ಕಡಿಮೆ ದರದ ಅಕ್ಕಿ: ರಾಜ್ಯಗಳಿಗೆ ಕೇಂದ್ರದಿಂದ ಭರ್ಜರಿ ರಿಯಾಯಿತಿ: ಪ್ರತಿ ಕೇಜಿಗೆ 22.50 ರು.

Published : Feb 18, 2025, 02:21 PM ISTUpdated : Feb 18, 2025, 02:28 PM IST
ಕಡಿಮೆ ದರದ ಅಕ್ಕಿ: ರಾಜ್ಯಗಳಿಗೆ ಕೇಂದ್ರದಿಂದ ಭರ್ಜರಿ ರಿಯಾಯಿತಿ: ಪ್ರತಿ ಕೇಜಿಗೆ 22.50 ರು.

ಸಾರಾಂಶ

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪ್ರತಿ ಕೆಜಿ ಅಕ್ಕಿಯನ್ನು ಕೇವಲ ₹22.50ಕ್ಕೆ ಮಾರಾಟ ಮಾಡಲಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಹೆಚ್ಚಿನ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಹೆಚ್ಚಾಗಿದ್ದು, 556 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇದೆ.

ಬೆಂಗಳೂರು : ಕೇಂದ್ರ ಸರ್ಕಾರ ಭಾರತೀಯ ಆಹಾರ ನಿಗಮದ (ಎಫ್​​ಸಿಐ) ಮೂಲಕ ರಾಜ್ಯ ಸರ್ಕಾರಗಳಿಗೆ, ಸರ್ಕಾರದ ಅಧೀನದ ನಿಗಮಗಳಿಗೆ ಪ್ರತಿ ಕೆ.ಜಿ. ಅಕ್ಕಿಗೆ ಕೇವಲ 22.50 ರು.ಗಳಂತೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

2024ರ ಜೂನ್​ನಿಂದ ಡಿಸೆಂಬರ್​ವರೆಗೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಅಕ್ಕಿ ಹಾಗೂ ಗೋಧಿ ಉತ್ಪಾದನೆ ಗಣನೀಯವಾಗಿ ಹೆಚ್ಚಳವಾಗಿದೆ. ಹೀಗಾಗಿ ದೇಶಾದ್ಯಂತ 556 ಲಕ್ಷ ಮೆಟ್ರಿಕ್​ ಟನ್​ ಅಕ್ಕಿ ದಾಸ್ತಾನು ಇದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಪ್ರತಿ ಕೆ.ಜಿ.ಗೆ 5.50 ರು. ಕಡಿಮೆ ದರದಲ್ಲಿ (ಕಳೆದ ಬಾರಿ ಕೆಜಿ ಅಕ್ಕಿಗೆ 28 ರು.ಗಳಂತೆ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಮಾಡಲಾಗಿತ್ತು) ಹೊಸ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ (ಒಎಂಎಸ್​ಎಸ್​), ಇ-ಹರಾಜು ಮೂಲಕ ವ್ಯಾಪಾರಿಗಳು, ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿ ಖಾಸಗಿಯವರೂ ಒಂದು ಟನ್​ನಿಂದ 5 ಸಾವಿರ ಟನ್​ವರೆಗೆ ಖರೀದಿಸಲು ಅವಕಾಶ ನೀಡಿದೆ.

ಹರಾಜು ಇಲ್ಲದೇ ಮಾರಾಟ: ಕಮ್ಯುನಿಟಿ ಕಿಚನ್ಸ್​ಗೆ ಪ್ರತಿ ಕೆ.ಜಿ. ಅಕ್ಕಿಯನ್ನು 22.50 ರು.ನಂತೆ ಮಾರಾಟ ಮಾಡಿದರೆ, ಕೇಂದ್ರ ಸಹಕಾರಿ ಸಂಸ್ಥೆಗಳಾದ ನೆಡ್​, ಎನ್​ಸಿಸಿಎಫ್‌, ಕೇಂದ್ರೀಯ ಭಂಡಾರ್​ಗಳಿಗೆ ಕೆ.ಜಿ. ಅಕ್ಕಿಗೆ 24 ರು.ನಂತೆ ಮಾರಾಟ ಮಾಡಲಾಗುತ್ತಿದೆ. ಸಣ್ಣ ಖಾಸಗಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ವ್ಯಕ್ತಿಗಳಿಗೆ ಪ್ರತಿ ಕೆ.ಜಿ.ಗೆ 28 ರು.ನಂತೆ ಮಾರಾಟ ಮಾಡುತ್ತಿದ್ದು ಖಾಸಗಿ ವ್ಯಕ್ತಿಗಳಿಗೆ, ಸಹಕಾರಿ ಸಂಸ್ಥೆಗಳಿಗೆ, ಸಹಕಾರಿ ಒಕ್ಕೂಟಗಳಿಗೆ ಇ-ಹರಾಜಿನ ಮೂಲಕ ಕೆ.ಜಿ.ಗೆ 28 ರು.ನಂತೆ ಮಾರಾಟ ಮಾಡಲು ಸೂಚನೆ ನೀಡಲಾಗಿದೆ. ಅಕ್ಕಿ ಕೊರತೆಯಿರುವ ಪ್ರದೇಶಗಳಲ್ಲಿ ಇ-ಹರಾಜು ಇಲ್ಲವೇ ನೇರವಾಗಿ ಮಾರಾಟ ಮಾಡಲು ಆದೇಶಿಸಲಾಗಿದೆ ಎಂದು ಎಫ್‌ಸಿಐ ಮೂಲಗಳು ತಿಳಿಸಿವೆ.

ನೂರಾರು ಕೋಟಿ ರು. ಉಳಿಕೆ

ಎಫ್‌ಸಿಐನಿಂದ ಪ್ರತಿ ಕೆಜಿ ಅಕ್ಕಿಗೆ 22.50 ರು.ನಂತೆ ಖರೀದಿಸಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಹಂಚಿದರೆ ನೂರಾರು ಕೋಟಿ ರು.ಉಳಿಕೆಯಾಗಲಿದೆ. ಪ್ರಸ್ತುತ ಡಿಬಿಟಿ ಮೂಲಕ ಪ್ರತಿ ಕೆಜಿಗೆ 34 ರು.ನಂತೆ ಹೆಚ್ಚುವರಿ 5 ಕೆಜಿ ಅಕ್ಕಿಗೆ 170 ರು.ನಗದನ್ನು ಖಾತೆಗೆ ಹಾಕಲಾಗುತ್ತಿದೆ. ಇದರಿಂದ ಪ್ರತಿ ತಿಂಗಳು ಒಂದು ಕೋಟಿ ಕಾರ್ಡ್​ಗಳಿಗೆ 450-500 ಕೋಟಿ ರು.ಜಮೆ ಮಾಡಲಾಗುತ್ತಿದೆ. ಅಕ್ಕಿ ಖರೀದಿ ಮಾಡಿ ಹಂಚುವುದರಿಂದ ರಾಜ್ಯ ಸರ್ಕಾರಕ್ಕೆ ಉಳಿತಾಯವಾಗಲಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಿನಿಂದ ಮುಂಬೈ ಬರೀ 18 ಗಂಟೆಯಲ್ಲೇ ಪ್ರಯಾಣ? ಶೀಘ್ರದಲ್ಲೇ ಬರಲಿದೆ ದುರಂತೋ ಎಕ್ಸ್‌ಪ್ರೆಸ್‌..!
ಅಪರಾಧಿಗೆ ಜೈಲಾದರೆ, ಅವರ ದಿನನಿತ್ಯದ ಖರ್ಚನ್ನೂ ಕೇಸ್​ ಹಾಕಿದೋರೇ ಕೊಡಬೇಕು! ಇಲ್ಲದಿದ್ರೆ ಏನಾಗತ್ತೆ? ಕಾನೂನು ಹೇಳೋದೇನು?