ಶಾಂತಿ ಕದಡುವ ಪಿಎಫ್ಐ ನಿಷೇಧಿಸಿ, ಅಜಿತ್ ದೋವಲ್ ಸಭೆಯಲ್ಲಿ ಮುಸ್ಲಿಮ್ ನಾಯಕರ ನಿರ್ಣಯ!

Published : Jul 30, 2022, 06:40 PM IST
ಶಾಂತಿ ಕದಡುವ ಪಿಎಫ್ಐ ನಿಷೇಧಿಸಿ, ಅಜಿತ್ ದೋವಲ್  ಸಭೆಯಲ್ಲಿ ಮುಸ್ಲಿಮ್ ನಾಯಕರ ನಿರ್ಣಯ!

ಸಾರಾಂಶ

ಉದಯಪುರ ಕನ್ಹಯ್ಯ ಲಾಲ್ ಹತ್ಯೆ, ಅಮರಾವತಿ ಉಮೇಶ್ ಕೊಲ್ಹೆ, ಬೆಳ್ಳಾರೆಯ ಪ್ರವೀಣ್ ನೆಟ್ಟಾರು  ಸೇರಿದಂತೆ ಇತ್ತೀಚೆಗೆ ನಡೆದ ಹಲವು ಪತ್ಯೆ ಪ್ರಕರಣಗಳಲ್ಲಿ ಪಿಎಫ್ಐ ಸಂಘಟನೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಇಂದು ನಡೆದ ಮಹತ್ವದ ಸಭೆಯಲ್ಲಿ NSA ಅಜಿತ್ ದೋವಲ್ ಹಾಗೂ ಸೂಫಿ ಸಂಘಟನೆಯ ನಾಯಕರು ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. 

ನವದೆಹಲಿ(ಜು.30): ದೇಶದಲ್ಲಿ ಇತ್ತೀಚೆಗೆ ನಡೆದ ಆತಂಕಕಾರಿ ಬೆಳವಣಿ, ಸಂಘರ್ಷ, ಹತ್ಯೆ ಘಟನೆಗಳು ಜನರ ನೆಮ್ಮದಿ ಕೆಡಿಸಿದೆ. ಆತಂಕದ ವಾತಾವರಣ ನಿರ್ಮಿಸಿದೆ. ಇದರ ಬೆನ್ನಲ್ಲೇ ಸೌಹಾರ್ಧಯುತ ಸಹಬಾಳ್ವೆ ಸಮಾವೇಷದಲ್ಲಿ ಅಖಿಲ ಭಾರತ ಸೂಫಿ ಕೌನ್ಸಿಲ್ ಸಂಘಟನೆ ಮಹತ್ವದ ನಿರ್ಣಯ ಕೈಗೊಂಡಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ, ಮುಸ್ಲಿಮ್ ನಾಯಕರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆ ನಿಷೇಧಿಸಲು ನಿರ್ಣಯ ಕೈಗೊಂಡಿದ್ದಾರೆ. ದೇಶದಲ್ಲಿ ಪಿಎಫ್ಐ ಸಂಘಟನೆ ಶಾಂತಿ ಕದಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಹಿಂಸಾಚಾರ, ಹತ್ಯೆಯಿಂದಲೇ ತನ್ನ ಕಾರ್ಯಸಾಧನೆಗೆ ಮುಂದಾಗಿದೆ. ಇದು ಈ ಸಮಾಜಕ್ಕೆ ಅತ್ಯಂತ ಅಪಾಯಕಾರಿ ಎಂದು ಸೂಫಿ ಕೌನ್ಸಿಲ್ ಸಂಘಟನೆ ಹೇಳಿದೆ. ಇಷ್ಟೇ ಅಲ್ಲ ಇಂತಹ ಪಿಎಫ್ಐ ಸಂಘಟೆಯನ್ನು ನಿಷೇಧಿಸಲು ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಇಷ್ಟೇ ಅಲ್ಲ ಈ ಕುರಿತು ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿಗೆ  ಪಿಎಫ್ಐ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿದೆ.

ನವದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಅಜಿತ್ ದೋವಲ್ ಹಾಗೂ ಸೂಫಿ ಕೌನ್ಸಿಲ್ ಸಂಘಟನೆ ಮುಸ್ಲಿಮ್ ನಾಯಕರು ಪಾಲ್ಗೊಂಡಿದ್ದರು. ದೋವಲ್ ಸಮ್ಮುಖದಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಹಾಗೂ ಭಾರತೀಯರಲ್ಲಿ ಕೋಮು ಸಂಘರ್ಷದ ವಾತಾವರಣ ಸೃಷ್ಟಿಸುತ್ತಿರುವ PFI ಸಂಘಟನೆ ನಿಷೇಧಿಸಬೇಕು. ಈ ನೆಲದ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಸರ್ಕಾರದ ಮೇಲೆ ಹೆಚ್ಚಿದ ಒತ್ತಡ, ರಾಜ್ಯದಲ್ಲಿ ಬ್ಯಾನ್ ಆಗುತ್ತಾ ಎಸ್‌ಡಿಪಿಐ, ಪಿಎಫ್‌ಐ.?

ದೇಶದಲ್ಲಿ ಧರ್ಮದ ಹೆಸರಿನಲ್ಲಿ ಕ್ರೌರ್ಯ ಹಾಗೂ ಸಂಘರ್ಷ ಹೆಚ್ಚಾಗುತ್ತಿದೆ. ಇದಕ್ಕೆ ಪೋಷಣೆ ನೀಡುವ ಕಾಲ ಇದಲ್ಲ. ದೇಶದ ಏಕತೆಯನ್ನು ಕಾಪಾಡುವುದು ಮುಖ್ಯ. ಸಿದ್ಧಾಂತದ ಹೆಸರಿನಲ್ಲಿ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಅಜಿತ್ ದೋವಲ್ ಹೇಳಿದ್ದಾರೆ. ಪ್ರತಿ ಘಟನೆ ನಡೆದಾಗ ಮೂಕ ಪ್ರೇಕ್ಷಕರಾಗುವ ಬದಲು ಇದೀಗ ಕ್ರಮ ಕೈಗೊಳ್ಳುವ ಸಮಯ ಬಂದಿದೆ. ಇದು ಅನಿವಾರ್ಯವಾಗಿದೆ. ಭಾರತದಲ್ಲಿನ ಪ್ರತಿಯೊಂದು ಸಮುದಾಯ ಗೌರವಯುತವಾದ ಹಾಗೂ ನಿರ್ಭೀತ ಸಮಾಜದಲ್ಲಿರಬೇಕು. ಎಲ್ಲಾ ಸಮುದಾಯ, ಜಾತಿ, ಭಾಷೆಗಳಿಂದ ಕೂಡಿರುವ ಭಾರತವನ್ನು ಒಂದು ದೇಶ ಎಂದು ಭಾವಿಸಬೇಕು. ಇದಕ್ಕೆ ವಿರುದ್ಧವಾಗಿರುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ದೋವಲ್ ಹೇಳಿದ್ದಾರೆ.

ಸೂಫಿ ಕೌನ್ಸಿಲ್ ಮುಸ್ಲಿಮ್ ನಾಯಕರು ನೇರವಾಗಿ ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಈ ಸಂಘಟನೆ ವಿರುದ್ಧ ಈಗಾಗಲೇ ಹಲವು ಸಾಕ್ಷ್ಯಗಳಿವೆ. ಹೀಗಾಗಿ ನಿಷೇಧಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಮುಸ್ಲಿಮ್ ನಾಯಕರು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧರ್ಮ, ದೇವರು, ಅನುಯಾಯಿಗಳ ವಿರುದ್ಧ ದ್ವೇಷ ಹರಡುವುದನ್ನು ಕಡಿವಾಣ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಆಗ್ರಹಿಸಿದ್ದಾರೆ.

ದೂಸ್ರಾ ಮಾತಾಡಿದ್ರೆ ಕೈ ಕಟ್‌, ಇಲ್ದಿದ್ರೆ ಕೊಲೆ; ಸಾಮಾಜಿಕ ಸಂಘಟನೆ ಹೆಸರಿನ ಪಿಎಫ್‌ಐನ ಅಸಲಿ ಮುಖ!

ರಾಜ್ಯದಲ್ಲೂ ಉಗ್ರ ನಿಗ್ರಹ ಪಡೆ, ಕೋಮು ಹತ್ಯೆ ತಡೆಗೇ ಕಾಯ್ದೆ
ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭವಿಷ್ಯದಲ್ಲಿ ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ವಿಶೇಷವಾದ ಕಾನೂನು ತರಲಾಗುವುದು ಹಾಗೂ ಕರ್ನಾಟಕದಲ್ಲಿ ಇತರ ರಾಜ್ಯಗಳ ರೀತಿ ಭಯೋತ್ಪಾದನೆ ನಿಗ್ರಹ ಪಡೆ (ಆ್ಯಂಟಿ ಟೆರರಿಸ್ಟ್‌ ಸ್ವಾ$್ಕಡ್‌) ರಚಿಸಲಾಗುವುದು ಎಂದು ಘೋಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ