ಯಕೃತ್ತಿನಂತಹ ಅಂಗಗಳನ್ನು ಸಹ ಹಾನಿಗೊಳಿಸುತ್ತದೆ. ವಿಶೇಷವಾಗಿ ಈಗಾಗಲೇ ಮಧುಮೇಹದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಬಾಯಿಯ ಸ್ವಚ್ಛತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವುದು ಹೆಚ್ಚು ಮುಖ್ಯ. ಹಲ್ಲನ್ನು ಶುಚಿಗೊಳಿಸುವುದು ಮತ್ತು ನಿಯಮಿತ ತಪಾಸಣೆ ಮಾಡಿಸುವುದು ದೈಹಿಕ ಪರೀಕ್ಷೆಯಂತೆ ಒಂದಾಗಿದೆ. ಬಾಯಿಯ ನೈರ್ಮಲ್ಯಕ್ಕಾಗಿ ವಿವಿಧ ಉತ್ಪನ್ನಗಳನ್ನು ಬಳಸುತ್ತೇವೆ. ಅವುಗಳಲ್ಲಿ ಮೌತ್ ವಾಶ್ ಕೂಡ ಒಂದು. ಮೌತ್‌ವಾಶ್‌ನ ಆಯ್ಕೆ ಮತ್ತು ಬಳಕೆ ಎರಡರಲ್ಲೂ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸ್ವಲ್ಪ ನಿರ್ಲಕ್ಷ್ಯವು ದೊಡ್ಡ ತೊಂದರೆಗೆ ಕಾರಣವಾಗಬಹುದು.