
ವಯನಾಡು (ಏಪ್ರಿಲ್ 12, 2023): ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದ ಮಾನಮಷ್ಟಮೊಕದ್ದಮೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಪಟ್ಟು ಸಂಸದ ಸ್ಥಾನ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ ಮಂಗಳವಾರ ತಮ್ಮ ಲೋಕಸಭಾ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದರು. ಈ ವೇಳೆ ಅವರನ್ನು ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಬಳಿಕ ಸೋದರಿ ಪ್ರಿಯಾಂಕಾ ಜೊತೆಗೂಡಿ ‘ಸತ್ಯಮೇವ ಜಯತೆ’ ಹೆಸರಿನಲ್ಲಿ ಕಲ್ಪೆಟ್ಟಾದಲ್ಲಿ ರೋಡ್‌ಶೋ ನಡೆಸಿದರು.
ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ (Rahul Gandhi) ‘ಸಂಸತ್ತಿನ ಸದಸ್ಯ ಎಂಬುದು ಕೇವಲ ಒಂದು ಟ್ಯಾಗ್. ಅದೊಂದು ಹುದ್ದೆ. ಬಿಜೆಪಿ (BJP) ಆ ಟ್ಯಾಗ್, ಹುದ್ದೆ, ಮನೆಯನ್ನು (House) ಕಿತ್ತುಕೊಳ್ಳಬಹುದು. ಅವರು (ಬಿಜೆಪಿ) ನನ್ನನ್ನು ಜೈಲಿಗೂ (Jail) ಹಾಕಬಹುದು. ಆದರೆ ಇದ್ಯಾವುದು ಸಹ ನಾನು ವಯನಾಡನ್ನು (Wayanad) ಪ್ರತಿನಿಧಿಸುವುದರಿಂದ ದೂರ ಮಾಡದು. ಇಷ್ಟು ವರ್ಷಗಳಾದರೂ ಸಹ ಬಿಜೆಪಿ ತನ್ನ ಪ್ರತಿಸ್ಪರ್ಧಿಯನ್ನು ಅರ್ಥ ಮಾಡಿಕೊಳ್ಳದೇ ಇರುವುದು ನನಗೆ ಆಶ್ಚರ್ಯ ಉಂಟು ಮಾಡಿದೆ. ವಿರೋಧಿಗಳನ್ನು ಹೆದರಿಸಲು ಸಾಧ್ಯವಿಲ್ಲ ಎಂಬುದು ಬಿಜೆಪಿ ಇನ್ನೂ ಅರ್ಥವಾಗಿಲ್ಲ. ನನ್ನ ಮನೆಗೆ ಪೊಲೀಸರನ್ನು ಕಳುಹಿಸುವುದರಿಂದ ಅಥವಾ ನನ್ನ ಮನೆಯನ್ನು ಕಿತ್ತುಕೊಳ್ಳುವುದರಿಂದ ನಾನು ಹೆದರಿಕೊಳ್ಳುತ್ತೇನೆ ಎಂದು ಅವರು ಭಾವಿಸಿದಂತಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನು ಓದಿ: ರಾಹುಲ್ ಗಾಂಧಿ ವಿರುದ್ಧ ತೀರ್ಪಿತ್ತ ಜಡ್ಜ್ ನಾಲಿಗೆ ಕಟ್: ಕಾಂಗ್ರೆಸ್ ನಾಯಕ ಬೆದರಿಕೆ
ಜೈಲು ಶಿಕ್ಷೆಗೆ ತಡೆ ಕೋರಿದ್ದ ರಾಹುಲ್ ಗಾಂಧಿ ಅರ್ಜಿಗೆ ಮೋದಿ ಆಕ್ಷೇಪ: ನಾಳೆ ವಿಚಾರಣೆ
ಸೂರತ್: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ (Criminal Defamation Case) ಸಂಬಂಧಿಸಿದಂತೆ ಶಿಕ್ಷೆಗೆ (Punishment) ತಡೆ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯಕ್ಕೆ (Surat Court) ಸಲ್ಲಿಸಿದ್ದ ಅರ್ಜಿಗೆ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ (Purnesh Modi) ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರ ವಿಚಾರಣೆ ಗುರುವಾರ ನಡೆಯಲಿದೆ. ಮಂಗಳವಾರ ಸೂರತ್ ನ್ಯಾಯಾಲಯದ ಎದುರು ಹಾಜರಾದ ಪೂರ್ಣೇಶ್ ಮೋದಿ 30 ಪುಟಗಳ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ಶಿಕ್ಷೆಗೆ ತಡೆ ನೀಡುವುದಕ್ಕೆ ಆಕ್ಷೇಪಣೆಯನ್ನು ನಾವು ಸಲ್ಲಿಸಿದ್ದೇವೆ ಎಂದು ಪೂರ್ಣೇಶ್ ಮೋದಿ ಅವರ ವಕೀಲ ರೇಷ್ಮಾವಾಲ ತಿಳಿಸಿದ್ದಾರೆ.
ಇದನ್ನೂ ಓದಿ: Rahul Gandhi Defamation Case: ಕಾಂಗ್ರೆಸ್ ನಾಯಕನಿಗೆ ಜಾಮೀನು, ಏ.13ಕ್ಕೆ ಮುಂದಿನ ವಿಚಾರಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ