ಮುದ್ದು ಮಾಡ್ತಿದ್ದವನಿಗೆ ಸಿಟ್ಟಿಗೆದ್ದು ಕಚ್ಚೇ ಬಿಟ್ಟ ಬೀದಿ ನಾಯಿ: ಭಯಾನಕ ವೀಡಿಯೋ ವೈರಲ್

Published : Sep 09, 2024, 04:30 PM IST
ಮುದ್ದು ಮಾಡ್ತಿದ್ದವನಿಗೆ ಸಿಟ್ಟಿಗೆದ್ದು ಕಚ್ಚೇ ಬಿಟ್ಟ ಬೀದಿ ನಾಯಿ: ಭಯಾನಕ ವೀಡಿಯೋ ವೈರಲ್

ಸಾರಾಂಶ

ಇಲ್ಲೊಂದು ಕಡೆ ಬೀದಿ ನಾಯಿಯೊಂದು ತನ್ನನ್ನು ಮುದ್ದಾಡುತ್ತಿದ್ದ ವ್ಯಕ್ತಿಯ ಮೇಲೆಯೇ ಎರಗಿ ಆತನನ್ನು ಗಾಯಗೊಳಿಸಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.  

ಪ್ರಾಣಿಗಳ  ಕೆಲ ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಮದವೇರಿದ ವೇಳೆ ಆನೆಗಳು ತಮ್ಮನ್ನು ಸಾಕಿ ಸಲಹಿದ ಮಾಲೀಕರನ್ನೇ ಸಾಯಿಸಿವೆ. ಅದೇ ರೀತಿ ಇಲ್ಲೊಂದು ಕಡೆ ಬೀದಿ ನಾಯಿಯೊಂದು ತನ್ನನ್ನು ಮುದ್ದಾಡುತ್ತಿದ್ದ ವ್ಯಕ್ತಿಯ ಮೇಲೆಯೇ ಎರಗಿ ಆತನನ್ನು ಗಾಯಗೊಳಿಸಿದೆ. ಈ ಭಯಾನಕ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.  

ವೀಡಿಯೋದಲ್ಲಿ ಕಾಣಿಸುವಂತೆ ವ್ಯಕ್ತಿಯೊಬ್ಬರು ರಸ್ತೆ ಬದಿ ಪಾರ್ಕ್ ಮಾಡಿರುವ ಕಾರುಗಳ ಸಮೀಪದಲ್ಲಿ ನಿಂತು ಕೊಂಡಿದ್ದಾರೆ. ಈ ವೇಳೆ ಅಲ್ಲಿಗೆ ಬೀದಿನಾಯಿಯೊಂದು ಬಂದಿದೆ. ಈ ಬೀದಿನಾಯಿ ನಿಧಾನವಾಗಿ ಅಲ್ಲಿ ನಿಂತಿದ ವ್ಯಕ್ತಿಯ ಬಳಿ ಬಂದಿದ್ದು, ಪರಿಚಯವಿರುವಂತೆ ಬಾಲ ಅಲ್ಲಾಡಿಸಿದೆ. ಹೀಗಾಗಿ ಅಲ್ಲಿ ನಿಂತಿದ್ದ ವ್ಯಕ್ತಿಯೂ ಕೂಡ ಸಮಾಧಾನದಿಂದ ಹಾಗೂ ಧೈರ್ಯವಾಗಿ ನಾಯಿಯ ಮೈದಡವಿ ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ನಾಯಿಯ ಬೆನ್ನು ಸವರಿ ಮುದ್ದಾಡಿದ್ದಾರೆ. ಸರಿಸುಮಾರು ನಿಮಿಷದವರೆಗೂ ಅವರು ನಾಯಿಯ ತಲೆ ಮುಟ್ಟಿ ಮೈದಡವಿ ಮಾತನಾಡಿಸಿದ್ದಾರೆ. 

12 ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ: ವೃದ್ಧೆ ಸಾವು

ಆದರೆ ಇದಾಗಿ ಕೆಲ ಕ್ಷಣಗಳಲ್ಲೇ ನಾಯಿಗೆ ಏನಾಯ್ತೋ ಏನೋ ನಾಯಿ ಆಕ್ರಮಣಕಾರಿಯಾಗಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದೆ. ಮುದ್ದಾಡುತ್ತಿದ್ದವನ ಮೇಲೆಯೇ ಎಗರಿ ಬಿದ್ದ ನಾಯಿ ಆತನ ಮೇಲೆ ದಾಳಿ ನಡೆಸಿ ಆತನ ಕೈಗೆ ಕಚ್ಚಿದೆ. ಈ ಅನಿರೀಕ್ಷಿತ ದಾಳಿಯಿಂದ ಆತನಿಗೂ ಗಾಯಗಳಾಗಿದ್ದಲ್ಲದೇ ಆತ ಭಯಗೊಂಡಿದ್ದಾರೆ. ಈ ವೇಳೆ ಅಲ್ಲದೇ ಕಾರು ವಾಶ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಓಡಿ ಬಂದು ನಾಯಿಯನ್ನು ಅಲ್ಲಿಂದ ಓಡಿಸಿದ್ದಾರೆ. 

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಭಯ ವ್ಯಕ್ತಪಡಿಸಿದ್ದಾರೆ. ಬೀದಿ ನಾಯಿಗಳಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಬೇಕು ಎಂಬುದಕ್ಕೆ ಈ ಘಟನೆ ಉದಾಹರಣೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ನಾಯಿಯ ತಲೆ ಹಾಗೂ ಬೆನ್ನನ್ನು ಮುಟ್ಟಬಾರದು ಅವುಗಳು ಭಯಗೊಳ್ಳುತ್ತವೆ ಎಂದು ಕಾಮೆಂಟ್ ಮಾಡಿದ್ದಾರೆ. ನಾಯಿಗೆ ಸಡನ್ ಆಗಿ ಏನಾಯ್ತು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ನಾಯಿಗಳಿಗೆ ಅವುಗಳ ಕಿವಿಗಳನ್ನು ಮುಟ್ಟುವುದು ನೋವು ಮಾಡುವುದು ಎಂದರೆ ಆಗುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಯ ಮೂಡಿಸುತ್ತಿದೆ.  ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

12 ಬೀದಿ ನಾಯಿಗಳ ಹಿಂಡು ಏಕಾಏಕಿ ದಾಳಿ: ವೃದ್ಧೆ ಸಾವು

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!