
ಕೊಲಂಬೋ (ನ.6): ತನ್ನ ದೇಶದ ಸಮುದ್ರ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದರು ಎಂಬ ಆರೋದಡಿಯಲ್ಲಿ ಶ್ರೀಲಂಕಾದ ನೌಕಾಪಡೆಯು ವಿಶೇಷ ಕಾರ್ಯಾಚರಣೆ ನಡೆಸಿ ಎರಡು ಟ್ರಾಲರ್ ದೋಣಿ ಸಹಿತ ಕನಿಷ್ಠ 15 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಿದೆ. ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು ಪ್ರದೇಶವಾದ ತಲೈಮನ್ನಾರ್‌ನಲ್ಲಿ ಶನಿವಾರ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ತಲೈಮನ್ನಾರ್‌ನ ಉತ್ತರದ ಸಮುದ್ರದಲ್ಲಿ ಶ್ರೀಲಂಕಾದ ನೀರಿನಲ್ಲಿ ಭಾರತೀಯರು ಮೀನು ಭೇಟೆಯಾಡುವ ಟ್ರಾಲರ್‌ಗಳ ಸಮೂಹವನ್ನು ಗುರುತಿಸಿದ ಉತ್ತರ ಕೇಂದ್ರ ನೌಕಾ ಕಮಾಂಡ್ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮೀನುಗಾರರನ್ನು ಬಂಧಿಸಿತು. ತಲೈಮನ್ನಾರ್‌ನಲ್ಲಿ ನೌಕಾಪಡೆಯ ವಶದಲ್ಲಿರುವ ಟ್ರಾಲರ್ ಮತ್ತು ಮೀನುಗಾರರನ್ನು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಮನ್ನಾರ್ ಮೀನುಗಾರಿಕೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಾತುಕತೆಗಳು ಹಲವು ಬಾರಿ ನಡೆದಿದ್ದರೂ ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾದ ಮೀನುಗಾರರು ಜಲಗಡಿದಾಟಿ ಅಕ್ರಮ ಮೀನುಗಾರಿಕೆ ನಡೆಸುವುದು ಪುನರಾವರ್ತಿತ ಸಮಸ್ಯೆಯಾಗಿದೆ.
ಸ್ಥಳೀಯ ಮೀನುಗಾರರ ಜೀವನೋಪಾಯ ಮತ್ತು ಸಮುದ್ರ ಪರಿಸರದ ಜೀವವೈವಿಧ್ಯದ ಮೇಲೆ ವಿದೇಶಿ ಮೀನುಗಾರರ ಈ ರೀತಿಯ ಚಟುವಟಿಕೆಗಳ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟಲು ಜಾಗರೂಕರಾಗಿರಲು ಮತ್ತು ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದು ಶ್ರೀಲಂಕಾ ಹೇಳಿದೆ.
ಚೀನಾ ನಮ್ಮ ನಿಕಟ ಸ್ನೇಹಿತ; ಆದರೆ, ಭಾರತ ನಮ್ಮ ಸೋದರ ದೇಶ: ಶ್ರೀಲಂಕಾ ರಾಯಭಾರಿ
ಶ್ರೀಲಂಕಾ ಮತ್ತು ಭಾರತವು ಶ್ರೀಲಂಕಾ ನೇವಲ್ ಕ್ರಾಫ್ಟ್‌ನಲ್ಲಿ ಎರಡು ದಕ್ಷಿಣ ಏಷ್ಯಾದ ರಾಷ್ಟ್ರಗಳ ನಡುವಿನ ಅಂತರರಾಷ್ಟ್ರೀಯ ಸಮುದ್ರ ಗಡಿ ಸವಾಲುಗಳ ಕುರಿತು ಮಾತುಕತೆ ನಡೆಸುತ್ತಿದ್ದಂತೆ ಈ ಬೆಳವಣಿಗೆ ನಡೆದಿದೆ. 32 ನೇ ಅಂತರರಾಷ್ಟ್ರೀಯ ಜಲ ಗಡಿರೇಖೆಯ ಸಭೆಯಲ್ಲಿ ಎರಡು ನೌಕಾಪಡೆಗಳು ಮತ್ತು ಅವರ ಕರಾವಳಿ ಕಾವಲುಗಾರರ ಪಾತ್ರಗಳ ಬಗ್ಗೆ ಚರ್ಚಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಪಾಕ್ ಜೈಲಿನಲ್ಲಿದ್ದ ಭಾರತದ ಐವರು ಮೀನುಗಾರರು ಸೇರಿ 6 ಮಂದಿ ಸಾವು, ಕುತಂತ್ರ ಬಯಲು!
ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧದಲ್ಲಿ ಮೀನುಗಾರರ ಸಮಸ್ಯೆ , ಬಂಧನ ವಿವಾದದಲ್ಲಿದೆ. ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಶ್ರೀಲಂಕಾದ ಪ್ರಾದೇಶಿಕ ಜಲವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳು ಈ ಮೊದಲು ಕೂಡ ನಡೆದಿದೆ. ಪಾಕ್ ಜಲಸಂಧಿಯು ತಮಿಳುನಾಡನ್ನು ಶ್ರೀಲಂಕಾದಿಂದ ಬೇರ್ಪಡಿಸುವ ನೀರಿನ ಕಿರಿದಾದ ಪಟ್ಟಿಯಾಗಿದ್ದು, ಎರಡೂ ದೇಶಗಳಿಗೆ ಕೂಡ ಇದು ಶ್ರೀಮಂತ ಮೀನುಗಾರಿಕೆ ಕೇಂದ್ರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ