
ಚೆನ್ನೈ: ತಮಿಳುನಾಡು ಜನರಿಗೆ ಸಿಎಂ ವಿಜಯ್ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಭರ್ಜರಿ ಉಡುಗೊರೆ ನೀಡಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಎಸ್. ಜೋಸೆಫ್ ವಿಜಯ್ ತಾಯಿ ಮಾಮನ್ ತಂಗ ಮೋತಿರಂ ತಿಟ್ಟಂ’ ( Maternal Uncle Gold Ring Scheme:ಸೋದರಮಾವನ ಬಂಗಾರದ ಉಂಗುರ ಯೋಜನೆ) ಎಂಬ ವಿನೂತನ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಉದ್ಘಾಟನೆ ವೇಳೆ ಮಧುರೈನ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವಾರ್ಡ್‌ಗೆ ಭೇಟಿ ನೀಡಿದ ವಿಜಯ್.. 25 ನವಜಾತ ಶಿಶುಗಳಿಗೆ ಬಂಗಾರದ ಉಂಗುರಗಳನ್ನು ವಿತರಿಸಿ ಯೋಜನೆಗೆ ಚಾಲನೆ ನೀಡಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣವನ್ನು ಹೆಚ್ಚಿಸುವುದು. ತಾಯಿ-ಮಗುವಿನ ಆರೋಗ್ಯ ರಕ್ಷಣೆ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅರ್ಹತೆ ಪಡೆದ ನವಜಾತ ಶಿಶುವಿಗೆ 1 ಗ್ರಾಂ ತೂಕದ, 22 ಕ್ಯಾರೆಟ್ ಶುದ್ಧ ಚಿನ್ನದ ಉಂಗುರ ನೀಡಲಾಗುತ್ತದೆ. ಯಾವುದೇ ರೀತಿಯ ಅಕ್ರಮ ಅಥವಾ ದುರ್ಬಳಕೆ ತಡೆಯಲು ಪ್ರತಿಯೊಂದು ಉಂಗುರಕ್ಕೂ ವಿಶಿಷ್ಟ ಸೀರಿಯಲ್ ನಂಬರ್ ಸಿಗಲಿದೆ. ಪ್ಯಾಕಿಂಗ್ ಅನ್ನು ಟ್ಯಾಂಪರ್-ಪ್ರೂಫ್ (ಹಾಳುಮಾಡಲು ಅಸಾಧ್ಯವಾದ) ಕವರ್‌ನಲ್ಲಿ ಸೀಲ್ ಮಾಡಿ ನೀಡಲಾಗುತ್ತದೆ.
ಈ ಯೋಜನೆಗಾಗಿ ಸರ್ಕಾರ ವಾರ್ಷಿಕವಾಗಿ ಬರೋಬ್ಬರಿ ₹755.83 ಕೋಟಿ ರೂಪಾಯಿ ಬಜೆಟ್ ಮೀಸಲಿಟ್ಟಿದೆ. ಆರಂಭಿಕ ಹಂತದ ವಿತರಣೆಗಾಗಿ 1.28 ಲಕ್ಷ ಉಂಗುರಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ಪೂರೈಸಲು ಜೋಯಾಲುಕ್ಕಾಸ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ಜವಾಬ್ದಾರಿ ಪಡೆದುಕೊಂಡಿವೆ.
ಮಗು ಜನಿಸಿದ ಬಳಿಕ ತಾಯಿ ಮತ್ತು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲೇ ಆಸ್ಪತ್ರೆಯಲ್ಲೇ ಉಂಗುರವನ್ ನೀಡಲಾಗತ್ತದೆ. ಈ ಹಿಂದೆ ಜನಿಸಿರುವ ಅರ್ಹ ಮಕ್ಕಳಿಗಾಗಿ ರಾಜ್ಯಾದ್ಯಂತ 107 ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಮಕ್ಕಳಿಗೆ ಉಂಗುರ ವಿತರಿಸಿ ಹಳೆಯ ಬಾಕಿಯನ್ನು ತೀರಿಸಲಾಗುತ್ತದೆ. ಯೋಜನೆಯ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಲು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ನಿಗಾ ಸಮಿತಿ ರಚಿಸಲಾಗಿದೆ.
ತಮಿಳು ಸಂಪ್ರದಾಯದಂತೆ ಸೋದರಮಾವ ನವಜಾತ ಶಿಶುವಿಗೆ ಬಂಗಾರ ನೀಡುವ ಪದ್ಧತಿಯನ್ನು ಸರ್ಕಾರವೇ ಮುನ್ನೆಡೆಸಿದೆ. ಬಡ ಕುಟುಂಬಗಳ ಹೆಗಲಿಗೆ ನಿಂತು ಸುರಕ್ಷಿತ ಸರ್ಕಾರಿ ಹೆರಿಗೆಗಳನ್ನು ಉತ್ತೇಜಿಸುವ ಜತೆಗೆ ತಾಯಿ-ಮಗುವಿನ ಆರೋಗ್ಯ ರಕ್ಷಣೆಗೆ ಈ ಯೋಜನೆ ಹೊಸ ಭರವಸೆ ಮೂಡಿಸಿದೆ.
STORY | TN CM Vijay launches one-gram gold ring scheme for newborns
Tamil Nadu Chief Minister C Joseph Vijay on Monday launched the 22-carat one-gram gold ring scheme - Maternal Uncle Gold Ring Scheme (Thaaimaman Thanga Mothiram Thittam) - for newborn babies, fulfilling a key… pic.twitter.com/OZf3a2uSpk— Press Trust of India (@PTI_News) September 28, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ