
ಕೊಲ್ಹಾಪುರ(ಸೆ.15) ಮಕ್ಕಳ ಮೇಲೆ ಮಲತಾಯಿ ಕ್ರೌರ್ಯಗಳು, ಕಿರುಕಳ ಘಟನೆಗಳು ಸಾಕಷ್ಟು ವರದಿಯಾಗಿದೆ. ಮಲತಾಯಿಯ ಕೋಪ ಆಕ್ರೋಶಕ್ಕೆ ಹಲವು ಪುಟ್ಟ ಕಂದಮ್ಮಗಳು ನಲಿದಾಟ ನಿಂತುಹೋದ ಉದಾಹರಣೆಗಳಿವೆ. ಇದೀಗ ಕೊಲ್ಹಾಪುರದ ಮಲತಾಯಿಯೊಬ್ಬಳ ಕ್ರೌರ್ಯಕ್ಕೆ 5 ವರ್ಷದ ಮಗಳು ತೀವ್ರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 5 ವರ್ಷದ ಮಗಳು ನಿದ್ದೆಯಲ್ಲಿ ಬೆಡ್ ಮೇಲೆ ಮೂತ್ರ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ಮಲಗಿದ್ದಾಗಲೆ ಮಗಳ ತುಟಿ, ಬಾಯಿ, ಕುತ್ತಿಗೆ ಹಾಗೂ ಗುಪ್ತಾಂಗಕ್ಕೆ ರಾಡ್ ಬಿಸಿ ಮಾಡಿ ಸುಟ್ಟ ಘಟನೆ ವರದಿಯಾಗಿದೆ.
ಮೊಕಿಂದರಾವ್ ಮ್ಯಾಗ್ರೆ ಮೊದಲ ಪತ್ನಿ ಮೃತಪಟ್ಟಿದ್ದಾರೆ. ಮಗಳು ಚಿಕ್ಕ ವಯಸ್ಸಿನಲ್ಲಿ ತಾಯಿ ಇಲ್ಲದ ಕಾರಣ ಮ್ಯಾಗ್ರೆ ಮತ್ತೊಂದು ಮದುವೆಯಾಗಿದ್ದರು. ಮಲತಾಯಿಯಾಗಿ ಬಂದ ಪೂಜಾ ಶುಭಂ ಮ್ಯಾಗ್ರೆ ಐದು ವರ್ಷದ ಮಗಳಿಗೆ ಮಲತಾಯಿ ಆಗುವ ಬದಲು ರಾಕ್ಷಸಿಯಾಗಿದ್ದಾಳೆ. ಮೊಕಂದರಾವ್ ಮನೆಯಲ್ಲಿ ಇಲ್ಲದ ವೇಳೆ ಹಲವು ಬಾರಿ ಮಗಳ ಮೇಲೆ ಹಲ್ಲೆ ಮಾಡಿದ್ದಾಳೆ. ತಂದೆ ಬಳಿ ಹೇಳಿದರೆ ಮೊಕಿಂದರಾವ್ ಇಲ್ಲದ ವೇಳೆ ಕಣ್ಣು ಕಿತ್ತು ಹಾಕುವುದಾಗಿ ಬೆದರಿಸಿದ್ದಾರೆ. ಈ ಬಾರಿ ಮೊಕಿಂದರಾವ್ ಕೆಲಸದ ನಿಮಿತ್ತ ಮನೆಗೆ ಬರುವಾಗ ತಡವಾಗಿದೆ.
10 ವರ್ಷದ ಮಗನ ಮೇಲೆ ಕುಳಿತು ಆತನ ಉಸಿರು ನಿಲ್ಲಿಸಿದ 150 ಕೆಜಿ ತೂಕದ ತಾಯಿ
ಮಗಳು ರಾತ್ರಿಯಾಗುತ್ತಿದ್ದಂತೆ ಬೇಗನೆ ಮಲಗಿದ್ದಾಳೆ. ಆದರೆ ನಿದ್ದೆಯಲ್ಲಿ ಬೆಡ್ ಮೇಲೆ ಮೂತ್ರ ಮಾಡಿದ್ದಾಳೆ ಎಂದು ಮಲತಾಯಿ ಪೂಜಾ ಪಿತ್ತ ನೆತ್ತಿಗೇರಿದೆ. ನಿದ್ದೆಗೆ ಜಾರಿದ್ದ ಐದು ವರ್ಷದ ಮಗಳ ಎಬ್ಬಿಸಿ ಮಲತಾಯಿ ಪೂಜ ರೌದ್ರವತಾರ ತಾಳಿದ್ದಾಳೆ. ರಾಡ್ ಬಿಸಿ ಮಾಡಿ ತಂದ ಪೂಜಾ, ಮಗಳ ತುಟಿ, ಬಾಯಿ, ಕುತ್ತಿಗೆ, ಗುಪ್ತಾಂಗದ ಮೇಲೆ ಬರೆ ಎಳೆದಿದ್ದಾಳೆ. ಚೀರಾಡುತ್ತ ಎದ್ದ ಬಾಲಕಿ ತೀವ್ರ ಸುಟ್ಟ ಗಾಯದಿಂದ ನರಳಿದ್ದಾಳೆ.
ಸದ್ದು ಕೇಳಿದರೆ ಮತ್ತೆ ಸುಡುವುದಾಗಿ ಬೆದರಿಸಿದ ಮಲತಾಯಿ ಕ್ರೌರ್ಯ ಮುಂದುವರಿಸಿದ್ದಾಳೆ. ಆದರೆ ಕೋಣೆಯ ಮೂಲೆಯಲ್ಲಿ ಕುಳಿತು ಅಳಲು ಅಗದೆ, ನೋವು ತಡೆದುಕೊಳ್ಳಲು ಸಾಧ್ಯವಾಗದೆ ನರಳಿದ್ದಾಳೆ. ಕೆಲ ಹೊತ್ತಿನ ಬಂದೆ ತಂದೆ ಆಗಮಿಸಿದಾಗ ಮಗಳು ತುಟಿ, ಬಾಯಿ, ಮೈಯೆಲ್ಲಾ ಸುಟ್ಟಗಾಯಗಳಿಂದ ಅಳುತ್ತಿರುವುದು ಗಮನಿಸಿ ಆತಂಕಗೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆ ಕರೆದೊಯ್ದಿದ್ದಾರೆ. ತುರ್ತು ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಿದ್ದಾರೆ.
ಸುಟ್ಟ ಗಾಯದಿಂದ ತೀವ್ರ ನರಳಾಡುತ್ತಿರುವ ಮಗಳಿಗೆ ಚಿಕಿತ್ಸೆ ಮುಂದುವರಿದಿದೆ. ಇತ್ತ ಮೊಕಂದರಾವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ನೇರವಾಗಿ ಆಸ್ಪತ್ರೆಗೆ ತೆರಳಿ ಬಾಲಕಿಯ ಭೇಟಿ ಮಾಡಿದ್ದಾರೆ. ವೈದ್ಯರಿಂದ ವರದಿ ತರಿಸಿಕೊಂಡ ಪೊಲೀಸರು ಪೂಜಾ ಮ್ಯಾಗ್ರೆ ಬಂಧಿಸಿದ್ದಾರೆ.
ಮಗು ಪಡೆಯಲು 11 ವರ್ಷ ತಪಸ್ಸು ಮಾಡಿದ ತಾಯಿ : ಆಸ್ತಿಗಾಗಿ ಐದೇ ತಿಂಗಳಿಗೆ ಬಲಿ ಪಡೆದಳು ಮಲತಾಯಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ