ಅಯೋಧ್ಯೆ ಗೆಲುವಿನ ಬಗ್ಗೆ ಕವಿತೆ ಹೇಳಿ ಬಿಜೆಪಿಗೆ ಟಾಂಗ್ ಕೊಟ್ಟ ಅಖಿಲೇಶ್ ಯಾದವ್

Published : Jul 02, 2024, 01:29 PM IST
ಅಯೋಧ್ಯೆ ಗೆಲುವಿನ ಬಗ್ಗೆ ಕವಿತೆ ಹೇಳಿ ಬಿಜೆಪಿಗೆ ಟಾಂಗ್ ಕೊಟ್ಟ ಅಖಿಲೇಶ್ ಯಾದವ್

ಸಾರಾಂಶ

ನಾವು ಅಯೋಧ್ಯೆಯಿಂದ ಪ್ರೀತಿಯಿಂದ ಸಂದೇಶವನ್ನು ತಂದಿದ್ದೇವೆ ಎಂದು ಹೇಳುತ್ತಲೇ ಇತರೆ ಸದಸ್ಯರು ಅವಧೇಶ್ ಯಾದವ್ ಹೇಳಿ ಘೋಷಣೆ ಕೂಗಿದರು. ಅಖಿಲೇಶ್ ಯಾದವ್ ಪಕ್ಕದಲ್ಲಿಯೇ ಕುಳಿತಿದ್ದ ಅವಧೇಶ್ ಯಾದವ್ ಕೈ ಮುಗಿದು ನಮಸ್ಕರಿಸಿದರು.

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕ, ಸಂಸದ ಅಖಿಲೇಶ್ ಯಾದವ್, ಇಂದು ಅಯೋಧ್ಯೆಯ ಕುರಿತು ಕವಿತೆಯೊಂದನ್ನು ಹೇಳಿದರು. ಕವಿತೆಯ ಪ್ರತಿಯೊಂದು ಸಾಲುಗಳನ್ನು ಕೇಂದ್ರ ಸರ್ಕಾರವನ್ನು ಗುರಿಯಾಗಿ ಬರೆದುಕೊಂಡು ಬಂದಂತೆ ಕಾಣಿಸುತ್ತಿತ್ತು. ಅಯೋಧ್ಯೆಯಿಂದ ಸಂಸದರಾಗಿ ಆಯ್ಕೆಯಾಗಿರುವ ಸಂಸದ ಅವಧೇಶ್ ಪ್ರಸಾದ್ ಅವರನ್ನು ಕವಿತೆಯಲ್ಲಿ ಹೀರೋರನ್ನಾಗಿ ಮಾಡಲಾಗಿತ್ತು. ಸದನದಲ್ಲಿ ಅವದೇಶ್ ಪ್ರಸಾದ್ ಅವರನ್ನು ನೋಡುತ್ತಲೇ ಅಖಿಲೇಶ್ ಯಾದವ್ ಕವಿತೆಯ ವಾಚನ ಮಾಡಿದರು. ಈ ಮಧ್ಯೆ ಐಎನ್‌ ಡಿಐಎ ಸಂಸದರು ಅವಧೇಶ್ ಪ್ರಸಾದ್ ಪರ ಘೋಷಣೆಗಳನ್ನು ಕೂಗಿದರು. 

ನಮಗೆ ಉತ್ತರ ಪ್ರದೇಶದಲ್ಲಿ ಮತ್ತೊಂದ ಅಭೂತಪೂರ್ವ ಗೆಲುವು ಸಿಕ್ಕಿದೆ. ಅದು ಏನು ಎಂದು ಸರ್ಕಾರ ರಚನೆ ಮಾಡಿರೋರಿಗೆ ಖಂಡಿತಾ ತಿಳಿದಿರುತ್ತದೆ. ಅಯೋಧ್ಯೆಯ ಗೆಲುವು ಭಾರತದ ಪ್ರಬುದ್ಧ ಮತದಾರರ ಪ್ರಜಾಪ್ರಭುತ್ವದ ತಿಳುವಳಿಕೆಗೆ ಸಂದ ಜಯವಾಗಿದೆ ಎಂದು ಅಖಿಲೇಶ್ ಯಾದವ್ ಅರ್ಥೈಸಿದರು. ನಾವು ರಾಮ ರಚಿಸಿದ ರೇಖೆ ಎಂಬ ಮಾತನ್ನು ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಅಯೋಧ್ಯೆಯ ಗೆಲುವು ಸಂಪೂರ್ಣ ಶ್ರೀರಾಮನ ನಿರ್ಧಾರವಾಗಿದೆ ಎಂದು ಬಿಜೆಪಿ ಸೋಲಿಗೆ ವ್ಯಂಗ್ಯವಾಡಿದರು. ನಾವು ಅಯೋಧ್ಯೆಯಿಂದ ಪ್ರೀತಿಯಿಂದ ಸಂದೇಶವನ್ನು ತಂದಿದ್ದೇವೆ ಎಂದು ಹೇಳುತ್ತಲೇ ಇತರೆ ಸದಸ್ಯರು ಅವಧೇಶ್ ಪ್ರಸಾದ್ ಹೇಳಿ ಘೋಷಣೆ ಕೂಗಿದರು. ಅಖಿಲೇಶ್ ಯಾದವ್ ಪಕ್ಕದಲ್ಲಿಯೇ ಕುಳಿತಿದ್ದ ಅವಧೇಶ್ ಪ್ರಸಾದ್ ಕೈ ಮುಗಿದು ನಮಸ್ಕರಿಸಿದರು.

ದ್ವಿವೇದಿ, ತ್ರಿವೇದಿ, ಚತುರ್ವೇದಿಯಿಂದ ಕನ್ಪ್ಯೂಸ್ ಆದೆ ಎಂದ ಖರ್ಗೆ: ಧನಕರ್ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಸದನ

ಅಯೋಧ್ಯೆಯಿಂದ ಪ್ರೀತಿಯ ಸಂದೇಶ 

ಮತ್ತೆ ತಮ್ಮ ಮಾತು ಮುಂದುವರಿಸಿದ ಅಖಿಲೇಶ್ ಯಾದವ್,  ಇವರು ಒಳ್ಳೆಯ ಮನಸ್ಸಿನಿಂದ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾರೆ. ಇದು ಅಸತ್ಯದ ಮೇಲಿನ ಸತ್ಯದ ಜಯವಾಗಿದೆ. ತುಂಬಿ ಹರಿಯುತ್ತಿರುವ ನದಿಗೆ ಮರ್ಯಾದೆಯ ಘನತೆಯನ್ನು ಕಟ್ಟಿದವರು ಮರ್ಯಾದಾ ಪುರುಷೋತ್ತಮ ಪ್ರಭು ರಾಮ. ನಾವು ನಿಮಗೆಲ್ಲರಿಗಾಗಿ ಅಯೋಧ್ಯೆಯಿಂದ ಪ್ರೀತಿಯ ಸಂದೇಶ ತಂದಿದ್ದೇವೆ ಎಂದು ಹೇಳಿದರು. 

ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಸಿಕ್ಕ ಗೆಲುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಖಿಲೇಶ್ ಯಾದವ್, ಇವಿಎಂ ಹೇಗೆ ಕೆಲಸ ಮಾಡುತ್ತೆ ಎಂಬುದರ ಬಗ್ಗೆ ನನಗೆ ತಿಳಿಯುತ್ತಿಲ್ಲ. ಈಗ ಇವಿಎಂ ಬಗ್ಗೆ ಹೇಳುಲು ಏನೂ ಉಳಿದಿಲ್ಲ. ಐಎನ್‌ಡಿಐಎ ಒಕ್ಕೂಟ ಲೋಕಸಭಾ ಸಮರ ಫಲಿತಾಂಶ ಮತ್ತು ಮುಂಬರುವ ಚುನಾವಣೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.

ಕಡತದಿಂದ ವಿವಾದಿತ ಅಂಶ ತೆಗೆದಿದ್ದಕ್ಕೆ ರಾಹುಲ್ ಗಾಂಧಿ ಮೊದಲ ಪ್ರತಿಕ್ರಿಯೆ

ದೇಶ ಸಂವಿಧಾನದ ಜೊತೆಯಲ್ಲಿ ಸಾಗಬೇಕೇ ಹೊರತ ಒಬ್ಬ ವ್ಯಕ್ತಿಯ ಇಚ್ಛೆಯಂತೆ ಹೋಗಬಾರದು ಎಂದ ಅಖಿಲೇಶ್ ಯಾದವ್ ಎನ್‌ಡಿಎ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶದ ಸಂವಿಧಾನ ಎಲ್ಲರಿಗೂ ಕೆಲವು ಅಧಿಕಾರಗಳನ್ನು ನೀಡುತ್ತದೆ. ಆ ಸಂವಿಧಾನದ ಕಾನೂನುಗಳನ್ನು ಬದಲಿಸಲು ಮುಂದಾಗೋದು ಉಚಿತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್