ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ತುರ್ತು ಎಚ್ಚರಿಕೆ ನೀಡಿದ MEA

Published : Apr 07, 2026, 09:30 PM IST
MEA Statement Pakistan Nuclear

ಸಾರಾಂಶ

ಅಮೆರಿಕ ದಾಳಿ ಬೆನ್ನಲ್ಲೇ ಇರಾನ್‌ನಲ್ಲಿರುವ ಭಾರತೀಯರಿಗೆ ತುರ್ತು ಎಚ್ಚರಿಕೆ ನೀಡಿದ MEA,  ಡೀಲ್ ಒಪ್ಪದಿದ್ದರೆ ಇರಾನ್ ನಾಗರೀಕತೆಯನ್ನೇ ಮುಗಿಸುತ್ತೇವೆ ಎಂದು ವಾರ್ನಿಂಗ್ ನೀಡಿದ ಬೆನ್ನಲ್ಲೇ ಭಾರತ ಮಹತ್ವದ ಮಾರ್ಗಸೂಚಿ ನೀಡಿದೆ. 

ನವದೆಹಲಿ (ಏ.07) ಇರಾನ್ ಮೇಲೆ ಅಮೆರಿಕ ದಾಳಿ ತೀವ್ರಗೊಳಿಸಿದೆ. ಇದರ ಬೆನ್ನಲ್ಲೇ ಹೊರ್ಮುಜ್ ಜಲಸಂಧಿ ತೆರೆಯಲು ಒಪ್ಪದಿದ್ದರೆ ಇರಾನ್ ನಾಗರೀಕತೆಯನ್ನೇ ಸುಟ್ಟು ಭಸ್ಮಮಾಡುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ. ಇತ್ತ ಖರ್ಗ್ ದ್ಪೀಪದ ಮೇಲೆ ಅಮೆರಿಕ ಏರ್ ಸ್ಟ್ರೈಕ್ ನಡೆಸಿದೆ. ತೈಲ ಘಟಕಗಳ ಮೇಲೆ ದಾಳಿ ಆರಂಭಿಸಿದೆ. ಇತ್ತ ಇರಾನ್ ಒಂದು ಹೆಜ್ಜೆ ಹಿಂದೆ ಇಟ್ಟಿಲ್ಲ.ಹೀಗಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವು ಸಾಧ್ಯತೆ. ಈ ಬೆಳವಣಿಗೆ ನಡುವೆ ಭಾರತ ವಿದೇಶಾಂಗ ಇಲಾಖೆ ಇರಾನ್‌ನಲ್ಲಿರುವ ಭಾರತೀಯರಿಗೆ ಮಹತ್ವದ ಸೂಚನೆ ನೀಡಿದೆ.

ಮುಂದಿನ 48 ಗಂಟೆ..ಎಚ್ಚರಿಕೆ

ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತ ಮಹತ್ವದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮುಂದಿನ 48 ಗಂಟೆ ಅನಗತ್ಯ ಪ್ರಯಾಣ ಬೇಡ. ಎಲ್ಲಿದ್ದೀರೋ ಅಲ್ಲೆ ಇರುವಂತೆ ಸೂಚಿಸಿದೆ. ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯಲು ಸೂಚಿಸಿದೆ. ಇದೇ ವೇಳೆ ಕೆಲ ಸೂಕ್ಷ್ಮ ಪ್ರದೇಶಗಳಿಂದ ದೂರವಿರಲು ಸೂಚಿಸಿದೆ. ಪ್ರಮುಖಾಗಿ ತೈಲ ಸ್ಥಾವರ, ಘಟಕ, ಇರಾನ್ ಸರ್ಕಾರದ ಕಟ್ಟಡಗಳು, ಕಚೇರಿಗಳಿಂದ ದೂರವಿರಲು ಸೂಚಿಸಿದೆ.

ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ

ಒಂದೆಡೆಯಿಂದ ಬೇರೆಗೆ ಪ್ರಯಾಣ ಮಾಡಿದಿರಿ. ತುರ್ತು ಅಗತ್ಯ ಹೊರತುಪಡಿಸಿ ಇನ್ಯಾವುದೇ ಕಾರಣಕ್ಕೂ ಪ್ರಯಾಣ ಬೇಡ.ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ ಎಂದು ವಿದೇಶಾಂಗ ಇಲಾಖೆ ಸೂಚಿಸಿದೆ.ತುರ್ತು ಅಗತ್ಯಕ್ಕಾಗಿ, ಸಹಾಯಕ್ಕಾಗಿ ವಿಶೇಷ ಸಹಾಯವಾಣಿ ಸಂಪರ್ಕ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಇಮೇಲ್ ಐಡಿ, ದೂರವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದೆ. ಭಾರತೀಯರು ಇರಾನ್‌ನಲ್ಲಿಪುವ ರಾಯಭಾರ ಕಚೇರಿಯಲ್ಲಿ ಹೆಸರು ನೋಂದಾಯಿಸಲು ಸೂಚಿಸಲಾಗಿದೆ.

ಇರಾನ್ ಪ್ರಯಾಣವನ್ನು ಸದ್ಯಕ್ಕೆ ಮಾಡದಂತೆ ಭಾರತ ಸೂಚಿಸಿದೆ. ಭಾರತೀಯ ನಾಗರೀಕರು ಸದ್ಯ ಇರಾನ್ ಪ್ರಯಾಣ ಮುಂದೂಡುವಂತೆ ಹೇಳಿದೆ. ಸದ್ಯ ವಿಮಾನ ಲಭ್ಯತೆಗಳಿಲ್ಲ. ಹೀಗಾಗಿ ಪ್ರಯಾಣದ ಸಾಹಸಕ್ಕಿಂತ ಸುರಕ್ಷಿತ ಸ್ಥಳದಲ್ಲಿರುವಂತೆ ಸೂಚಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಾತಂಕುಲ ತಂದೆ ಮಗನ ಲಾಕಪ್‌ಡೆತ್ ಪ್ರಕರಣ: ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದ ರೇವತಿಗೆ 24*7 ಭಾರಿ ಬಿಗಿ ಭದ್ರತೆ
ಹುಡುಗಿಯರೇ ಹುಷಾರ್​: ನಿಮ್ಮನ್ನು ಟ್ರ್ಯಾಪ್​ ಮಾಡೋ ಹೊಸ ವಿಧಾನವಿದು, ಅರಿಯದೇ ಬಲೆಗೆ ಬೀಳೋದು ಹೇಗೆ ನೋಡಿ