ಪರೀಕ್ಷೆ ಬರೆದು ಟಾಯ್ಲೆಟ್‌‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ

Published : Mar 06, 2026, 03:59 PM IST
New born

ಸಾರಾಂಶ

ಪರೀಕ್ಷೆ ಬರೆದು ಟಾಯ್ಲೆಟ್‌‌ನಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ, ಮಗುವನ್ನು ಡಸ್ಟ್‌ಬಿನ್ ಎಸೆದ ತಾಯಿ, ಪರೀಕ್ಷೆ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಾಯಿ ಜೊತೆ ಆಸ್ಪತ್ರೆ ತೆರಳಿದ ವಿದ್ಯಾರ್ಥಿನಿ ಡೆಲಿವರಿಯಾಗಿದ್ದಾಳೆ.

ನಾಗರಕರ್ನೂಲ್ (ಮಾ.06) ಅಪ್ರಾಪ್ತ ಬಾಲಕಿಯರು, ವಿದ್ಯಾರ್ಥಿನಿಯರು ಮಗುವಿಗೆ ಜನ್ಮ ನೀಡುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಇದು ಆತಂಕದ ಬೆಳವಣಿಗೆಯಾಗಿದೆ. ಇದೀಗ 16 ವರ್ಷದ ವಿದ್ಯಾರ್ಥಿನಿ ಪರೀಕ್ಷೆ ಮುಗಿಸಿದ ಬಳಿಕ ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದಾರೆ. ತನ್ನ ತಾಯಿ ಜೊತೆ ಆಸ್ಪತ್ರೆಗೆ ತೆರಳಿದ್ದಾಳೆ. ಕೆಲ ಪರೀಕ್ಷೆಗಾಗಿ ಕಾಯುತ್ತಿರುವಾಗ ಹೊಟ್ಟೆ ನೋವಿನಿಂದ ಬಳಲಿದ ವಿದ್ಯಾರ್ಥಿನಿ ವಾಶ್‌ರೂಂಗೆ ತೆರಳಿ ಮಗುವಿಗೆ ಜನ್ಮ ನೀಡಿದ್ದಾಳೆ. ಹೊರಗಡೆ ಕುಳಿತಿದ್ದ ತಾಯಿಯನ್ನು ವಾಶ್‌ರೂಂನಿಂದಲೇ ಫೋನ್ ಮಾಡಿ ಕರೆದಿದ್ದಾಳೆ. ತಾಯಿಗೆ ಗಾಬರಿಯಾಗಿದೆ. ಬಳಿಕ ಟಾಯ್ಲೆಟ್‌ನ ಡಸ್ಟ್‌ಬಿನ್‌ಗೆ ಮಗುವನ್ನು ಎಸೆದು ಎಸ್ಕೇಪ್ ಆಗಲು ಪ್ರಯತ್ನಿಸಿದ ಘಟನೆ ತೆಲಂಗಾಣದ ನಾಗರಕರ್ನೂಲ್‌ನಲ್ಲಿ ನಡೆದಿದೆ.

ಪರೀಕ್ಷೆ ಬರೆಯುವಾಗ ಕಾಣಿಸಿಕೊಂಡ ಹೊಟ್ಟೆ ನೋವು

ಬಾಲಕಿಯರ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದಾಳೆ. ಎಲ್ಲಾ ವಿದ್ಯಾರ್ಥಿನಿಯರಂತೆ ಪರೀಕ್ಷೆ ಬರೆದಿದ್ದಾಳೆ. ಆದರೆ ಪರೀಕ್ಷೆ ನಡುವೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪರೀಕ್ಷೆ ಮುಗಿಸಿದ ವಿದ್ಯಾರ್ಥಿನಿಗೆ ಹೊಟ್ಟೆ ನೋವು ತೀವ್ರಗೊಂಡಿದೆ. ಶಾಲೆಯಿಂದ ಮನೆಗೆ ಮರಳಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.

ಮಗಳನ್ನು ಕರೆದುಕೊಂಡು ತಾಯಿ ಹತ್ತಿರದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾಳೆ. ಬಳಿಕ ಟೋಕನ್ ಪಡೆದು ವೈದ್ಯರ ಬಳಿ ತೆರಳಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಸ್ಕ್ಯಾನಿಂಗ್ ಸೇರಿದಂತೆ ಕೆಲ ಪರೀಕ್ಷೆಗೆ ಸೂಚಿಸಿದ್ದಾರೆ. ಇದಕ್ಕಾಗಿ ಆಸ್ಪತ್ರೆಯ ಮತ್ತೊಂದು ಬ್ಲಾಕ್‌ಗೆ ಬಂದ ವಿದ್ಯಾರ್ಥಿನಿಗೆ ಹೊಟ್ಟೆ ನೋವು ತೀವ್ರಗೊಂಡಿದೆ. ಸ್ಕ್ಯಾನಿಂಗ್‌ಗೆ ಕಾಯುತ್ತಿದ್ದ ವಿದ್ಯಾರ್ಥಿನಿ ತಕ್ಷಣವೇ ವಾಶ್‌ರೂಂಗೆ ತೆರಳಿದ್ದಾಳೆ. ಕೆಲವೇ ಕ್ಷಣದಲ್ಲಿ ವಾಶ್‌ರೂಂನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ.

ಇತ್ತ ವಿದ್ಯಾರ್ಥಿನಿಯೂ ಗಾಬರಿಗೊಂಡಿದ್ದಾಳೆ. ಫೋನ್ ಮೂಲಕ ತಾಯಿಯನ್ನು ವಾಶ್‌ರೂಂಗೆ ಕರೆಯಿಸಿದ್ದಾಳೆ. ಓಡೋಡಿ ಬಂದ ತಾಯಿಗೆ ಆತಂಕ ಹೆಚ್ಚಾಗಿದೆ. ಮಗಳ ಭವಿಷ್ಯ, ಮಾನ ಮರ್ಯಾದೆಗೆ ಅಂಜಿದ ತಾಯಿ ಮಗುವನ್ನು ಡಸ್ಟ್ ಬಿನ್‌ಗೆ ಎಸೆದು ಏನೂ ಗೊತ್ತಿಲ್ಲದವರಂತೆ ಪರೀಕ್ಷೆ ಮುಂದುವರಿಸಲು ನಿರ್ಧರಿಸಿದ್ದರೆ. ಆದರೆ ಆಸ್ಪತ್ರೆ ಸಿಬ್ಬಂದಿಗಳು ಮಗುವಿನ ಶಬ್ದ ಕೇಳಿಸದ ಕಾರಣ ಪರಿಶೀಲನೆ ನಡೆಸಿದಾಗ ಡಸ್ಟ್‌ಬಿನ್‌ನಲ್ಲಿ ಮಗು ಪತ್ತೆಯಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿದ್ದಾರೆ. ಬಳಿಕ ಮಗು ಹಾಗೂ ವಿದ್ಯಾರ್ಥಿನಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಮಗು ಹಾಗೂ ವಿದ್ಯಾರ್ಥಿನಿ ಆರೋಗ್ಯ ಸ್ಥಿರವಾಗಿದ್ದು, ಆರೋಗ್ಯವಾಗಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಅಪ್ರಾಪ್ತ ಬಾಲಕಿ ಮಗುವಿಗೆ ಜನ್ಮ ನೀಡಿರುವ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತನಿಖೆ ಆರಂಭಹೊಂಡಿದೆ.

ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಪರೀಕ್ಷೆ ಬರೆಯುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಘಟನೆ ವರದಿಯಾಗಿತ್ತು. ಗಣಿತ ಪರೀಕ್ಷೆ ನಡೆವು ಹೊಟ್ಟೆ ನೋವಿನ ಕಾರಣ ವಾಶ್‌ರೂಂಗೆ ತೆರಳಿದ್ದಾರೆ. ಶಿಕ್ಷಕಿಯ ಅನುಮತಿ ಪಡೆದು ವಾಶ್‌ರೂಂಗೆ ತೆರಳಿದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಅಳುವ ಶಬ್ದ ಕೇಳಿ ಶಿಕ್ಷಕಿ ವಾಶ್‌ರೂಂಗೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Cyananthus Hookeri: 158 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಅರಳಿದ ಅಪರೂಪದ ಹೂವು!
S janaki: ಎಸ್ ಜಾನಕಿ ಜೀವನ ಚರಿತ್ರೆ-1957ರಲ್ಲಿ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ; 2017ರಲ್ಲಿ ಅಧಿಕೃತ ವಿದಾಯ!