
ವಾರಾಣಸಿ(ಏ.26): ಒಬ್ಬ ವ್ಯಕ್ತಿಯು ಉತ್ಸಾಹವನ್ನು ಹೊಂದಿದ್ದರೆ, ಯಾದೆಷ್ಟೇ ದೊಡ್ಡ ಸಮಸ್ಯೆ ಎದುರಾದರೂ ಅದು ಅಡಚಣೆಯಾಗುವುದಿಲ್ಲ. ಈ ಸತ್ಯವನ್ನು ವಾತರಾಣಸಿಯ ವಿಕಲ ವಚೇತನ ಯುವತಿ ಶಿಖಾ ರಸ್ತೋಗಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಎತ್ತರ ಸಮಸ್ಯೆ ಮತ್ತು ಕಷ್ಟದ ಜೀವನ ಹೊರತಾಗಿಯೂ, ಅವರು ಎಂದಿಗೂ ಸೋಲಲಿಲ್ಲ . ತನ್ನನ್ನು ತಾನೇ ಸ್ವಾವಲಂಬಿಯನ್ನಾಗಿ ಮಾಡಲು, ಸಿಖಾ ಹೊಲಿಗೆ ಕೆಲಸ ಮಾಡಲು ಪ್ರಾರಂಭಿಸಿರು. ಇದರೊಂದಿಗೆ ಸಮಾಜ ಸೇವೆಯನ್ನೂ ಮಾಡಿದಳು. ಶಿಖಾ ಅವರ ಈ ಸ್ಪೂರ್ತಿಯನ್ನು ನೋಡಿ ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಸಿಎಂ ಯೋಗಿ ಆದಿತ್ಯನಾಥ್ ವರೆಗೆ ಅಭಿಮಾನಿಗಳಾಗಿದ್ದಾರೆ.
ತಲೆಬಾಗಿ ನಮಸ್ಕರಿಸಿದ್ದ ಪ್ರಧಾನಿ ಮೋದಿ
ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ವಾರಣಾಸಿಗೆ ಆಗಮಿಸಿದ್ದಾಗ, ಶಿಖಾ ಅವರ ಹೆಸರನ್ನು ಕೂಗಿದ್ದರು. ವಿಕಲ ಚೇತನ ಹೆಣ್ಮಗಳು ಶಿಖಾ ಅವರ ಧ್ವನಿಯನ್ನು ಕೇಳಿದ ನಂತರ ಪ್ರಧಾನಿ ಮೋದಿ ಅಲ್ಲಿಯೇ ನಿಂತಿದ್ದರು. ಇದಾದ ನಂತರ ಶಿಖಾಳನ್ನು ಮಾತನಾಡಿಸಿ ಆಕೆಯ ಕಥೆಯನ್ನು ಆಲಿಸಿದರು. ಶಿಖಾಳ ಉತ್ಸಾಹವನ್ನು ಕಂಡು ಅವರೂ ಅವಳ ಅಭಿಮಾನಿಯಾಗಿ ತಲೆಬಾಗಿ ನಮಸ್ಕರಿಸಿದನು.
ಸಿಎಂ ಯೋಗಿ ಜೊತೆ ಮಾತನಾಡುತ್ತಿದ್ದೇನೆ
ವಿಕಲ ಚೇತನ ಶಿಖಾಳಿಗೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಹಾಯ ಮಾಡಿದ್ದಾರೆ. ಏಪ್ರಿಲ್ 21 ರಂದು, ಶಿಖಾ ಅವರು ಲಕ್ನೋದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದಾಗ, ಅವರು ಕಾಶಿ ವಿಶ್ವನಾಥ್ ಕಾರಿಡಾರ್‌ನಲ್ಲಿ ಅಂಗಡಿಯನ್ನು ನೀಡುವಂತೆ ಒತ್ತಾಯಿಸಿದರು. ಶಿಖಾ ಅವರ ಬೇಡಿಕೆಯನ್ನು ಆಲಿಸಿದ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರೊಂದಿಗೆ ಎರಡು ಲಕ್ಷ ರೂಪಾಯಿ ಸಹಾಯಧನವೂ ದೊರೆಯುವಂತೆ ಮಾಡುತ್ತೇನೆ ಎಂದೂ ಹೇಳಿದ್ದಾರೆ. ಸಿಎಂ ನಿವಾಸದ ಆತಿಥ್ಯಕ್ಕೆ ಶಿಖಾ ಬೆರಗಾಗಿದ್ದಾರೆ.
ಅಂಗವಿಕಲದಿಂದ ವಿಕಲಚೇತನ ಆದಾಗ ಬದಲಾಯ್ತು ಬದುಕು
ಅಂಗವಿಕಲರನ್ನು ವಿಕಲ ಚೇತನ ಎಂದು ಘೋಷಿಸಿದಾಗ ತನ್ನ ಜೀವನ ಬದಲಾಗಿದೆ ಎಂದು ವಾರಾಣಸಿಯ ಮಗಳು ಶಿಖಾ ಹೇಳಿದ್ದಾರೆ. ಹಿಂದೆ ಜನರು ತನನ್ನು ನಮ್ರತೆಯಿಂದ ನೋಡುತ್ತಿದ್ದರು. ಯಾವಾಗ ಪ್ರಧಾನಿಯವರು ಅವರನ್ನು ವಿಕಲ ಚೇತನಳು ಎಂದು ಕರೆದು ಗೌರವಿಸಿದರು, ಆಗ ಜನರ ವರ್ತನೆ ಇನ್ನಷ್ಟು ಬದಲಾಯಿತು. ತಾನು ಯಾರಿಗೂ ಕಮ್ಮಿ ಇಲ್ಲ ಎಂಬ ಭಾವನೆ ಹುಟ್ಟಿತು ಎನ್ನುತ್ತಾರೆ ಶಿಖಾ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ