
ಚೆನ್ನೈ (ಏ.13): ಹಿಂದಿ ಹೇರಿಕೆಯನ್ನು (Hindi imposition) ತಮಿಳುನಾಡು ಬಿಜೆಪಿ (Tamil Nadu BJP) ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ತಮಿಳುನಾಡು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಅಣ್ಣಾಮಲೈ (Annamalai ) ಹೇಳಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (ಸಿಯುಇಟಿ) ವಿರುದ್ಧ ಏಪ್ರಿಲ್ 11 ರಂದು ತಮಿಳುನಾಡು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಬಗ್ಗೆಯೂ ಅಣ್ಣಾಮಲೈ ಮಾತನಾಡಿದ್ದಾರೆ. ತಮಿಳು ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ, ಅದನ್ನು 2010 ರಲ್ಲಿ ಸಿಯುಸಿಇಟಿಯಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
'ಪ್ರವೇಶ ಪರೀಕ್ಷೆಯು ನಮ್ಮ ವಿದ್ಯಾರ್ಥಿಗಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ನಿರ್ಣಯವು ಹೇಳಿದೆ. ಆದರೆ 2019 - 2020 ರಲ್ಲಿ, ಪಠ್ಯಕ್ರಮವನ್ನು ನವೀಕರಿಸಲಾಗಿದೆ ಮತ್ತು ಎನ್ ಸಿಇಆರ್ ಟಿ ಪಠ್ಯಕ್ರಮಕ್ಕೆ ಸಮನಾಗಿರುತ್ತದೆ ಮತ್ತು ವಿದ್ಯಾರ್ಥಿಗಳು ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕೇಂದ್ರವನ್ನು ದೂಷಿಸುವ ಈ ಏಕಪಕ್ಷೀಯ ನಿರ್ಣಯವನ್ನು ವಿಧಾನಸಭೆಯಲ್ಲಿ ಹೇಗೆ ಅಂಗೀಕರಿಸಲಾಯಿತು? ಅಣ್ಣಾಮಲೈ ಪ್ರಶ್ನೆ ಮಾಡಿದ್ದಾರೆ.
ಇತ್ತೀಚಿನ ‘ಭಾಷಾ ಯುದ್ಧ’ದ ಕುರಿತು ಪ್ರತಿಕ್ರಿಯಿಸಿದ ಅಣ್ಣಾಮಲೈ, ತಮ್ಮ ಪಕ್ಷ ಹಿಂದಿ ಹೇರಿಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾವು ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳುವುದಿಲ್ಲ ಅಥವಾ ರಾಜ್ಯದಲ್ಲಿ ಅನುಮತಿಸುವುದಿಲ್ಲ ಇದರಲ್ಲಿ ತಮಿಳುನಾಡು ಬಿಜೆಪಿ ನಿರ್ಧಾರ ಸ್ಪಷ್ಟವಾಗಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ. 1965 ರಲ್ಲಿ ಕಾಂಗ್ರೆಸ್, ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಬೇಕೆಂದು ಕಾನೂನನ್ನು ತಂದಿತು ಮತ್ತು 1986 ರಲ್ಲಿ ಮತ್ತೊಮ್ಮೆ ಎರಡನೇ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆಗೆ ಪ್ರಯತ್ನಿಸಲಾಯಿತು ಎಂದು ಅವರು ಹೇಳಿದರು.
ಕಾಂಗ್ರೆಸ್ 40 ವರ್ಷಗಳಿಂದ ಹಿಂದಿ ಭಾಷೆಯ ವಿಷಯದಲ್ಲಿ ರಾಜಕೀಯ ಮಾಡಿದೆ ಆದರೆ ಪ್ರಧಾನಿ ನರೇಂದ್ರ ಮೋದಿ (Prime Minister Modi) ಅವರು ಹಿಂದಿಯನ್ನು ಮುಖ್ಯ ಭಾಷೆಯನ್ನಾಗಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಗೆ ಅನುಮೋದನೆ ನೀಡಿರಲಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ. ಹಿಂದಿಯನ್ನು ಐಚ್ಛಿಕ ಭಾಷೆಯನ್ನಾಗಿ ಮಾಡಿದ ಅಂತಿಮ ವರದಿಯನ್ನು ಸಂಪುಟ ಪರಿಶೀಲಿಸಿದ ನಂತರವೇ ಅವರು (ಮೋದಿ) ಅನುಮತಿ ನೀಡಿದರು.
ತಮಿಳು ಸಂಪರ್ಕ ಭಾಷೆಯಾಗಬೇಕು ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ( Oscar-winning musician) ಎಆರ್ ರೆಹಮಾನ್ ( AR Rahman) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಐಪಿಎಸ್ ಅಧಿಕಾರಿ (former IPS officer), 'ತಮಿಳು ಭಾರತದ ಸಂಪರ್ಕ ಭಾಷೆಯಾದರೆ, ಅದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಆದರೆ, ತಮಿಳು ಭಾಷೆ ಈ ಸ್ಥಾನವನ್ನು ಏರುವ ನಿಟ್ಟಿನಲ್ಲಿ ನಾವೇನಾದರೂ ಪ್ರಯತ್ನಗಳನ್ನು ಮಾಡಿದ್ದೇವೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ತಮಿಳನ್ನು ಸಂಪರ್ಕ ಭಾಷೆಯನ್ನಾಗಿ ಮಾಡಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮೊದಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಬೇಕು, ಆಯಾ ರಾಜ್ಯಗಳ ಕನಿಷ್ಠ 10 ಶಾಲೆಗಳಲ್ಲಿ ಸಂಪೂರ್ಣವಾಗಿ ತಮಿಳಿನಲ್ಲಿ ಕಲಿಸುವಂತೆ ಕೇಳಿಕೊಳ್ಳಬೇಕೆಂದು ಬಿಜೆಪಿ ನಾಯಕ ಹೇಳಿದರು. ಇದಲ್ಲದೆ, ಇದರ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಅವರಿಗೆ ಭರವಸೆ ನೀಡಬೇಕು ಎಂದು ಹೇಳಿದ್ದಾರೆ. ಇತ್ತೀಚೆಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಭಾರತದಲ್ಲಿ ಭಿನ್ನ ರಾಜ್ಯಗಳ ನಾಗರೀಕರು ವ್ಯವಹಾರ ನಡೆಸುವಾಗ ಇಂಗ್ಲೀಷ್ ನಂಥ ವಿದೇಶಿ ಭಾಷೆಗಳ ಬದಲಾಗಿ, ನಮ್ಮದೇ ಆದ ಹಿಂದಿ ಭಾಷೆಯನ್ನು ಹೆಚ್ಚಾಗಿ ಬಳಸಬೇಕು ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ವಿವಾದ ಆರಂಭವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ