ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಲವು ವರ್ಷಗಳಿಂದ ಭಾರತೀಯ ಮುಸ್ಲಿಮರನ್ನು ಪ್ರಚೋದಿಸುವ ಕೆಲಸದಲ್ಲಿ ತೊಡಗಿದೆ ಎಂದು ಸೂಫಿ ಇಸ್ಲಾಮಿಕ್ ಬೋರ್ಡ್ ವಕ್ತಾರ ಕಾಶಿಶ್ ವಾರ್ಸಿ ಆರೋಪಿಸಿದ್ದಾರೆ. ಭಯೋತ್ಪಾದಕ ಸಂಘಟನೆ ಅಲ್-ಖೈದಾ ಸೂಚನೆ ಮೇರೆಗೆ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ವಾರ್ಸಿ ಸೆನ್ಸೇಷನಲ್ ಹೇಳಿಕೆ ನೀಡಿದ್ದಾರೆ.
ನವದೆಹಲಿ (ಮೇ.28): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖವಾಡವನ್ನು ಬಯಲಿಗೆಳೆಯುವಲ್ಲಿ ಪಟ್ಟುಬಿಡದೆ ಕೆಲಸ ಮಾಡುತ್ತಿರುವ ಸೂಫಿ ಇಸ್ಲಾಮಿಕ್ ಬೋರ್ಡ್ (Sufi Islamic Board ) ಮತ್ತೊಮ್ಮೆ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಯನ್ನು ( Radical Islamists) ನಿಷೇಧಿಸುವ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ, ಪಿಎಫ್‌ಐ ಭಯೋತ್ಪಾದಕ ಸಂಘಟನೆ ಅಲ್-ಖೈದಾ (terrorist organisation Al-Qaeda) ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದೆ.
ಖಾಸಗಿ ಟಿವಿಯ ಜೊತೆ ಮಾತನಾಡಿದ ಸೂಫಿ ಇಸ್ಲಾಮಿಕ್ ಬೋರ್ಡ್ ವಕ್ತಾರ ಕಾಶಿಶ್ ವಾರ್ಸಿ (Sufi Islamic Board spokesperson Kashish Warsi ), ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಲವು ವರ್ಷಗಳಿಂದ ಭಾರತೀಯ ಮುಸ್ಲಿಮರನ್ನು ಪ್ರಚೋದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು. ಭಯೋತ್ಪಾದಕ ಸಂಘಟನೆ ಅಲ್-ಖೈದಾ ಸೂಚನೆ ಮೇರೆಗೆ ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆ ಕಾರ್ಯನಿರ್ವಹಿಸುತ್ತಿದೆ ಎಂದು ವಾರ್ಸಿ ಸೆನ್ಸೇಷನಲ್ ಹೇಳಿಕೆ ನೀಡಿದ್ದಾರೆ. ಪಿಎಫ್ಐ ಮೇಲೆ ನಿಷೇಧವನ್ನು ನಾವು ಆಗ್ರಹಿಸಿದ್ದರಿಂದ, ಸೂಫಿ ಇಸ್ಲಾಮಿಕ್ ಮಂಡಳಿಯ ಕೆಲವು ಸದಸ್ಯರಿಗೆ ಅಲ್-ಖೈದಾದಿಂದ ಕೊಲೆ ಬೆದರಿಕೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
“ಪಿಎಫ್‌ಐ ಹಲವು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಪಿಎಫ್ಐಅನ್ನು ನಿಷೇಧಿಸುವಂತೆ ನಾವು ಸರ್ಕಾರವನ್ನು ವಿನಂತಿಸಿ ಕೆಲ ಸಮಯವಾಗಿದೆ ಮತ್ತು ಇದೀಗ ಸೂಫಿ ಇಸ್ಲಾಮಿಕ್ ಮಂಡಳಿಗೆ ಅಲ್-ಖೈದಾದಿಂದ ಪ್ರಾಣ ಬೆದರಿಕೆಯ ಬರುತ್ತಿದೆ. ಪಿಎಫ್ ಐ, ಅಲ್-ಖೈದಾದ ಒಂದು ಭಾಗವಾಗಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಪಿಎಫ್ಐಅನ್ನು ನಿಷೇಧಿಸಲು ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ವಾರ್ಸಿ ಹೇಳಿದರು.
ಈ ಹಿಂದೆ, ಡಿಸೆಂಬರ್ 2020 ರಲ್ಲಿ, ಸೂಫಿ ಇಸ್ಲಾಮಿಕ್ ಬೋರ್ಡ್ ಕೂಡ ಪಿಎಫ್ಐ ಭಯೋತ್ಪಾದಕ ಸಂಘಟನೆಗಳಿಂದ ಬೆಂಬಲಿತವಾಗಿದೆ ಮತ್ತು ಜಿಹಾದ್ ನಡೆಸಲು ಮುಸ್ಲಿಂ ಯುವಕರನ್ನು ಮೂಲಭೂತವಾದದ 'ಶಾಲೆಗಳನ್ನು' ನಡೆಸುತ್ತಿದೆ ಎಂದು ಆರೋಪಿಸಿತ್ತು. ಜೊತೆಗೆ, ಪಿಎಫ್ಐ ತನ್ನ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮೂಲಕ ಮುಸ್ಲಿಂ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದು ಸೂಫಿ ಇಸ್ಲಾಮಿಕ್ ಬೋರ್ಡ್ ಹೇಳಿತ್ತು. ಹುತಾತ್ಮರಾದ ನಂತರ ಜನ್ನತ್‌ನಲ್ಲಿ '72 ಹೂರ್ಸ್' ಎಂಬ ನಂಬಿಕೆಯನ್ನು ಈ ಸಂಘಟನೆಯು ಮುಸ್ಲಿಂ ಪುರುಷರನ್ನು ದೇಶದಲ್ಲಿ ಜಿಹಾದ್ ನಡೆಸುವಂತೆ ಆಮಿಷವೊಡ್ಡಲು ಬಳಸುತ್ತದೆ ಎಂದು ಸೂಫಿ ಬೋರ್ಡ್ ಆರೋಪಿಸಿದೆ.
ಕೇರಳ PFI ಮೆರವಣಿಗೆ: ಕೋಮು ದ್ಷೇಷದ ಘೋಷಣೆ ಕೂಗಿದ ಬಾಲಕ
'72 ಹೂರ್ಸ್' (ಸ್ವರ್ಗದ ಕನ್ಯೆಯರು) ಭಯೋತ್ಪಾದಕರು ಜಿಹಾದ್‌ನಲ್ಲಿ ಮರಣಹೊಂದಿದಾಗ ಮತ್ತು ಜನ್ನತ್ (ಸ್ವರ್ಗ) ಗೆ ಹೋದಾಗ, ಅವರ ಲೈಂಗಿಕ ಬಯಕೆಗಳನ್ನು ಪೂರೈಸಲು 72 ಕನ್ಯೆಯ ಮಹಿಳೆಯರನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂಬ ಇಸ್ಲಾಮಿಸ್ಟ್‌ಗಳ ನಂಬಿಕೆಯನ್ನು ಉಲ್ಲೇಖಿಸುತ್ತದೆ. ಇದು ಇಸ್ಲಾಮಿ ಭಯೋತ್ಪಾದಕರಲ್ಲಿ ವ್ಯಾಪಕವಾದ ನಂಬಿಕೆಯಾಗಿದೆ, ಐಸಿಸ್, ಅಲ್-ಖೈದಾ, ಬೊಕೊ ಹರಾಮ್ ಮುಂತಾದ ಭಯೋತ್ಪಾದಕ ಸಂಘಟನೆಗಳು ಈ ಭರವಸೆಯನ್ನು ಬಳಸಿಕೊಂಡು ಹೊಸ ಭಯೋತ್ಪಾದಕರನ್ನು ಆಮಿಷವೊಡ್ಡಲು ಮತ್ತು ನೇಮಕ ಮಾಡಿಕೊಳ್ಳಲು ಬಳಸಿಕೊಂಡಿವೆ.
ಧ್ವನಿವರ್ಧಕ ಮುಟ್ಟಿದರೆ ಯಾರೊಬ್ಬರನ್ನೂ ಬಿಡೋದಿಲ್ಲ, ಬಹಿರಂಗ ಎಚ್ಚರಿಕೆ ನೀಡಿದ ಪಿಎಫ್ಐ!
ಸೂಫಿ ಇಸ್ಲಾಮಿಕ್ ಬೋರ್ಡ್ ಇತ್ತೀಚೆಗಷ್ಟೇ PFI ನಿಂದ ಮುಸ್ಲಿಂ ಯುವಕರನ್ನು ಮೂಲಭೂತವಾದದತ್ತ ತಳ್ಳುತ್ತಿದೆ ಎಂದು ಆರೋಪಿಸಿ ಮಾನನಷ್ಟ ನೋಟಿಸ್ ಸ್ವೀಕರಿಸಿತ್ತು. ಸೂಫಿ ಬೋರ್ಡ್‌ಗಳು ಕೂಡ ಮಾನನಷ್ಟ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಪಿಎಫ್‌ಐ ಅನ್ನು ನಿಷೇಧಿಸುವವರೆಗೆ ನಾವು ನಿಲ್ಲುವುದಿಲ್ಲ ಎಂದು ಹೇಳಿದ್ದು, ಏಕೆಂದರೆ ಅವರು ಭಾರತದ ಯುವಕರನ್ನು ಮೂಲಭೂತವಾದದತ್ತ ತಳ್ಳುತ್ತಿದೆ ಎಂದು ಆರೋಪಿಸಿತ್ತು.