ಮಾಸ್ಕ್‌ ಇದ್ರೆ ಕಾರಲ್ಲಿ ಗಂಡನಿಗೆ ಮುತ್ತು ಕೊಡೋದು ಹೇಗೆ?

Published : Apr 20, 2021, 08:42 AM IST
ಮಾಸ್ಕ್‌ ಇದ್ರೆ ಕಾರಲ್ಲಿ ಗಂಡನಿಗೆ ಮುತ್ತು ಕೊಡೋದು ಹೇಗೆ?

ಸಾರಾಂಶ

 ಕಾರು ಪ್ರಯಾಣದ ವೇಳೆ ಮಾಸ್ಕ್‌ ಧರಿಸದೇ ಇದ್ದನ್ನು ಪ್ರಶ್ನಿಸಿದ ಪೊಲೀಸರು|  ನನ್ನ ಗಂಡನಿಗೆ ಮುತ್ತು ಕೊಡಬೇಕಾದರೆ ಏನು ಮಾಡುವುದು ಎಂದು ಮರುಪ್ರಶ್ನೆ

ನವದೆಹಲಿ(ಏ.20): ಕಾರು ಪ್ರಯಾಣದ ವೇಳೆ ಮಾಸ್ಕ್‌ ಧರಿಸದೇ ಇದ್ದನ್ನು ಪ್ರಶ್ನಿಸಿದ ಪೊಲೀಸರಿಗೆ ಮಹಿಳೆಯೊಬ್ಬರು, ಕಾರಿನಲ್ಲಿ ಮಾಸ್ಕ್‌ ಏಕೆ? ನನ್ನ ಗಂಡನಿಗೆ ಮುತ್ತು ಕೊಡಬೇಕಾದರೆ ಏನು ಮಾಡುವುದು ಎಂದು ಮರುಪ್ರಶ್ನೆ ಹಾಕಿ ಕೇಸು ಹಾಕಿಸಿಕೊಂಡ ಘಟನೆ ದೆಹಲಿಯಲ್ಲಿ ಭಾನುವಾರ ನಡೆದಿದೆ.

ಪಂಕಜ್‌ ಮತ್ತು ಅಭಾ ದಂಪತಿ ಮಾಸ್ಕ್‌ ಧರಿಸದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಪೊಲೀಸರು ಅಡ್ಡಗಟ್ಟಿದಾಗ, ಅವರಿಗೇ ಧಮಕಿ ಹಾಕಿದ ಅಭಾ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದೂ ಅಲ್ಲದೆ ಮೇಲಿನಂತೆ ಪ್ರಶ್ನೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ಮೇಲೂ ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ನಡುವೆ ಸೋಮವಾರ ನ್ಯಾಯಾಲಯಕ್ಕೆ ತೆರಳುವ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪಂಕಜ್‌, ಮಾಸ್ಕ್‌ ಹಾಕಿಕೊಳ್ಳುವಂತೆ ಹೇಳಿದರೂ ಪತ್ನಿ ಕೇಳಲಿಲ್ಲ. ಜೊತೆಗೆ ನನಗೂ ಹಾಕಿಕೊಳ್ಳಲು ಬಿಡಲಿಲ್ಲ ಎಂದು ತನ್ನ ನೋವು ತೋಡಿಕೊಂಡಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India news live: ಸೌದಿ ಅರೇಬಿಯಾಗೆ ಪಾಕಿಸ್ತಾನದಿಂದ 13,000 ಸೈನಿಕರು, 18 ಜೆಟ್ ರವಾನೆ
Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರ: ಹೊರಗಿನ ಖಜಾನೆ ಲೆಕ್ಕ ಮುಗೀತು, ಈಗ ಒಳಗಿನ ಸರದಿ!