ನ್ಯಾಯಾಂಗದ ವಿರುದ್ಧ ಹೇಳಿಕೆ : ಕ್ಷಮೆ ಕೇಳಲು ಲಲಿತ್‌ ಮೋದಿಗೆ ಸುಪ್ರೀಂ ಸೂಚನೆ

By Kannadaprabha NewsFirst Published Apr 14, 2023, 1:31 PM IST
Highlights

ನ್ಯಾಯಾಧೀಶರೆಲ್ಲಾ ಯಾರದೋ ಜೇಬಿನಲ್ಲಿರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಂಗದ ವಿರುದ್ಧ ಮಾ.30 ರಂದು ಪೋಸ್ಟ್‌ ಹಾಕಿದ್ದ ಮಾಜಿ ಐಪಿಎಲ್‌ ಆಯುಕ್ತ ಲಲಿತ್‌ ಮೋದಿಯನ್ನು ಸುಪ್ರೀಕೋರ್ಟ್‌ ತೀವ್ರ ತರಾಟೆ ತೆಗೆದುಕೊಂಡಿದೆ.

ನವದೆಹಲಿ: ನ್ಯಾಯಾಧೀಶರೆಲ್ಲಾ ಯಾರದೋ ಜೇಬಿನಲ್ಲಿರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಂಗದ ವಿರುದ್ಧ ಮಾ.30 ರಂದು ಪೋಸ್ಟ್‌ ಹಾಕಿದ್ದ ಮಾಜಿ ಐಪಿಎಲ್‌ ಆಯುಕ್ತ ಲಲಿತ್‌ ಮೋದಿಯನ್ನು ಸುಪ್ರೀಕೋರ್ಟ್‌ ತೀವ್ರ ತರಾಟೆ ತೆಗೆದುಕೊಂಡಿದೆ. ಸಾರ್ವಜನಿಕವಾಗಿ ಕ್ಷಮಿಯಾಚಿಸುವಂತೆ ಲಲಿತ್ ಮೋದಿಗೆ ನಿರ್ದೇಶನ ನೀಡಿದೆ. ಅಲ್ಲದೇ ಮೋದಿ ಸಲ್ಲಿಸಿರುವ ಕೌಂಟರ್‌ ಅಫಿಡವಿಟ್‌ ಸಮರ್ಪಕವಾಗಿಲ್ಲ. ಇದರ ವಿಶ್ಲೇಷಣೆಯಿಂದ ನ್ಯಾಯಾಲಯ ತೃಪ್ತವಾಗಿಲ್ಲ ಎಂದ ನ್ಯಾ  ಎಂ.ಆರ್‌ ಉಷಾ ಹಾಗೂ ನ್ಯಾ

ಸಿ.ಟಿ ರವಿಕುಮಾರ್‌ ಅವರ ಪೀಠವು, ಲಲಿತ್‌ ಮೋದಿ (Lalit modi) ಯಾವುದೇ ಸಂಸ್ಥೆ ಅಥವಾ ನ್ಯಾಯಾಂಗಕ್ಕಿಂತ ಮಿಗಿಲಲ್ಲ. ನ್ಯಾಯಾಧೀಶರು ಜೇಬಿನಲ್ಲಿರುತ್ತಾರೆ ಎಂಬುದರ ಅರ್ಥ ಏನು? ನ್ಯಾಯಾಂಗ ದುರ್ಬಲವಾಗಿದೆ ಎಂದು ಅವರು ಭಾವಿಸಿದ್ದಾರೆಯೇ?’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ರಾಹುಲ್‌ಗೆ ಮತ್ತೆ ಸಂಕಷ್ಟ: ಲಂಡನ್‌ನಲ್ಲಿ ದೂರು ದಾಖಲಿಸುವ ಬೆದರಿಕೆಯೊಡ್ಡಿದ ಲಲಿತ್ ಮೋದಿ

ಅಲ್ಲದೇ ನ್ಯಾಯಾಲಯ ಹಾಗೂ ಕಾಗದದಲ್ಲಿ ಕ್ಷಮೆ ಕೇಳುವುದನ್ನು ನಾನು ನಂಬುವುದಿಲ್ಲ. ಸಾಮಾಜಿಕ ಮಾಧ್ಯಮ ಹಾಗೂ ಬೆಂಗಳೂರು, ಕೋಲ್ಕತಾ, ಮದ್ರಾಸ್‌, ಹೈದರಾಬಾದ್‌ (Hyderabad) ಮತ್ತು ದೆಹಲಿಗಳಲ್ಲಿ ಪ್ರಸಾರವಾಗುವ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕ್ಷಮೆಯಾಚಿಸಬೇಕು ಎಂಬಂತೆ ಸೂಚನೆ ನೀಡಿದೆ. ಅಲ್ಲದೇ ಇನ್ನು ಮುಂದೆ ನ್ಯಾಯಾಂಗಕ್ಕೆ ಧಕ್ಕೆ ತರುವಂತಹ ಇಂತಹ ಪೋಸ್ಟ್‌ಗಳನ್ನು ಹಾಕದಂತೆ ಎಚ್ಚರಿಕೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ಏ.24ಕ್ಕೆ ಮುಂದೂಡಲಾಗಿದೆ.

2 ವಾರದಲ್ಲಿ 2ನೇ ಬಾರಿಗೆ ಕೊರೋನಾ, ಮಗನಿಗೆ ಕಂಪನಿಯ ಜವಾಬ್ದಾರಿ ವಹಿಸಿದ ಲಲಿತ್‌ ಮೋದಿ!

click me!