'ನನ್ನ ಹತ್ರ ಟೈಮ್‌ ಇಲ್ಲ..' ಆರ್ಡರ್‌ ಡೆಲಿವರಿ ಮಾಡಲು ನಿರಾಕರಿಸಿದ ಸ್ವಿಗ್ಗಿ ಏಜೆಂಟ್‌!

By Santosh NaikFirst Published Feb 8, 2024, 11:28 PM IST
Highlights

ಸ್ವಿಗ್ಗಿ ಡೆಲಿವರಿ ಏಜೆಂಟ್‌ ಒಬ್ಬ ಗ್ರಾಹಕರ ಆರ್ಡರ್‌ಅನ್ನು ಡೆಲಿವರಿ ಮಾಡಲು ನಿರಾಕರಿಸಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆತ ನನ್ನ ಬಳಿ ಈಗ ಟೈಮ್‌ ಇಲ್ಲ ಎಂದು ಹೇಳಿರುವುದು ವೈರಲ್‌ ಆಗಿದೆ.
 

ನವದೆಹಲಿ (ಫೆ.8): ತನ್ನ ಮಕ್ಕಳಿಗಾಗಿ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿದ ಬಳಿಕ ತನಗಾದ ಸಂಕಷ್ಟದ ಬಗ್ಗೆ ಮಹಿಳೆಯೊಬ್ಬರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ನೇಹಾ ಹೆಸರಿನ ಮಹಿಳೆ ಇತ್ತೀಚೆಗೆ ಸ್ವಿಗ್ಗಿಯಲ್ಲಿ ತನ್ನ ಮಕ್ಕಳಿಗಾಗಿ ವಡಾ ಪಾವ್‌ ಹಾಗೂ ರೋಲ್‌ ಅನ್ನು ಆರ್ಡರ್‌ ಮಾಡಿದ್ದರು. ಆದರೆ, ಸ್ವಿಗ್ಗಿ ಡೆಲಿವರಿ ಬಾಯ್‌ ಇದನ್ನು ತಲುಪಿಸಲು ನಿರಾಕರಿಸಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಿಮ್ಮ ಮನೆಗೆ ಬಂದು ಡೆಲಿವರಿ ಮಾಡಲು ನನಗೆ ಸಮಯವಿಲ್ಲ ಎಂದು ಹೇಳಿದ್ದಾನೆ ಎನ್ನುವುದು ವೈರಲ್‌ ಆಗಿದೆ. ಬಳಿಕ ತನ್ನ ಮಕ್ಕಳು ವಡಾಪಾವ್‌ ಹಾಗೂ ರೋಲ್‌ ಆಸೆಯನ್ನು ಬಿಟ್ಟು ಮ್ಯಾಗಿಯನ್ನೇ ತಿಂದಿದ್ದಾರೆ ಎಂದು ಮಹಿಳೆ ಬರೆದುಕೊಂಡಿದ್ದಾಳೆ. 'ನಾನಿ ಇತ್ತೀಚೆಗೆ ಸ್ವಿಗ್ಗಿಯಲ್ಲಿ ಕೆಲವು ಆರ್ಡರ್‌ ಮಾಡಿದ್ದೆ. ಆದರೆ, ನಾನು ಈ ಆರ್ಡರ್‌ಅನ್ನು ಸ್ವೀಕರಿಸಲೇ ಇಲ್ಲ. ನಿಮ್ಮ ಡೆಲಿವರಿ ಏಜೆಂಟ್‌ ಈ ಆರ್ಡರ್‌ಅನ್ನು ಡೆಲಿವರಿ ಮಾಡಲು ನಿರಾಕರಿಸಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ;ನನ್ನ ಬಳಿ ಈಗ ಟೈಮ್‌ ಇಲ್ಲ. ನಿಮಗೇನು ಅನಿಸತ್ತೋ ಅದನ್ನು ಮಾಡಿ. ನಿಮ್ಮ ಆರ್ಡರ್‌ಅನ್ನು ನಾನು ತರೋದಿಲ್ಲ ಎಂದು ಹೇಳಿದ್ದಾನೆ. ಈಗ ನಾನೇನು ಮಾಡಲಿ?' ಎಂದು ಮಹಿಳೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾಳೆ.

ನೇಹಾ ಅವರ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ತಕ್ಷಣವೇ ವೈರಲ್‌ ಆಗಿದ್ದು, ಸಾಕಷ್ಟು ತಮಾಷೆಯ ಕಾಮೆಂಟ್‌ಳು ಕೂಡ ಬಂದಿವೆ. 100 ರೂಪಾಯಿಗೆ ವಡಾಪಾವ್‌ ಖರೀದಿ ಮಾಡೋದು ಅಪರಾಧ ಹಾಗೂ ಪಾಪ. ಈ ಪಾಪಕ್ಕೆ ನೀವು ಪ್ರಾಯಶ್ಚಿತ ಪಡೆದುಕೊಳ್ಳುತ್ತೀದ್ದೀರಿ ಎಂದು ಒಬ್ಬರು ತಮಾಷೆಯಾಗಿ ಟ್ವೀಟ್‌ ಮಾಡಿದ್ದಾರೆ.

"ಈ ರೀತಿಯ ವಿಷಯವು ಸ್ವಿಗ್ಗಿಯಲ್ಲಿ ಸಾಮಾನ್ಯವಾಗಿದೆ ಮತ್ತು ವರ್ಷಗಳಿಂದ ನಡೆಯುತ್ತಿದೆ. ಡೆಲಿವರಿ ಮಾಡುವ ವ್ಯಕ್ತಿಗಳು ಆರ್ಡರ್ ಅನ್ನು ಡೆಲಿವರಿ ಮಾಡಿದ/ರದ್ದು ಮಾಡಿರುವುದನ್ನು ಗುರುತಿಸುತ್ತಾರೆ ಮತ್ತು ನಂತರ ಆಹಾರದೊಂದಿಗೆ ಓಡಿಹೋಗುತ್ತಾರೆ, ಆದರೆ ಸ್ವಿಗ್ಗಿ ನೀವು ಆರ್ಡರ್ ಅನ್ನು ರದ್ದುಗೊಳಿಸಿದ್ದೀರಿ ಮತ್ತು ಅದಕ್ಕೆ ಹಣ ಪಾವತಿ ಮಾಡುವಂತೆ ಮಾಡುತ್ತದೆ," ಎಂದು ಇನ್ನೊಬ್ಬರು ಬರೆದಿದ್ದಾರೆ.

ಸ್ಯಾಫ್‌ ಫುಟ್‌ಬಾಲ್‌ ಫೈನಲ್‌ನಲ್ಲಿ ಗೆದ್ದು ಸೋತ ಭಾರತ, ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯ್ತು ಪಂದ್ಯ!

ವೈರಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಸ್ವಿಗ್ಗಿ, ದೂರವಾಣಿ ಕರೆಯಲ್ಲಿ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಹೇಳಿದೆ. ಕಂಪನಿಯು  ಬಗ್ಗೆ ತಿಳಿಸಿದ್ದು, ನಮ್ಮ ತಂಡವು ಇದನ್ನು ಫೋನ್‌ ಕರೆಯ ಮೂಲಕ ಪರಿಹರಿಸಿರಬಹುದೆಂದು ಭಾವಿಸುತ್ತೇವೆ. ನಿಮಗೆ ಏನಾದರೂ ಅಗತ್ಯವಿದ್ದರೆ ನಾವು ಇಲ್ಲಿಯೇ ಇದ್ದೇವೆ. ಸಹಾಯ ಮಾಡುತ್ತೇವೆ' ಎಂದು ತಿಳಿಸಿದೆ.

8 ವರ್ಷ ಕಾಲ 7 ಲಕ್ಷ ಬೆಂಕಿಕಡ್ಡಿ ಬಳಸಿ ನಿರ್ಮಿಸಿದ್ದ ಐಫೆಲ್‌ ಟವರ್‌ಗೆ 'ಗಿನ್ನೀಸ್‌ ವರ್ಲ್ಡ್‌ ರೆಕಾರ್ಡ್‌' ಮಿಸ್‌!

click me!