PM Security Lapse ಗಂಭೀರ ಪ್ರಕರಣವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಧೀಶ ನೇತೃತ್ವದ ತ್ರಿಸದಸ್ಯ ಸಮಿತಿ ರಚನೆ!

By Suvarna News  |  First Published Jan 10, 2022, 1:58 PM IST
  • ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣ
  • ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಧೀಶರ ಅಧ್ಯಕ್ಷತೆಯಲ್ಲಿ ಸಮಿತಿ
  • ಮೂವರು ಸದಸ್ಯರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ(ಜ.10): ದೇಶದಲ್ಲಿ ಭಾರಿ ಸದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿ  ಭದ್ರತಾ ಲೋಪ(PM Modi Security lapse) ಪಕರಣದ ಕುರಿತು ಇದೀಗ ಸುಪ್ರೀಂ ಕೋರ್ಟ್‌(Supreme Court) ಮಹತ್ವದ ಸೂಚನೆ ನೀಡಿದೆ. ಇಂದು(ಜ.10 ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಗಂಭೀರ ಪ್ರಕರಣವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯರ(3 member Committee) ಸಮಿತಿ ರಚಿಸಿದೆ.

ಪಂಜಾಬ್‌ನಲ್ಲಿ ನಡೆದ ಪ್ರಧಾನಿ ಮೋದಿ ಭದ್ರತಾ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ, ಜಸ್ಟೀಸ್ ಸೂರ್ಯಕಾಂತ್, ಜಸ್ಟಿಸ್ ಹಿಮಾ ಕೊಹ್ಲಿ ನೇತೃತ್ವದ ಪೀಠ, ಸಮಿತಿ ರಚನೆಗೆ ಆದೇಶ ಹೊರಡಿಸಿದೆ.  ಪ್ರಧಾನಿ ಮೋದಿ ಭೇಟಿಯಲ್ಲಿ ನಡೆದ ಭದ್ರತಾ ಲೋಪ, ಸಾಕ್ಷ ಸಂರಕ್ಷಣೆ ಹಾಗೂ ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ ಈ ಮಹತ್ವದ ಆದೇಶ ನೀಡಿದೆ.

Tap to resize

Latest Videos

undefined

PM Modi Security Breach: ಎಲ್ಲಾ ದಾಖಲೆ ಸುರಕ್ಷಿತವಾಗಿಡಲು ಸುಪ್ರಿಂ ಆದೇಶ!

ಪಂಜಾಬ್ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಡಿಎಸ್ ಪಟ್ವಾಲಿಯಾ ವಾದ ಮಂಡಿಸಿದ್ದಾರೆ. ಈ ವೇಳೆ ಪ್ರಧಾನಿ ಪ್ರಯಾಣದ ವಿವರ ಹಾಗೂ ದಾಖಲೆಗಳನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮುಂದೆ ದಾಖಲಿಸಲಾಗಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ 7 ಶೋಕಾಸ್ ನೊಟೀಸ್ ನೀಡಲಾಗಿದೆ. ಈಗಾಗಲೇ ದಾಖಲೆ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಇದರ ನಡುವೆ ಶೋಕಾಸ್ ನೊಟೀಸ್ ನೀಡಿ ವಿಚಾರಣೆಗೂ ಅವಕಾಶ ನೀಡದಂತೆ ಮಾಡಲಾಗಿದೆ ಎಂದು ಪಟ್ವಾಲಿಯಾ ವಾದ ಮಂಡಿಸಿದ್ದಾರೆ.

ಪ್ರಧಾನಿ ಭದ್ರತಾ ಲೋಪ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಅಧಿಕಾರ ಬಳಸಿಕೊಳ್ಳುತ್ತಿದೆ. ಇದರಿಂದ  ಪಂಜಾಬ್ ಪೊಲೀಸ್(Punjab Police) ಹಾಗೂ ಅಧಿಕಾರಿಗಳಿಗೆ ನ್ಯಾಯ ಸಿಗುವ ಸಾಧ್ಯತೆಗಳಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಸ್ವತಂತ್ರ ತನಿಖೆಗೆ(independent probe) ನಿರ್ದೇಶಿಸಬೇಕು ಎಂದು ಆಗ್ರಹಿಸಿದರು. 

PM Security Lapse 11 ತಿಂಗಳ ಹಿಂದೆ ಮೋದಿ ದಾಳಿಗೆ ಸ್ಕೆಚ್, ಪಂಜಾಬ್ ಕುತಂತ್ರ ವಿಡಿಯೋ ವೈರಲ್!

ಪಟ್ವಾಲಿಯಾ ವಾದಕ್ಕೆ ಪ್ರತಿಯಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಈ ವೇಳೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್(SPG) ಬ್ಲೂ ಬುಕ್ (Blue Book) ನಿಯಮ ಕುರಿತು ಉಲ್ಲೇಖಿಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಬೆಂಗಾವಲು ವಾಹನ ಫ್ಲೈವರ್ ಮೇಲೆ ತುಲುಪಿದಾಗ ಪ್ರತಿಭಟನಾಕಾರರು ಕೇವಲ 100 ಮೀಟರ್ ಅಂತರದಲ್ಲಿದ್ದರು. ಪ್ರಧಾನಿ ಮೋದಿ ಸಂಚರಿಸುವ ರಸ್ತೆ ಸೇರಿದಂತೆ ಭದ್ರತೆಯನ್ನು ಸಂಪೂರ್ಣವಾಗಿ ಕಟ್ಟು ನಿಟ್ಟಾಗಿ ರಾಜ್ಯ ಪೊಲೀಸ್ ಪಡೆ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಆದರೆ ಇಲ್ಲಿ ಬ್ಲೂ ಬೂಕ್ ನಿಯಮ ಉಲ್ಲಂಘನೆಯಾಗಿದೆ. ಪ್ರಧಾನಿ ಆಗಮಿಸುತ್ತಿರುವ ಮಾಹಿತಿ ಇದ್ದರೂ ರಸ್ತೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಥವಾ SPGಗೆ ಮುನ್ಸೂಚನೆ ನೀಡುವ ಪ್ರಯತ್ನಗಳು ಆಗಿಲ್ಲ ಎಂದು ತುಷಾರ್ ಮೆಹ್ತಾ ವಾದಿಸಿದ್ದಾರೆ.

ಫ್ಲೈಓವರ್ ಮೇಲೆ ಪ್ರತಿಭಟನಾಕಾರರು(Protest) ಜಮಾಯಿಸಿದ್ದಾರೆ. ರಸ್ತೆ ತಡೆ ಆಗಿದೆ ಅನ್ನೋ ಮಾಹಿತಿಯನ್ನು ಪಂಜಾಬ್ ಪೊಲೀಸ್ ನೀಡಿಲ್ಲ. ಸ್ಥಳಕ್ಕೆ ತಲುಪಿದಾಗಲೆ ಪರಿಸ್ಥಿತಿ ಅರಿವಾಗಿದೆ. ಇದು ಸಂಪೂರ್ಣ ಭದ್ರತಾ ವೈಫಲ್ಯ(Security Breach) ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ. ಕೇಂದ್ರ ಸರ್ಕಾರದ ಸಮಿತಿ ಭದ್ರತಾ ಲೋಪವಾಗಿದ್ದೆಲ್ಲಿ ಅನ್ನೋ ಕುರಿತು ಮಾಹಿತಿ ಕಲೆಹಾಕುತ್ತಿದೆ ಎಂದು ಮೆಹ್ತಾ ಹೇಳಿದ್ದಾರೆ. ವಾದ ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಸ್ವತಂತ್ರ ತನಿಖೆಗೆ ಆದೇಶಿಸಿತು. 
 

click me!