ಮಾಧ್ಯ,ಮಗಳ ಪೋಟೋ ದಾಳಿಗೆ ಹೆದರಿ ಆಸ್ಪತ್ರೆಯಿಂದ ಓಡಿಹೋದ ಕರೋನಾ ಶಂಕಿತ/ ಮತ್ತೆ ಹುಡುಕಿ ಕರೆತಂದ ಆಸ್ಪತ್ರೆ ಸಿಬ್ಬಂದಿ/ ಇದೊಂದು ವಿಚಿತ್ರ ಪ್ರಕರಣ
ಪಂಜಾಬ್[ಮಾ. 04] ದುಬೈನಿಂದ ಹಿಂದಿರುಗಿದ್ದ ಕರೋನಾ ವೈರಸ್ ಶಂಕಿತನೊಬ್ಬ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿರುವುದು ಆತಂಕಕ್ಕೆ ದಾರಿ ಮಾಡಿ ಕೊಟ್ಟಿತ್ತು.
ಮೊಗಾದ ನಿವಾಸಿಯಾಗಿದ್ದವ ದುಬೈನಿಂದ ಹಿಂದಿರುಗಿದ್ದ. ಕೊರೋನಾ ಶಂಕಿತ ಅನುಮಾನದ ಮೇಲೆ ಸ್ಥಳೀಯ ಆಸ್ಪತ್ರೆಗೆ ಪರೀಕ್ಷೆಗೆಂದು ಬಂದಿದ್ದ. ಈ ವೇಳೆ ಮಾಧ್ಯಮದವರು ಪೋಟೋ ಕ್ಲಿಕ್ಕಿಸಿದ ಕಾರಣ ಗಲಿಬಿಲಿಗೊಂಡವ ಕಾಲು ಕಿತ್ತಿದ್ದಾನೆ.
ಆದರೆ ಇದಾದ ಕೆಲವು ಗಂಟೆಗಳ ನಂತರ ಹಿಂದಕ್ಕೆ ಬಂದು ಕಫ ಸೇರಿದಂತೆ ಇತರ ಸ್ಯಾಂಪಲ್ ನೀಡಿದ್ದಾನೆ. ಈತನ ಹೆಚ್ಚಿನ ಆರೈಕೆಗೂ ಆಸ್ಪತ್ರೆ ಕ್ರಮ ತೆಗೆದುಕೊಂಡಿದೆ.
ಕೊರೋನಾಗೆ ಸಂಬಂಧಿಸಿದ ವಾರ್ಡ್ ಗೆ ಅಡ್ಮಿಟ್ ಆಗಲು ಆತ ಮೊದಲು ಒಪ್ಪಿರಲಿಲ್ಲ. ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರು ಆತನ ಮನೆಗೆ ತೆರಳಿ ಒಪ್ಪಿಸಿಕೊಂಡು ಕರೆದುಕೊಂಡು ಬರಬೇಕಾಯಿತು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.