
ಭೋಪಾಲ್: 11ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಕಾರಿನಲ್ಲೇ ಅತ್ಯಾ*ಚಾರ ನಡೆಸಿ, ಈ ಘಟನೆಯನ್ನು ಚಿತ್ರೀಕರಿಸಿ ಆಕೆಯಿಂದ ಹಣ ಪೀಕಿದ ಬಳಿಕ ಆಕೆಯನ್ನು ಇಸ್ಲಾಂಗೆ ಮತಾಂತರ ಆಗುವಂತೆ ಒತ್ತಾಯಿಸಿದ ಪೈಶಾಚಿಕ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ.
ಶಹಪುರ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಗೆ ಸ್ನೇಹಿತನ ಮೂಲಕ ಆರೋಪಿ ಔಸಫ್ ಅಲಿ ಖಾನ್‌ನ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿದ ಬಳಿಕ ತನ್ನೊಂದಿಗೆ ಕಾರಲ್ಲಿ ಸುತ್ತಾಡಲು ಬರುವಂತೆ ಖಾನ್ ಕೋರಿದ್ದ. ಇದಕ್ಕೆ ಒಪ್ಪಿ ಹೋದ ವಿದ್ಯಾರ್ಥಿನಿಯ ಮೇಲೆ ಆತ ಕಾರಿನಲ್ಲಿ ಅತ್ಯಾ*ಚಾರವೆಸಗಿದ್ದಾನೆ.
ಈ ಕೃತ್ಯವನ್ನು ಮಾಜ್ ಖಾನ್ ಎಂಬಾತ ಚಿತ್ರಿಸಿದ್ದಾನೆ. ಬಳಿಕ ಆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಇನ್ನೂ ಮೂರು ಕಾರಿನಲ್ಲಿ ಔಸಫ್‌ನ ಸ್ನೇಹಿತರು ಆಕೆಯ ಮೇಲೆ ಅತ್ಯಾ*ಚಾರ ಎಸಗಿದ್ದಾರೆ. ಬಳಿಕ ಸಂತ್ರಸ್ತೆ ಬಳಿ 1 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದಾರೆ. ಭೀತಿಯಿಂದ ಆಕೆ 40,000 ರು. ನೀಡಿದರೂ ಸುಮ್ಮನಾಗದೆ ಶೋಷಣೆ ಮುಂದುವರೆಸಿದ್ದಾರೆ.
ಕೊನೆಗೆ ಆಕೆ ಇಬ್ಬರ ಬಳಿಯೂ ಮಾತು ನಿಲ್ಲಿಸಿದಾಗ ಆಕೆಯೊಂದಿಗಿನ ಖಾಸಗಿ ವಿಡಿಯೋವನ್ನು ಅಸ್ತ್ರವಾಗಿ ಬಳಸಿಕೊಂಡು ಅದನ್ನು ಅವಳ ಸ್ನೇಹಿತರಿಗೆ ಹಂಚಿದ್ದಾರೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕೊನೆಗೆ ಸಂತ್ರಸ್ತೆ ಎಲ್ಲವನ್ನೂ ತನ್ನ ಪೋಷಕರಿಗೆ ತಿಳಿಸಿದ್ದು, ಹಿಂದೂ ಸಂಘಟನೆಗಳ ನೆರವಿನೊಂದಿಗೆ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ