
ಇದು ಪರೀಕ್ಷೆ (Exam) ಟೈಂ. ಮಕ್ಕಳು ಓದೋದ್ರಲ್ಲಿ ಬ್ಯುಸಿ. ಪಾಲಕರು ಮಕ್ಕಳನ್ನು ಓದ್ಸೋದ್ರಲ್ಲಿ ಬ್ಯುಸಿ. ಪರೀಕ್ಷೆಯಲ್ಲಿ ಒಳ್ಳೆ ಮಾರ್ಕ್ಸ್ (Marks) ತರ್ಬೇಕು ಅನ್ನೋದು ಮಕ್ಕಳು ಹಾಗೂ ಪಾಲಕರಿಬ್ಬರ ಗುರಿ. ಕೆಲ ಮಕ್ಕಳು ತುಂಬಾ ಚುರುಕಾಗಿರ್ತಾರೆ. ಓದಿ, ವಿಷ್ಯವನ್ನು ನೆನಪಿನಲ್ಲಿಟ್ಟುಕೊಂಡು ಅದನ್ನು ಪೇಪರ್ ಮೇಲೆ ಬಟ್ಟಿ ಇಳಿಸ್ತಾರೆ. ಮತ್ತೆ ಕೆಲ ಮಕ್ಕಳಿಗೆ ಓದು ದೂರ. ಪ್ರಶ್ನೆ ಪತ್ರಿಕೆ (Question Paper) ಕೈನಲ್ಲಿ ಹಿಡಿತಿದ್ದಂತೆ ಆನ್ಸರ್ ಮರೆತು ಹೋಗುತ್ತೆ. ಮಕ್ಕಳು ಪರೀಕ್ಷೆ ಮುಗಿಸಿ ಬಂದ್ಮೇಲೆ ಉತ್ತರ ಸರಿಯಾಗಿ ಬರೆದಿದ್ದೇನೆ ಅಂತ ಪಾಲಕರಿಗೆ ಹೇಳ್ತಾರೆ. ಆದ್ರೆ ಎಲ್ಲ ಪಾಲಕರು ಇದನ್ನು ನಂಬೋದಿಲ್ಲ. ಸಣ್ಣಪುಟ್ಟ ತಪ್ಪು ಉತ್ತರ ಪತ್ರಿಕೆಯಲ್ಲಿ ಇದ್ದೇ ಇರುತ್ತೆ, ಇಲ್ಲ ಶಿಕ್ಷಕರಿಗೆ ತೃಪ್ತಿ ನೀಡುವಂತ ಆನ್ಸರ್ ಇರೋದಿಲ್ಲ. ಹಾಗಾಗಿ ಒಂದೆರಡು ಮಾರ್ಕ್ಸ್ ಕಟ್ ಆಗುತ್ತೆ ಅನ್ನೋದು ಪಾಲಕರ ನಂಬಿಕೆ. ಅದೇ ರೀತಿ ಮಾರ್ಕ್ಸ್ ಕಡಿಮೆ ಬಂದಾಗ, ಮಕ್ಕಳು ಕೂಡ ಎಲ್ಲ ಹೊಣೆಯನ್ನು ಶಿಕ್ಷಕರ ಮೇಲೆ ಹಾಕ್ತಾರೆ. ಆದ್ರೆ ಶಿಕ್ಷಕರಿಗೆ ಮಾರ್ಕ್ಸ್ ಕಟ್ ಮಾಡೋಕೆ ಅವಕಾಶ ಇಲ್ಲದಂತೆ ನೀವು ಉತ್ತರ ಬರೆದ್ರೆ ಔಟ್ ಆಫ್ ಔಟ್ ಬರೋದ್ರಲ್ಲಿ ಸಂಶಯವೇ ಇಲ್ಲ.
ಈಗ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಪತ್ರಿಕೆ (Answer Sheet)ಯೊಂದು ವೈರಲ್ ಆಗಿದೆ. ಶಿಕ್ಷಕರು, ವಿದ್ಯಾರ್ಥಿ ಉತ್ತರ ಪತ್ರಿಕೆ ತೋರಿಸ್ತಾ, ಅದ್ರ ಬಗ್ಗೆ ವಿವರಣೆ ನೀಡ್ತಿದ್ದಾರೆ. ನೀವು ಎಷ್ಟು ಸರಿಯಾಗಿ ಉತ್ತರ ಬರೆಯುತ್ತೀರಿ ಅನ್ನೋದು ಮಾತ್ರ ಮುಖ್ಯವಲ್ಲ, ಉತ್ತರವನ್ನು ಎಷ್ಟು ಸುಂದರವಾಗಿ ಹಾಗೂ ಮನಮುಟ್ಟುವಂತೆ ಬರೆಯುತ್ತೀರಿ ಎಂಬುದೂ ಮುಖ್ಯ. ನಿಮ್ಮ ಹ್ಯಾಂಡ್ ರೈಟಿಂಗ್ (Handwriting) ಜೊತೆ ನೀವು ನೀಡುವ ವಿವರಣೆ, ಅದಕ್ಕೆ ಮಾಡಿದ ಅಲಂಕಾರ ಕೂಡ ಮುಖ್ಯವಾಗುತ್ತದೆ.
ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟ ವಿದ್ಯಾರ್ಥಿ, ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷೆಗೆ ಹಾಜರು!
ವೈರಲ್ ಆಗಿರುವ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿ, ಮೇನ್ ಹೆಡ್ಡಿಂಗ್ ಬರೆದಿದ್ದಾನೆ. ಅದ್ರ ಕೇಳಗೆ ಪ್ರಶ್ನೆ ಬರೆದಿದ್ದಾನೆ. ನಂತ್ರ ಉತ್ತರವನ್ನು ಬರೆದಿದ್ದಾನೆ. ಉತ್ತರದಲ್ಲಿ ಅತಿ ಮುಖ್ಯ ವಿಷ್ಯದ ಕೆಳಗೆ ಗೆರೆ ಎಳೆದು ಹೈಲೈಟ್ ಮಾಡಿದ್ದಾನೆ. ಎಲ್ಲವನ್ನು ಉತ್ತರ ಪತ್ರಿಕೆಯಲ್ಲಿ ವಿವರಿಸಿದ್ದಾನೆ. ಇದನ್ನು ನೋಡಿದ ಶಿಕ್ಷಕರು ಖುಷಿಯಾಗಿದ್ದಾರೆ. ಇಷ್ಟು ಸುಂದರವಾಗಿ ಉತ್ತರ ಬರೆದ್ರೆ, ಶಿಕ್ಷಕರಿಗೆ ಮಾರ್ಕ್ಸ್ ಕಟ್ ಮಾಡೋಕೆ ಮನಸ್ಸು ಬರೋದಿಲ್ಲ ಅಂತ ಶಿಕ್ಷಕರು ವಿಡಿಯೋದಲ್ಲಿ ಹೇಳೋದನ್ನು ಕೇಳ್ಬಹುದು. ವೈರಲ್ ವಿಡಿಯೋದಲ್ಲಿ ವಿದ್ಯಾರ್ಥಿ ಅಕ್ಷರ ಕೂಡ ತುಂಬಾ ಸುಂದರವಾಗಿದೆ. ಮುತ್ತು ಉದುರಿಸಿದಂತೆ ಉತ್ತರ ಪತ್ರಿಕೆ ಇದ್ದು, ಎಲ್ಲಿಯೂ ಗೀಚಲಾಗಿಲ್ಲ.
ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಿಂತ ಸ್ಮಾರ್ಟ್ ಆಗಬೇಕು: ಸದ್ಗುರು ಪರೀಕ್ಷಾ ಪೇ ಚರ್ಚಾ
ಈ ವಿಡಿಯೋ ನೋಡಿದ ಬಳಕೆದಾರರು ವಿದ್ಯಾರ್ಥಿ ಕೆಲಸವನ್ನು ಮೆಚ್ಚಿದ್ದಾರೆ. ಇಷ್ಟು ಸುಂದರವಾಗಿ ಹಾಗೂ ವಿವರವಾಗಿ ಬರೆಯಲು ಎಲ್ಲಿ ಟೈಂ ಸಿಗುತ್ತೆ ಎಂಬ ಪ್ರಶ್ನೆಯನ್ನು ಕೆಲವರು ಇಟ್ಟಿದ್ದಾರೆ. ವಿದ್ಯಾರ್ಥಿ ಉತ್ತರವನ್ನು ಮಾತ್ರವಲ್ಲ ಅಕ್ಷರವನ್ನೂ ಸುಂದರವಾಗಿ ಬರೆದಿದ್ದಾನೆ ಎಂದು ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಿಡಿಯೋವನ್ನು ಟೀಕಿಸಿದ್ದಾರೆ. ಇದು ಪರೀಕ್ಷೆಯಲ್ಲಿ ಬರೆದ ಉತ್ತರ ಪತ್ರಿಕೆ ಅಲ್ಲ, ಮನೆಯಲ್ಲಿ ಬರೆಯಲಾಗಿದೆ, ಇಷ್ಟೊಂದು ಸುಂದರ ಹಾಗೂ ವಿವರವಾಗಿ ಪರೀಕ್ಷೆಯಲ್ಲಿ ಬರೆಯೋದು ಕಷ್ಟ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಪರೀಕ್ಷೆಯಲ್ಲಿ ಎರಡು ಬಣ್ಣದ ಇಂಕ್ ಬಳಸುವ ಅನುಮತಿ ಇಲ್ಲ. ಹಾಗಾಗಿ ಇದು ಫೇಕ್ ವಿಡಿಯೋ ಎಂದು ಆರೋಪ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ