
ಬೆಂಗಳೂರು (ಜೂ. 25): ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಮೇಲೆ ರಾಜ್ಯದಲ್ಲಿ ನಿಷೇಧ ಉಂಟಾಗುತ್ತಿದ್ದಂತೆ, ಇದೀಗ ಕೇಂದ್ರ ಸಾರಿಗೆ ಸಚಿವಾಲಯದ ಹೊಸ ನಿರ್ಧಾರದಿಂದ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೂ ಶಾಕ್ ಕೊಡುವ ಸಾಧ್ಯತೆಯಿದೆ. ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದಂತೆ ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಮಾರ್ಗಸೂಚಿಯು ಗಿಗ್ ಉದ್ಯೋಗಿಗಳಿಗೆ ತೀವ್ರ ಆತಂಕ ಉಂಟುಮಾಡಿದೆ.
ಖಾಸಗಿ ವಾಹನದ ದುರ್ಬಳಕೆ ಮೇಲೆ ತಡೆ:
ಕೇಂದ್ರ ಸಾರಿಗೆ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ನೀಡಿರುವ ಅಧಿಸೂಚನೆಯಲ್ಲಿ, ಖಾಸಗಿ ನೋಂದಾಯಿತ ಬೈಕ್‌ಗಳನ್ನು ವಾಣಿಜ್ಯ ವಿತರಣಾ ಉದ್ದೇಶಗಳಿಗೆ ಬಳಸುವುದು ಸಾರಿಗೆ ನಿಯಮ ಉಲ್ಲಂಘನೆಯಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಇದು ರ್ಯಾಪಿಡೋ ಮಾದರಿಯ ಸೇವೆಗಷ್ಟೇ ಸೀಮಿತವಲ್ಲ, ಭವಿಷ್ಯದಲ್ಲಿ ಆಹಾರ ಹಾಗೂ ಇ-ಕಾಮರ್ಸ್ ವಿತರಣಾ ಸೇವೆಗಳಿಗೂ ಅನ್ವಯಿಸಬಹುದಾದ ಘೋಷಣೆಯಾಗಿದೆ.
ಅನೇಕ ಅಡಚಣೆಗಳಿಗೆ ಕಾರಣವಾಗುತ್ತಿರುವ ಡೆಲಿವರಿ ಬೈಕ್ ಬಳಕೆ:
ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದ ಪ್ಲಾಟ್‌ಫಾರ್ಮ್‌ಗಳಿಗೆ ತನ್ನ ಖಾಸಗಿ ಬೈಕ್‌ಗಳ ಮೂಲಕ ವಿತರಣಾ ಕೆಲಸ ನಿರ್ವಹಿಸುತ್ತಿದ್ದ ಲಕ್ಷಾಂತರ ಗಿಗ್ ಉದ್ಯೋಗಿಗಳಿಗೆ ಇದು ಆರ್ಥಿಕ ಆತಂಕವನ್ನು ತಂದಿಟ್ಟಿದೆ. ಇವರಲ್ಲಿ ಹಲವರು ದಿನಗೂಲಿ ಆದಾಯವನ್ನು ಈ ಸೇವೆಗಳಲ್ಲಿಯೇ ನಿರೀಕ್ಷಿಸುತ್ತಿದ್ದರು. ಈ ಸಂಬಂಧ ಕೇಂದ್ರ ಸಾರಿಗೆ ಸಚಿವಾಲಯ ರಾಜ್ಯ ಸಾರಿಗೆ ಇಲಾಖೆಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದು, ರಾಜ್ಯ ಸರ್ಕಾರಗಳು ತಕ್ಷಣವೇ ಕ್ರಮ ಕೈಗೊಂಡರೆ ಇಡೀ ಗಿಗ್ ಎಕೋಸಿಸ್ಟಮ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವ ವಿಚಾರಕ್ಕೆ ಬ್ರೇಕ್ ಹಾಕಿರುವ ಕೇಂದ್ರದ ಈ ನಿರ್ಧಾರ, ಒಂದು ಕಡೆ ಸಾರ್ವಜನಿಕರ ಸುರಕ್ಷತೆಗಾಗಿ ಒಳ್ಳೆಯ ಕ್ರಮವಷ್ಟೇ ಆದರೆ, ಇನ್ನೊಂದು ಕಡೆ ಲಕ್ಷಾಂತರ ಗಿಗ್ ಉದ್ಯೋಗಿಗಳ ಬದುಕಿಗೆ ಚಿಂತೆ ಮೂಡಿಸುವಂತಿದೆ. ಮುಂದಿನ ದಿನಗಳಲ್ಲಿ ಈ ವಿಷಯವು ಮತ್ತಷ್ಟು ಚರ್ಚೆಗೆ ಕಾರಣವಾಗುವುದು ಖಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ