ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಪಕೋಡಾ ಫ್ರೈ... Watch video

Suvarna News   | Asianet News
Published : Jan 01, 2022, 03:39 PM IST
ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಪಕೋಡಾ ಫ್ರೈ... Watch video

ಸಾರಾಂಶ

ಬಿಸಿ ಎಣ್ಣೆಯಲ್ಲಿ ಕೈ ಅದ್ದಿದ ಪಕೋಡಾ ತಯಾರಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಜೈಪುರ(ಜ.1): ಅಡುಗೆ ಮಾಡುವಾಗ ಸಾಸಿವೆಯೊಂದು ಸಿಡಿದು ಮುಖಕ್ಕೆ ರಾಚಿದರೆ ನಾವು ನೋವಿನಿಂದ ಕೂಗಾಡುತ್ತೇವೆ. ಆದರೆ ಇಲ್ಲೋರ್ವ ರಸ್ತೆ ಬದಿ ವ್ಯಾಪಾರಿ, ಕುದಿಯುತ್ತಿರುವ ಎಣ್ಣೆಗೆ ಕೈ ಹಾಕುತ್ತಿದ್ದಾನೆ. ಆದರೂ ಆತನಿಗೆ ಏನು ಆಗಿಲ್ಲ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು,  ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಜೈಪುರ(Jaipur)ದ ಪಕೋಡಾ ತಯಾರಕನೋರ್ವ ಪಕೋಡಾ (pakoda) ತಯಾರಿಸುವ ವೇಳೆ ಹೀಗೆ ಕುದಿಯುವ ಎಣ್ಣೆಯಲ್ಲಿ ಕೈ ಹಾಕುತ್ತಿರುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋವನ್ನು ಮುಂಬೈ ಮೂಲದ ಬ್ಲಾಗರ್‌ ಒಬ್ಬರು ರೆಕಾರ್ಡ್‌ ಮಾಡಿ ಇನ್ಸ್ಟಾಗ್ರಾಮ್‌ (ನಲ್ಲಿ ಹಾಕಿದ್ದಾರೆ. ಕುದಿಯುವ ಎಣ್ಣೆಗೆ ಕೈ ಹಾಕಿದರು ಆತನಿಗೆ ಏನು ಆಗದೇ  ಇರುವುದನ್ನು ಕಂಡು ವಿಡಿಯೋ ವೀಕ್ಷಿಸಿದ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

Eatable Tea Cups: ಚಹಾ ಕುಡಿದು ಕಪ್ ತಿನ್ನಿ..! ಗಮನ ಸೆಳೆಯುತ್ತಿದೆ ಟೀ ಸ್ಟಾಲ್

ಜೈಪುರದಲ್ಲಿ ರಸ್ತೆಬದಿ  ಕಿಸಾನ್‌ ಪಕೋಡೆ ವಾಲಾ ಹೆಸರಿನ ಫುಡ್‌ಸ್ಟಾಲ್‌ವೊಂದರಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ಕಡಾಯಿಯಲ್ಲಿ ಪಕೋಡಾ ಕಾಯಿಸುತ್ತಿದ್ದು, ಅವರು ಪಕೋಡಾವನ್ನು ಬಿಸಿಯಾದ ಎಣ್ಣೆಗೆ ಹಾಕುತ್ತಿದ್ದಾರೆ. ನಂತರ ಕೈಯನ್ನು ಕುದಿಯುತ್ತಿರುವ ಎಣ್ಣೆಗೆ ಮುಳುಗಿಸಿ  ಏನೂ ಆಗಿಲ್ಲವೆಂದು ವಿಡಿಯೋ ಮಾಡುತ್ತಿದ್ದ ಬ್ಲಾಗರ್‌ಗೆ ತೋರಿಸಿದ್ದಾರೆ. ಜೈಪುರದ ಹೀಟ್‌ ಪ್ರೂಫ್‌ ಪಕೋಡಾವಾಲಾ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಹುತೇಕರು ಆತನ ಕೈಗೆ ಏನು ಆಗಿಲ್ಲವೇ ಎಂದು ಪ್ರಶ್ನಿಸಿದ್ದರೆ ಮತ್ತೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಸಾರಿ ಉಟ್ಟ ನಾರಿಯ ಜಬರ್‌ದಸ್ತ್‌ ಡಾನ್ಸ್‌.. ಎರ್ರಾಬಿರ್ರಿ ಸ್ಟೆಪ್‌ಗೆ ಸುತ್ತಲಿದ್ದವರು ಗಾಬರಿ

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಇಂತಹ ಚಿತ್ರ ವಿಚಿತ್ರ ಅಚ್ಚರಿ ಎನಿಸುವ ಘಟನೆಗಳ ವಿಡಿಯೋ ಬೇಕಾದಷ್ಟು ಸಿಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ