ಪಿಂಚಣಿ ಕುರಿತು ಮಹತ್ವದ ಆದೇಶ, ಉದ್ಯೋಗಿಗಳ ಪರ ತೀರ್ಪು ನೀಡಿದ ಸುಪ್ರೀಂ ಕೋರ್ಟ್!

Published : Nov 04, 2022, 04:47 PM IST
ಪಿಂಚಣಿ ಕುರಿತು ಮಹತ್ವದ ಆದೇಶ, ಉದ್ಯೋಗಿಗಳ ಪರ ತೀರ್ಪು ನೀಡಿದ ಸುಪ್ರೀಂ ಕೋರ್ಟ್!

ಸಾರಾಂಶ

ಉದ್ಯೋಗಿಗಳ ಪಿಂಚಣಿ ತಿದ್ದುಪಡಿ ಯೋಜನೆ ಕುರಿತು ಎದ್ದಿದ್ದ ಅಪಸ್ವರ ದೂರವಾಗಿದೆ. ಇಂದು ಸುಪ್ರೀಂ ಕೋರ್ಟ್ ಈ ಯೋಜನೆಯನ್ನು ಎತ್ತಿಹಿಡಿದೆ. ಯೋಜನೆ ಸೇರ್ಪಡೆ ಕಾಲಮಿತಿಯನ್ನು ವಿಸ್ತರಿಸಲಾಗಿದೆ. ಏನಿದು ಪಿಂಚಣಿ ತಿದ್ದುಪಡಿ 2014, ಸುಪ್ರೀಂ ಕೋರ್ಟ್ ಆದೇಶದಿಂದ ಉದ್ಯೋಗಿಗಳಿಗೆ ಆಗುವ ಲಾಭವೇನು?

ನವದೆಹಲಿ(ನ.04):  ಉದ್ಯೋಗಿಗಳ ಪಿಂಚಣಿ 2014ರ ತಿದ್ದುಪಡಿ ಯೋಜನೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದೆ. ಕೆಲ ಅಂಶಗಳನ್ನು ಕೈಬಿಟ್ಟಿರುವ ಸುಪ್ರೀಂ ಕೋರ್ಟ್ ಉದ್ಯೋಗಿಗಳು ಈ ಯೋಜನೆಗೆ ಸೇರಿಕೊಳ್ಳಲು ಇರುವ ಕಾಲಮಿತಿಯನ್ನು ವಿಸ್ತರಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ಇದರಿಂದ ಈ ಯೋಜನೆಯ ಲಾಭ ಪಡೆಯಲು ಉದ್ಯೋಗಿಗಳೆ ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಇದೀಗ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ಸಲ್ಲಿಸಲು ಅವಕಾಶ ಸಿಕ್ಕಿದೆ. ಇಷ್ಟೇ ಅಲ್ಲ ಭವಿಷ್ಯದಲ್ಲಿ ಸ್ವಾವಲಂಬಿಯಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದೆ. 

ಉದ್ಯೋಗಿಗಳ ಪಂಚಿಣಿ ತಿದ್ದುಪಡೋ ಯೋಜನೆ 2014 ಭಾರಿ ವಿವಾದಕ್ಕೆ ಕಾರಣವಾಗಿತ್ತು. ತಿದ್ದುಪಡಿ ಮೂಲಕ ತಂದ ಈ ಪಿಂಚಣಿ ಯೋಜನೆಯನ್ನು ಕೇರಳ ಹೈಕೋರ್ಟ್ ವಜಾ ಮಾಡಿತ್ತು. ಆದರೆ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀ ಕೋರ್ಟ್ ಪಿಂಚಣಿ ತಿದ್ದುಪಡಿ 2014ರ ಯೋಜನೆಯನ್ನು ಎತ್ತಿಹಿಡಿದಿದೆ. ಇಷ್ಟೇ ಅಲ್ಲ ಕೇರಳ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿದೆ. ಜಸ್ಟೀಸ್ ಅನಿರುದ್ಧ ಬೋಸೆ ಹಾಗೂ ಜಸ್ಟೀಸ್ ಸುಧಾಂಶು ದುಲಿಯಾ ನೇತೃತ್ವದ ದ್ವಿಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಕೇಂದ್ರ ಸರ್ಕಾರಿ ಪಿಂಚಣಿದಾರರ ಡಿಆರ್ ಶೇ.396ಕ್ಕೆ ಹೆಚ್ಚಳ; ಆದ್ರೆ ಇವರಿಗೆ ಮಾತ್ರ ಅನ್ವಯ

2014ರ ಉದ್ಯೋಗಿಗಳ ಪಿಂಚಣಿ ತಿದ್ದುಪಡಿ ಯೋಜನೆ ಕಾನೂನುಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಇದೀಗ ಯೋಜನೆ ಕುರಿತು ಮಾಹಿತಿ ಇಲ್ಲದ ಅಥವಾ ಸ್ಪಷ್ಟತೆ ಇಲ್ಲದ ಉದ್ಯೋಗಿಗಳು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಇರುವ ಕಾಲಾವತಿಯನ್ನು ಹೆಚ್ಚುವರಿಯಾಗಿ 4 ತಿಂಗಳು ವಿಸ್ತರಿಸಲಾಗಿದೆ.  ಸೆಪ್ಟೆಂಬರ್ 1, 2014ರ ಮೊದಲು ನಿವೃತ್ತಿ ಹೊಂದಿದ ಉದ್ಯೋಗಿಗಳು, ಪಿಂಚಣಿ ತಿದ್ದುಪಡಿ ಯೋಜನೆ ಬಳಸಿಕೊಳ್ಳಲು  ಅವಕಾಶವಿಲ್ಲ. ತಿದ್ದುಪಡಿಯ 11(3) ಕಲಂನಲ್ಲಿ ಉಲ್ಲೇಖಿಸಿರುವಂತೆ ಈ ಯೋಜನೆ ಸೌಲಭ್ಯಪಡೆಯಲು ಅರ್ಹರಾಗಿರುವುದಿಲ್ಲ. ಈ ಯೋಜನೆಯನ್ನು ಎಲ್ಲಾ ಕಂಪನಿಗಳು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

2018ರಲ್ಲಿ ಕೇರಳ ಹೈಕೋರ್ಟ್ ಪಿಂಚಣಿ ತಿದ್ದುಪಡಿ 2014ರ ಯೋಜನೆಯನ್ನು ವಜಾ ಮಾಡಿತ್ತು. ತಿಂಗಳಿಗೆ 15,000 ಮಿತಿಗಿಂತ ಹೆಚ್ಚಿನ ವೇತನಕ್ಕೆ ಅನುಗುಣವಾಗಿ ಪಿಂಚಣಿ ಪಾವತಿಸಲು ಅವಕಾಶ ನೀಡಿತ್ತು. ಇಷ್ಟೇ ಅಲ್ಲ ಈ ಯೋಜನೆಗೆ ಸೇರಿಕೊಳ್ಳಲು ಯಾವುದೇ ಕಾಲಮಿತಿ ಇರುವಂತಿಲ್ಲ ಎಂದಿತ್ತು.

Personal Finance: ಪತ್ನಿ ಭವಿಷ್ಯ ಭದ್ರವಾಗ್ಬೇಕೆಂದ್ರೆ ಮಾಡಿ ಇಲ್ಲಿ ಹೂಡಿಕೆ

1995ರಲ್ಲಿ ಇಪಿಎಸ್(ಉದ್ಯೋಗಿಗಳ ಪಿಂಚಣಿ ಯೋಜನೆ) ಆರಂಭಿಸಲಾಯಿತು.  ಈ ವೇಳೆ ಪಿಂಚಣಿ ನೀತಿಯ  11 (3) ಕಲಂ ಪ್ರಕಾರ ಪಿಂಚಣಿ ವೇತನವನ್ನು 5,000 ರೂಪಾಯಿಗೆ ಸೀಮಿತಗೊಳಿಸಿತ್ತು. 2001ರಲ್ಲಿ 6,500 ರೂಪಾಯಿಗೆ ಹೆಚ್ಚಿಸಲಾಗಿತ್ತು.  ಉದ್ಯೋಗದಾತ ಮತ್ತು ಉದ್ಯೋಗಿಗೆ ತಿಂಗಳಿಗೆ ₹ 5,000 ಅಥವಾ ₹ 6,500 ಕ್ಕಿಂತ ಹೆಚ್ಚಿನ ಸಂಬಳದ ಕೊಡುಗೆಗಾಗಿ ಆಯ್ಕೆಯನ್ನು ಅನುಮತಿಸುತ್ತದೆ. . ಪೂರ್ಣ ವೇತನದ ಮೇಲಿನ ಅಂತಹ ಕೊಡುಗೆಯ 8.33 ಪ್ರತಿಶತವನ್ನು ಪಿಂಚಣಿ ನಿಧಿಗೆ ರವಾನೆ ಮಾಡಬೇಕಾಗಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ
ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ