ಆನ್‌ಲೈನ್ ಕ್ಲಾಸ್ ನಡುವೆ ಟೀಚರ್‌ಗೆ ಪ್ರಪೋಸ್ ಮಾಡಿದ ವಿದ್ಯಾರ್ಥಿ, ಶಿಕ್ಷಕಿ ಉತ್ತರಕ್ಕೆ ನೆಟ್ಟಿಗರ ಶ್ಲಾಘನೆ!

By Chethan Kumar  |  First Published Sep 18, 2024, 10:49 AM IST

ನಿಮಗೆ ಮದುವೆಯಾಗಿದ ಮೇಡಮ್, ಲವ್ ಯು ಮ್ಯಾಮ್ ಎಂದು ಆನ್‌ಲೈನ್ ಕ್ಲಾಸ್ ನಡುವೆ ವಿದ್ಯಾರ್ಥಿಯೊಬ್ಬ ಟೀಚರ್‌ಗೆ ಪ್ರಪೋಸ್ ಮಾಡಿದ ಘಟನೆ ನಡೆದಿದೆ. ಟೀಚರ್ ನೀಡಿದ ಉತ್ತರಕ್ಕ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ವಿದ್ಯಾರ್ಥಿಯನ್ನು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


ವಿದ್ಯಾರ್ಥಿಯೊಬ್ಬ ತರಗತಿ ನಡುವೆ ಟೀಚರ್‌ಗೆ ಪ್ರಪೋಸ್ ಮಾಡಿದ ಘಟನೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದ ನಡುವೆ ವಿದ್ಯಾರ್ಥಿ, ನೇರವಾಗಿ ಟೀಚರ್‌ಗೆ ಲವ್ ಯು ಮ್ಯಾಮ್ ಎಂದು ಪ್ರಪೋಸ್ ಮಾಡಿದ್ದಾನೆ. ಆದರೆ ಟೀಚರ್ ಶಾಂತವಾಗಿ, ಸಮಾಧಾನವಾಗಿ ಉತ್ತರ ನೀಡಿದ್ದಾರೆ. ಟೀಚರ್ ನೀಡಿದ ಉತ್ತರಕ್ಕೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ವಿದ್ಯಾರ್ಥಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿದ್ಯಾರ್ಥಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಗಂಭೀರವಾಗಿ ಆನ್‌ಲೈನ್ ಕ್ಲಾಸ್ ನಡೆಯುತ್ತಿತ್ತು. ಟೀಚರ್ ಪಠ್ಯವನ್ನು ಅಷ್ಟೇ ಉತ್ತಮವಾಗಿ ವಿವರಿಸಿದ್ದಾರೆ.  ಇದರ ನಡುವೆ ವಿದ್ಯಾರ್ಥಿಯೊಬ್ಬ ಕೀಟಲೆ ಆರಂಭಿಸಿದ್ದಾನೆ. ಪ್ರಶ್ನೆ ಇರುವುದಾಗಿ ನಟಿಸಿದ್ದಾನೆ. ಪಠ್ಯದ ನಡುವೆ ಟೀಚರ್, ಸರಿ ಏನು ಪ್ರಶ್ನೆ ಎಂದು ಕೇಳಿದ್ದಾರೆ. ತಕ್ಷಣವೇ ಪ್ರತಿಕ್ರಿಯಿಸಿದ ವಿದ್ಯಾರ್ಥ ನಿಮಗೆ ಮದುವೆಯಾಗಿದೆಯಾ? ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳಿದ ಟೀಚರ್ ಸಿಟ್ಟು ಮಾಡಿಕೊಂಡಿಲ್ಲ. ಅಷ್ಟೆ ವಿನಯವಾಗಿ, ಮದುವೆಯಾಗಿಲ್ಲ ಎಂದು ಉತ್ತರಿಸಿದ್ದಾರೆ.

Tap to resize

Latest Videos

ವಿಮಾನದಲ್ಲಿ ಗೆಳಯನಿಗೆ ಸರ್ಪ್ರೈಸ್, ಮಂಡಿಯೂರಿ ಪ್ರಪೋಸ್ ಮಾಡಿದ ಗೆಳತಿಗೆ ಸಿಕ್ಕಿತಾ ಗ್ರೀನ್ ಸಿಗ್ನಲ್?

ವಿದ್ಯಾರ್ಥಿಯ ಪ್ರಶ್ನೆ ಇಲ್ಲಿಗೆ ಮುಗಿದಿಲ್ಲ. ಮದುವೆಯಾಗಿಲ್ಲ ಅನ್ನೋ ಟೀಚರ್ ಉತ್ತರ ಕೇಳಿದೊಡನೆ, ಹಾಗಾದರೆ ಲವ್ ಯೂ ಮ್ಯಾಮ್ ಎಂದು ಆನ್‌ಕ್ಲಾಸ್ ನಡುವೆ ಪ್ರಪೋಸ್ ಮಾಡಿದ್ದಾನೆ. ಪಾಠ ಕಲಿಸುತ್ತಿದ್ದ ಟೀಚರ್ ಶಾಂತವಾಗಿ ವಿದ್ಯಾರ್ಥಿಗೆ ಉತ್ತರ ನೀಡಿದ್ದಾರೆ. ಲವ್ ಯೂ ಅನ್ನೋ ಪ್ರಪೋಸಲ್ ವಿದ್ಯಾರ್ಥಿಯಿಂದ ಬರುತ್ತಿದ್ದಂತೆ, ಪ್ರೀಯ ವಿದ್ಯಾರ್ಥಿ, ನಾನು ಎಲ್ಲರನ್ನೂ ಪ್ರೀತಿಸುತ್ತೇನೆ, ಎಲ್ಲಾ ವಿದ್ಯಾರ್ಥಿಗಳ ಮೇಲೆ ನನಗೆ ಪ್ರೀತಿ ಇದೆ ಎಂದಿದ್ದಾರೆ. ಆದರೆ ಈ ವಿದ್ಯಾರ್ಥಿ ಮತ್ತೆ, ನನ್ನನ್ನು ಮದುವೆಯಾಗುತ್ತೀರಾ? ಪ್ಲೀಸ್ ಮೇಡಮ್ ಎಂದೆಲ್ಲಾ ಬೇಡಿಕೊಂಡಿದ್ದಾನೆ. 

ಆದರೆ ಎಲ್ಲೂ ಕೂಡ ಟೀಚರ್ ತಾಳ್ಮೆ ಕಳೆದುಕೊಂಡಿಲ್ಲ, ವಿದ್ಯಾರ್ಥಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಇಲ್ಲಿಗೆ ಕೊನೆಗೊಳ್ಳುತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗುತ್ತಿದ್ದಂತೆ, ವಿದ್ಯಾರ್ಥಿ ನಡೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಇದು ತಮಾಷೆಯಾಗಿ ಕಾಣುತ್ತಿಲ್ಲ. ಪಾಠ ಮಾಡುತ್ತಿರುವ ಶಿಕ್ಷಕಿಗೆ ಈ ರೀತಿ ಪ್ರಪೋಸ್ ಮಾಡುತ್ತಿದ್ದಾರೆ ಅಂದರೆ ವಿದ್ಯಾರ್ಥಿಗಳ ಯಾವ ಮಟ್ಟಕ್ಕೆ ತಲುಪಿದ್ದಾರೆ. ನಾಚಿಕೆಯಾಗಬೇಕು. ಈ ವಿದ್ಯಾರ್ಥಿ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು. ನಾಳೆ ಈತ ಯಾವುದೇ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರೂ ಅಲ್ಲಿನ ಮಹಿಳಾ ಉದ್ಯೋಗಿಗಳಿಗೆ ಅಪಾಯದ ಸಾಧ್ಯತೆ ಹೆಚ್ಚು. ಇಂತಹ ಮನಸ್ಥಿತಿಗಳನ್ನು ಈಗಿನಿಂದಲೇ ಸರಿಪಡಿಸಬೇಕು ಎಂದು ಹಲವರು ಸಲಹೆ ನೀಡಿದ್ದಾರೆ. ಶಿಕ್ಷಕಿಯರು ಈ ರೀತಿಯ ಪ್ರಶ್ನೆ, ವಿದ್ಯಾರ್ಥಿಗಳನ್ನು ಅನುಮತಿಸಬಾರದು. ಈ ವಿದ್ಯಾರ್ಥಿ ಹಾಗೂ ಆತನಿಗೆ ಸಂಸ್ಕಾರ ಕಲಿಸಿದ ಪೋಷಕರು ತಲೆತಗ್ಗಿಸುವಂತಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಟ್ರಿಪ್ ರೋಡ್ ಮ್ಯಾಪ್ ಮೂಲಕವೇ ಗೆಳತಿಗೆ ವಿಲ್ ಯು ಮ್ಯಾರಿ ಮೀ ಪ್ರಪೋಸ್: ಮುಂದೇನಾಯ್ತು?

 

 

ತಾಳ್ಮೆ ಕಳೆದುಕೊಳ್ಳದೆ ನಿಧಾನವಾಗಿ ವಿದ್ಯಾರ್ಥಿಗೆ ತಿಳಿಹೇಳಲು ಪ್ರಯತ್ನಿಸಿದ ನಡೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದೇ ವೇಳೆ ಕಠಿಣ ಕ್ರಮಕ್ಕೂ ಒತ್ತಾಯಿಸಿದ್ದಾರೆ. ಈ ಘಟನೆ ನಡೆದಿರುವ ಸ್ಥಳ, ಶಿಕ್ಷಣ ಸಂಸ್ಥೆ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ಮಾತ್ರ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

click me!