ಅಧ್ಯಯನಕ್ಕಾಗಿ ಮಾತ್ರ ವರದಿ ಸಲ್ಲಿಕೆ: ಗ್ಯಾನವಾಪಿ ಸಮೀಕ್ಷಾ ವರದಿ ಬಹಿರಂಗ ಬೇಡ: ಕೋರ್ಟ್

By Kannadaprabha NewsFirst Published Jan 25, 2024, 1:21 PM IST
Highlights

ಕಾಶಿ ವಿಶ್ವನಾಥ ಮಂದಿರ ಪಕ್ಕದ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿನ 'ಹಿಂದೂ ಕುರುಹು'ಗಳ ಅಧ್ಯಯನ ಮಾಡಿರುವ ಎಎಸ್‌ಐ ಸಮೀಕ್ಷಾ ವರದಿಯನ್ನು ಉಭಯ ಅರ್ಜಿದಾರರಿಗೆ ನೀಡಲಾಗುವುದು ಎಂದು ವಾರಾಣಸಿ ನ್ಯಾಯಾಲಯ ಬುಧವಾರ ಆದೇಶ ಪ್ರಕಟಿಸಿದೆ.

ವಾರಾಣಸಿ: ಕಾಶಿ ವಿಶ್ವನಾಥ ಮಂದಿರ ಪಕ್ಕದ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿನ 'ಹಿಂದೂ ಕುರುಹು'ಗಳ ಅಧ್ಯಯನ ಮಾಡಿರುವ ಎಎಸ್‌ಐ ಸಮೀಕ್ಷಾ ವರದಿಯನ್ನು ಉಭಯ ಅರ್ಜಿದಾರರಿಗೆ ನೀಡಲಾಗುವುದು ಎಂದು ವಾರಾಣಸಿ ನ್ಯಾಯಾಲಯ ಬುಧವಾರ ಆದೇಶ ಪ್ರಕಟಿಸಿದೆ. ಆದರೆ ವರದಿಯನ್ನು ಬಹಿರಂಗಪಡಿಸಬಾರದು ಎಂದು ತಾಕೀತು ಮಾಡಿದೆ. 

ಹಿಂದೂ ಮತ್ತು ಮುಸ್ಲಿಂ ಎರಡೂ ಬಣಗಳು ವರದಿಯನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅಫಿಡವಿಟ್ ನೀಡಬೇಕು ಮತ್ತು ಅದನ್ನು ಸಾರ್ವಜನಿಕಗೊಳಿಸಬಾರದು ಎಂದು ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಆದೇಶಿಸಿದರು. ಕೇವಲ ಅಧ್ಯಯನ ಉದ್ದೇಶಕ್ಕೆ ಮಾತ್ರ ವರದಿ ನೀಡಲಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯ ಕೆಡವಿ ನಿರ್ಮಿಸಲಾಗಿದೆ ಎಂದು ಹಿಂದೂ ಪರ ದಾವೆದಾರರು ಅರ್ಜಿ ಹಾಕಿದ್ದರು.  ಹೀಗಾಗಿ ಇದು ನಿಜವೇ ಎಂದು ಅರಿಯಲು ಜಿಲ್ಲಾ ಕೋರ್ಟು ಎಎಸ್‌ಐ (ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ) ಸಮೀಕ್ಷೆಗೆ ಆದೇಶಿಸಿತ್ತು.

ಗ್ಯಾನವಾಪಿ ಮಸೀದಿ ಸಮೀಕ್ಷಾ ವರದಿ ಸಾರ್ವಜನಿಕಗೊಳಿಸಲು ಕೋರ್ಟ್ ಅನುಮತಿ!

ನನಗೆ ಹಿಂದಿ ಗೊತ್ತಿಲ್ಲ: ತಮಿಳ್ನಾಡು ಜಡ್ಜ್

ಚೆನ್ನೈ: ಇತ್ತೀಚೆಗೆ ಕೇಂದ್ರ ಸರ್ಕಾರವು ಐಪಿಸಿ, ಸಿಆರ್‌ಪಿಸಿ ಹಾಗೂ ಎವಿಡೆನ್ಸ್ ಆ್ಯಕ್ಟ್‌ಗಳ ಹಲವಾರು ಅಂಶಗಳನ್ನು ಬದಲಿಸಿ, ಅವುಗಳಿಗೆ ಹಿಂದಿ ನಾಮಕರಣ ಮಾಡಿ ನೂತನ 3 ಕಾಯ್ದೆ ಜಾರಿಗೆ ತಂದಿತ್ತು. ಆದರೆ ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆಯೊಂದರ ವೇಳೆ ನ್ಯಾಯಾಧೀಶರೊಬ್ಬರು, ಈ ಹಿಂದಿ ಹೆಸರು ಹೇಳಲು ನಿರಾಕರಿಸಿದ ಪ್ರಸಂಗ ನಡೆದಿದೆ. ಮಂಗಳವಾರ ಕಲಾಪದಲ್ಲಿ ಹಿಂದಿ ಹೆಸರುಳ್ಳ 3 ಕಾನೂನು (ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಾ) ಬಗ್ಗೆ ಪ್ರಸ್ತಾಪವಾಯಿತು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಎನ್. ಆನಂದ್ ವೆಂಕಟೇಶ್, 'ಎಲ್ಲ 3 ಕಾಯ್ದೆಗಳನ್ನು ಹಿಂದಿನ ಇಂಗ್ಲಿಷ್ ಭಾಷೆಯಲ್ಲೇ ಉಚ್ಚರಿಸುವೆ. ಐಪಿಸಿಯನ್ನು ಐಪಿಸಿ ಎಂದೇ ಕರೆಯುವೆ. ಏಕೆಂದರೆ ನನಗೆ ಅದು (ಹಿಂದಿ) ತಿಳಿಯದ ಭಾಷೆಯಾಗಿದೆ' ಎಂದರು. ಇನ್ನು ಸಹಾಯಕ ಅಭಿಯೋಜಕ ಎ. ದಾಮೋದರನ್‌ಗೆ ಕೂಡಾ ಹಿಂದಿ ಉಚ್ಚರಿಸಲು ಕಷ್ಟವಾಗಿದ್ದು ಕಂಡುಬಂತು.

ಜ್ಞಾನವಾಪಿ ಮಸೀದಿಯೋ ಮಂದಿರವೋ? ಕಾನೂನು ಹೋರಾಟದಲ್ಲಿ ಹಿಂದೂಗಳಿಗೆ ಮಹತ್ವದ ಗೆಲುವು!

click me!