
ನವದೆಹಲಿ (ಆ.5): ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಸಂಭವಿಸಿದ ಅಪಘಾತ ಪ್ರಕರಣದ ವಿಚಾರಣೆ ಉತ್ತರಪ್ರದೇಶದ ಫರೂಖಾಬಾದ್ ಮೋಟಾರು ವಾಹನ ನ್ಯಾಯಾಧಿಕರಣದಲ್ಲಿ ನಡೆಯುತ್ತಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಚ್ ವಜಾ ಮಾಡಿದೆ. ‘ಭಾಷಾ ಸಮಸ್ಯೆ ಕಾರಣ ಬಂಗಾಳಕ್ಕೇ ಪ್ರಕರಣ ವರ್ಗಾಯಿಸಬೇಕು’ ಎಂದು ಆರೋಪಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿರುವ ಕೋರ್ಚ್, ‘ಹಿಂದಿ ರಾಷ್ಟ್ರಭಾಷೆ. ಅದರಲ್ಲಿ ವಿಚಾರಣೆ ನಡೆದರೆ ಅಡ್ಡಿಯಿಲ್ಲ’ ಎಂದು ಈ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಿಲಿಗುರಿಯಲ್ಲಿ ವಾಹನ ಅಪಘಾತವೊಂದು ಸಂಭವಿಸಿತ್ತು. ಆದರೆ ಅಪಘಾತದ ಸಂತ್ರಸ್ತರು ಉತ್ತರ ಪ್ರದೇಶದವರು. ಹೀಗಾಗಿ ಅವರು ತಮ್ಮ ವ್ಯಾಪ್ತಿಯ ಫರೂಖಾಬಾದ್ ನ್ಯಾಯಾಧಿಕರಣದಲ್ಲಿ ಅಪಘಾತ ಪರಿಹಾರ ಅರ್ಜಿ ಸಲ್ಲಿಸಿದ್ದರು. ಕಾನೂನು ಪ್ರಕಾರ, ಅಪಘಾತ ಎಲ್ಲೇ ನಡೆದರೂ ಸಂತ್ರಸ್ತನು ತನ್ನ ವ್ಯಾಪ್ತಿಯ ಕೋರ್ಟ್‌ನಲ್ಲಿ ದಾವೆ ಹೂಡಬಹುದು. ‘ಆದರೆ ಉತ್ತರ ಪ್ರದೇಶದ ಫರೂಖಾಬಾದ್ ಕೋರ್ಟಲ್ಲಿ ಹಿಂದಿಯಲ್ಲಿ ವಿಚಾರಣೆ ನಡೆಯುತ್ತದೆ. ನಮ್ಮ ಸಾಕ್ಷಿಗಳಿಗೆ ಹಿಂದಿ ಬರಲ್ಲ. ಹೀಗಾಗಿ ಬಂಗಾಳಕ್ಕೆ ಅರ್ಜಿ ವಿಚಾರಣೆ ವರ್ಗಾಯಿಸಿ’ ಎಂದು ಅಪಘಾತದ ಆರೋಪಿ ಕೋರಿದ್ದ.
ಆದರೆ ಇದನ್ನು ವಜಾ ಮಾಡಿದ ನ್ಯಾಯಮೂರ್ತಿ ದೀಪಂಕರ್ ದತ್ತಾ, ‘ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ಆದರೆ ಹಿಂದಿ ರಾಷ್ಟ್ರಭಾಷೆ. ಹೀಗಾಗಿ ಸಾಕ್ಷಿಗಳಿಗೆ ಉತ್ತರ ಪ್ರದೇಶದ ಕೋರ್ಟ್ ಕಲಾಪದ ಮಾಹಿತಿಯನ್ನು ನಿಮ್ಮ ಭಾಷೆಯಲ್ಲಿ ನೀಡಿ, ಅವರು ಹೇಳುವ ಸಾಕ್ಷ್ಯವನ್ನು ಹಿಂದಿಯಲ್ಲಿ ತಿಳಿಸುವ ವ್ಯವಸ್ಥೆಯನ್ನು ಅರ್ಜಿದಾರರು ಮಾಡಬೇಕು’ ಎಂದು ಸೂಚಿಸಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಮಾಡುವ ಕುರಿತು Rahul Gnadhiಗೆ ಪ್ರಶ್ನೆ: ರಾಹುಲ್ ಹೇಳಿದ್ದೇನು
ಭಾರತ ವೈವಿಧ್ಯಮಯ ದೇಶ. ಇಲ್ಲಿನ ಜನರು ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶದಲ್ಲಿ ಕನಿಷ್ಠ 22 ಅಧಿಕೃಯ ಭಾಷೆ. ರ್ಜಿದಾರರು ಹಾಜರುಪಡಿಸುವ ಸಾಕ್ಷಿಗಳಿಂದ ಹಿಂದಿಯಲ್ಲಿ ಸಂವಹನ ಮತ್ತು ಅವರ ಆವೃತ್ತಿಯನ್ನು ತಿಳಿಸಲು ನಿರೀಕ್ಷಿಸಲಾಗಿದೆ. ಅರ್ಜಿದಾರರ ವಾದವನ್ನು ಒಪ್ಪಿಕೊಳ್ಳಬೇಕಾದರೆ, ಅದು ಹಕ್ಕುದಾರರು ಬಂಗಾಳಿ ಭಾಷೆಯಲ್ಲಿ ತಮ್ಮ ಆವೃತ್ತಿಯನ್ನು ಸಂವಹನ ಮಾಡಲು ಮತ್ತು ತಿಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
'ಪ್ರತ್ಯೇಕ ಕರ್ನಾಟಕ ರಾಷ್ಟ್ರ ಮಾಡಿದ್ರೆ ನೆಮ್ಮದಿಯಿಂದ ಇರ್ತೀವಿ'..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ