
ನವದೆಹಲಿ (ಆ.20): ಕೋಲ್ಕತಾದ ವೈದ್ಯ ವಿದ್ಯಾರ್ಥಿನಿಯ ರೇಪ್ & ಮರ್ಡರ್ ಕೇಸ್‌ನಲ್ಲಿ ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರಕರಣದ ಕುರಿತಾಗಿ ಆಗಸ್ಟ್ 22ರ ಒಳಗಾಗಿ ವಸ್ತುಸ್ಥಿತಿ ವರದಿ ನೀಡುವಂತೆ ಸಿಬಿಐಗೆ ಸೂಚನೆ ನೀಡಿದೆ. ಇದೇ ವೇಳೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ, ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ, ಪಶ್ಚಿಮ ಬಂಗಾಳ ಪೊಲೀಸ್‌ಗೆ ಛೀಮಾರಿ ಹಾಕಿದೆ. ಈ ಕೃತ್ಯದ ದಿಂದ ಇಡೀ ದೇಶ ಅಚ್ಚರಿಗೆ ಒಳಗಾಗಿದೆ. ವೈದ್ಯರನ್ನು ರಕ್ಷಣೆ ಮಾಡುವ ಎಲ್ಲಾ ವ್ಯವಸ್ಥೆ ವಿಫಲವಾಗಿದೆ. ಈ ಕೇಸ್‌ನ ತನಿಖೆ ಮಾಡುತ್ತಿರುವ ಸಿಬಿಐಗೆ ಸುಪ್ರೀಂ ಕೋರ್ಟ್ ಗುರುವಾರ ವರದಿ ಸಲ್ಲಿಕೆ ಮಾಡುವಂತೆ ಸೂಚನೆ ನೀಡಿದೆ. ವೈದ್ಯರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದ್ದೇವೆ. ಕಾಲೇಜು ಪ್ರಾಂಶುಪಾಲರ ಮೇಲೆ ಕ್ರಮ ಯಾಕಾಗಿಲ್ಲ. ಪ್ರಾಂಶುಪಾಲರು ಇದನ್ನು ಆತ್ಮಹತ್ಯೆ ಎಂದು ತೋರಿಸಲು ಯತ್ನಿಸಿದ್ದಾರೆ. ಫ್ ಐ ಆರ್ ದಾಖಲಿಸಲು ತಡವಾಗಿದ್ದು ಯಾಕೆ? ಕ್ರೈಮ್ ಸೀನ್‌ಅನ್ನು ಅಧಿಕಾರಿಗಳು ಯಾಕೆ ರಕ್ಷಣೆ ಮಾಡಿಲ್ಲ. ಪ್ರಾಂಶುಪಾಲರನ್ನು ಬಂಗಾಳ ಸರ್ಕಾರ ಮರು ನೇಮಕ ಮಾಡಿದ್ದು ಯಾಕೆ? ಗಲಾಟೆ ಮಾಡಿರುವ ಗುಂಪು ಹೇಗೆ ಪ್ರವೇಶ ಮಾಡಿದ್ರು? ಇದನ್ನು ಪೊಲೀಸರು ಯಾಕೆ ತಡೆಯಲಿಲ್ಲ? ತಕ್ಷಣವೇ ಡಿಜಿಪಿಯನ್ನು ಹುದ್ದೆಯಿಂದ ತೆರವು ಮಾಡಿ ಎಂದು ಸೂಚನೆ ನೀಡಿದೆ.
ಇದರೊಂದಿಗೆ ವೈದ್ಯರ ರಕ್ಷಣೆಯ ಸಲುವಾಗಿ ಸುಪ್ರೀಂ ಕೋರ್ಟ್ ನೇತೃತ್ವದಲ್ಲಿಯೇ ರಾಷ್ಟ್ರೀಯ ಕಾರ್ಯಪಡೆಯನ್ನು ರಚನೆ ಮಾಡಲಿದ್ದೇವೆ. ಇದರಲ್ಲಿ ಸರ್ಜನ್ ವೈಸ್ ಅಡ್ಮಿರಲ್ ಆರ್ ಸರಿನ್, ಡಾ ಡಿ ನಾಗೇಶ್ವರ ರೆಡ್ಡಿ, ಡಾ ಎಂ ಶ್ರೀನಿವಾಸ್, ಡಾ ಪ್ರತಿಮಾ ಮೂರ್ತಿ, ಡಾ ಗೋವರ್ಧನ್ ದತ್ ಪುರಿ, ಡಾ ಸೌಮಿತ್ರಾ ರಾವತ್ಪ್ರೊ ಏಮ್ಸ್ ದೆಹಲಿಯ ಕಾರ್ಡಿಯಾಲಜಿ ಮುಖ್ಯಸ್ಥೆ ಅನಿತಾ ಸಕ್ಸೇನಾ, ಮುಂಬೈನ ಡೀನ್ ಗ್ರಾಂಟ್ ಮೆಡಿಕಲ್ ಕಾಲೇಜಿನ ಪ್ರೊ ಪಲ್ಲವಿ ಸಪ್ರೆ, ಏಮ್ಸ್‌ನ ನರವಿಜ್ಞಾನ ವಿಭಾಗದ ಡಾ ಪದ್ಮಾ ಶ್ರೀವಾಸ್ತವ ಇರಲಿದ್ದಾರೆ. ರಾಷ್ಟ್ರೀಯ ಕಾರ್ಯಪಡೆಯ ಪದನಿಮಿತ್ತ ಸದಸ್ಯರಾಗಿ ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರ ಆರೋಗ್ಯ ಸಚಿವಾಲಯ, ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷರು ಇರಲಿದ್ದಾರೆ ಎಂದು ತಿಳಿಸಿದೆ. ಈ ಕಾರ್ಯಪಡೆಯು ಸುಪ್ರೀಂ ಕೋರ್ಟ್‌ಗೆ ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ ಎಂದು ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ