ಸ್ಟ್ಯಾಂಡ್ ಅಪ್ ಕಾಮಿಡಿಯನ್ನು ದ್ವೇಷಕಾರಕ ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಡಿಟ್ ಮಾಡಿದ್ದ ಹಾಡು ಹಂಚಿಕೊಂಡಿದ್ದ ಸಂಸದ ಪ್ರತಾಪ್‌ಗಢಿ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಏನಿದು ಪ್ರಕರಣ?
ನವದೆಹಲಿ(ಮಾ.29) : ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಸ್ಟ್ಯಾಂಡ್ ಅಪ್ ಕಾಮಿಡಿಯನ್ನು ದ್ವೇಷಕಾರಕ ಎನ್ನಲಾಗದು’ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಚೋದನಾತ್ಮಕ ಹಾಡಿನ ಎಡಿಟೆಡ್ ವಿಡಿಯೋವೊಂದರ ಸಂಬಂಧ ಗುಜರಾತ್ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಅವರ ವಿರುದ್ಧ ಗುಜರಾತ್ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದು ಮಾಡಿದೆ.
ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ಹಾಡಿನಲ್ಲೇ ‘ದ್ರೋಹಿ’ ಎಂದಿದ್ದ ಸ್ಟ್ಯಾಂಡ್ ಅಪ್ ಹಾಸ್ಯ ಕಲಾವಿದ ವಿದೂಷಕ ಕುನಾಲ್ ಕಾಮ್ರಾ ಅವರ ವಿರುದ್ಧ ಮಹಾರಾಷ್ಟ್ರದಲ್ಲಿ ಶಿವಸೈನಿಕರು ದಾಂಧಲೆ ನಡೆಸಿದಾಗಲೇ ಈ ತಿರ್ಪು ಪ್ರಕಟವಾಗಿದೆ.
ಯುಗಾದಿ ಹಬ್ಬಕ್ಕೆ ಮೋದಿ ಸರ್ಕಾರದ ಬಂಪರ್ ಗಿಫ್ಟ್, ಡಿಎ ಶೇ.2ರಷ್ಟು ಏರಿಕೆ
ಏನಿದು ಪ್ರಕರಣ?:
ಸಾಮೂಹಿಕ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರತಾಪ್‌ಗಢಿ ಅವರು ಎಡಿಟ್ ಮಾಡಿದ ಪ್ರಚೋದನಾತ್ಮಕ ಹಾಡೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದು ಆರೋಪಿಸಿ ಗುಜರಾತ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಇದರ ವಿರುದ್ಧದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ’ಯಾವುದೇ ಅಭಿಪ್ರಾಯವನ್ನು ಒಂದು ವೇಳೆ ದೊಡ್ಡ ಸಂಖ್ಯೆಯ ಜನ ಇಷ್ಟಪಡದಿದ್ದರೂ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ವ್ಯಕ್ತಿಯೊಬ್ಬನ ಹಕ್ಕನ್ನು ರಕ್ಷಿಸಬೇಕು ಮತ್ತು ಗೌರವಿಸಬೇಕಿದೆ. ಕವನ, ನಾಟಕ, ಸಿನಿಮಾ, ವಿಡಂಬನೆ ಮತ್ತು ಕಲೆಯು ಮನುಷ್ಯನ ಜೀವನವನ್ನು ಹೆಚ್ಚು ಅರ್ಥಪೂರ್ಣ ಮಾಡುತ್ತದೆ. ಪದ್ಯ ಹೇಳಿ ಹಾಸ್ಯ ಮಾಡುವುದು ಹಾಗೂ ಸ್ಟ್ಯಾಂಡ್ ಅಪ್ ಕಾಮಿಡಿ ಮಾಡುವುದು ಅಥವಾ ಇನ್ನಾವುದೇ ಮನರಂಜನೆ ಮಾಡುವುದನ್ನು ದ್ವೇಷ ಮೂಡಿಸುವ ಕೆಲಸ ಎನ್ನಲಾಗದು’ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜತೆಗೆ, ನಾಗರಿಕ ಮೂಲಭೂತ ಹಕ್ಕನ್ನು ರಕ್ಷಿಸುವುದು ಕೋರ್ಟ್ ಕೆಲಸ ಎಂದು ಹೇಳಿದೆ.
ಸಂಸದನಿಗೆ ಜಾಮೀನು ಅರ್ಜಿ ಗುಜರಾತ್ ಹೈಕೋರ್ಟ್‌ನಲ್ಲಿ ರದ್ದಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಅಕ್ರಮ ಗಣಿ ಕೇಸ್: ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ, ಹೈಕೋರ್ಟ್ ಹೇಳಿದ್ದೇನು?