ಕೇರಳ ಬಳಿಕ ತಮಿಳುನಾಡು ಲಾಕ್‌ಡೌನ್; ನೆರೆ ರಾಜ್ಯದಿಂದ ಕರ್ನಾಟಕಕ್ಕೆ ಸಂಕಷ್ಟ!

By Suvarna NewsFirst Published Jul 30, 2021, 8:11 PM IST
Highlights
  • ಕೊರೋನಾ ಏರಿಕೆ ಕಾರಣ ಲಾಕ್‌ಡೌನ್ ವಿಸ್ತರಿಸಿದ ತಮಿಳುನಾಡು
  • ಕೊರೋನಾ ಗಣನೀಯ ಏರಿಕೆಯಿಂದ ಕೇರಳದಲ್ಲಿ 2 ದಿನ ಲಾಕ್‌ಡೌನ್
  • ನೆರೆ ರಾಜ್ಯದಲ್ಲಿ ಕೊರೋನಾ ಹೆಚ್ಚಳದಿಂದ ಕರ್ನಾಟಕದಲ್ಲಿ ಆತಂಕ

ಚೆನ್ನೈ(ಜು.30): ದಕ್ಷಿಣ ಭಾರತದ ಒಂದೊಂದೆ ರಾಜ್ಯಗಳು ಲಾಕ್‌ಡೌನ್ ವಿಸ್ತರಣೆ ಮಾಡುತ್ತಿದೆ. ಕೇರಳ ಎರಡು ದಿನದ ಲಾಕ್‌ಡೌನ್ ಘೋಷಿಸಿದ ಬೆನ್ನಲ್ಲೇ ಇದೀಗ ತಮಿಳುನಾಡು ಲಾಕ್‌ಡೌನ್ ವಿಸ್ತರಿಸಿದೆ. ತಮಿಳುನಾಡಿನಲ್ಲಿ ಆಗಸ್ಟ್ 9ರ ವರೆಗೆ ಲಾಕ್‌ಡೌನ್ ವಿಸ್ತರಿಸಿದೆ. ಈ ಬೆಳವಣಿಗೆ ಕರ್ನಾಟಕದ ಆತಂಕ ಹೆಚ್ಚಿಸಿದೆ.

ಎಬೋಲಾ, SARS,ಚಿಕನ್‌ಪಾಕ್ಸ್‌ಗಿಂತ ಅಪಾಯಕಾರಿ ಡೆಲ್ಟಾ : 3ನೇ ಅಲೆ ಮುನ್ಸೂಚನೆ!

ಕೇರಳದಲ್ಲಿ ಸತತ 4ನೇ ದಿನ 20,000ಕ್ಕೂ ಹೆಚ್ಚಿನ ಪ್ರಕರಣ ದಾಖಲಾಗಿದೆ. ಕೇರಳದಲ್ಲಿ ಕೊರೋನಾ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇತ್ತ ತಮಿಳುನಾಡಿನಲ್ಲೂ ಕೊರೋನಾ ಇಳಿಕೆಯಾಗುತ್ತಿಲ್ಲ. ಈ ಎರಡು ರಾಜ್ಯಗಳು ಲಾಕ್‌ಡೌನ್ ಮೊರೆ ಹೋಗಿವೆ. ಕೇರಳ ಹಾಗೂ ತಮಿಳುನಾಡಿನ ಜೊತೆ ಗಡಿ ಹಂಚಿಕೊಂಡಿರುವ ಕರ್ನಾಟಕ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

ತಮಿಳುನಾಡಿನ 31 ಜೆಲ್ಲೆಗಳಲ್ಲಿ ಹೊಸ ಕೊರೋನಾ ಪ್ರಕರಣ ಸಂಖ್ಯೆ 100ಕ್ಕೂ ಹೆಚ್ಚು ದಾಖಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ 2,000 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ. ಇಳಿಕೆಯಾಗುತ್ತಿದ್ದ ಕೊರೋನಾ ಪ್ರಕರಣ ನಿಧಾನವಾಗಿ ಏರಿಕೆಯಾಗುತ್ತಿದೆ.

ದೇವರನಾಡಿನಲ್ಲಿ ಮತ್ತೆ ಕೊರೋನಾ ಭೀತಿ, ವೈರಸ್‌ ಹಬ್ಬಲು ಆ ಮೂರು ವಿಚಾರ ಕಾರಣ!

ಕರ್ನಾಟಕದಲ್ಲಿ 28ರಲ್ಲಿ 1,531 ಹೊಸ ಕೊರೋನಾ ಪತ್ತೆಯಾಗಿತ್ತು. ಇನ್ನು ಜುಲೈ 29ಕ್ಕೆ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ನಿನ್ನೆ ಕರ್ನಾಟಕದಲ್ಲಿ 2,052 ಹೊಸ ಕೊರೋನಾ ಪತ್ತೆಯಾಗಿದೆ. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿದೆ.

ಪ್ರತಿ ದಿನ ಕರ್ನಾಟಕದಲ್ಲೂ ಕೊರೋನಾ ಕೇಸ್ ಹೆಚ್ಚಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಒಂದೊಂದೆ ನಿರ್ಬಂಧಗಳು ಕರ್ನಾಟಕದಲ್ಲೂ ಜಾರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

click me!