ಶಬರಿಮಲೆ ಚಿನ್ನ ಕದ್ದವರಿಗೆ ಸೋನಿಯಾ ಗಾಂಧಿ ನಂಟು-ಕೇರಳ ಸಿಎಂ ಪಿಣರಾಯಿ ಗಂಭೀರ ಆರೋಪ

Kannadaprabha News   | Kannada Prabha
Published : Dec 25, 2025, 07:26 AM IST
Cm pinarayi vijayan

ಸಾರಾಂಶ

‘ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಮತ್ತು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ನಂಟಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗಂಭೀರ ಆರೋಪ ಮಾಡಿದ್ದಾರೆ.

ತಿರುವನಂತಪುರಂ: ‘ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿ ಮತ್ತು ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್‌ಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ನಂಟಿದೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಗಂಭೀರ ಆರೋಪ ಮಾಡಿದ್ದಾರೆ.

ಫೋಟೋವೊಂದನ್ನು ಸಿಎಂ ಹಂಚಿಕೊಂಡಿದ್ದಾರೆ

ಸೋನಿಯಾ ಅವರು ಉನ್ನಿಕೃಷ್ಣನ್‌ ಪೊಟ್ಟಿ, ಗೋವರ್ಧನ್‌ರಿಂದ ಉಡುಗೊರೆ ಸ್ವೀಕರಿಸುತ್ತಿರುವ ಫೋಟೋವೊಂದನ್ನು ಸಿಎಂ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪಿಣರಾಯಿ ಅವರು, ‘ಕೇರಳದ ಮಾಜಿ ಸಿಎಂ ಕರುಣಾಕರನ್‌, ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸೋನಿಯಾ ಗಾಂಧಿ ಅಪಾಯಿಂಟ್ಮೆಂಟ್‌ ಸಿಕ್ಕಿರಲಿಲ್ಲ. ಆದರೆ ಉನ್ನಿಕೃಷ್ಣನ್‌ ಪೊಟ್ಟಿಗೆ ಅಪಾಯಿಂಟ್ಮೆಂಟ್‌ ಸಿಕ್ಕಿದೆಯೇ? ಸೋನಿಯಾ ಹೆಚ್ಚಿನ ಭದ್ರತೆಯಿರುವ ನಾಯಕಿ.

ಆರೋಪಿಗೆ ಹೇಗೆ ಸಿಕ್ಕಿತು ಅವರ ಭೇಟಿ

ಕಾಂಗ್ರೆಸ್‌ ನಾಯಕರಿಗೂ ಗೊತ್ತು ಅವರ ಭೇಟಿ ಎಷ್ಟು ಕಷ್ಟ ಎನ್ನುವುದು. ಹಾಗಿದ್ದರೆ ಆರೋಪಿಗೆ ಹೇಗೆ ಸಿಕ್ಕಿತು ಅವರ ಭೇಟಿ ಅವಕಾಶ?’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಶಬರಿಮಲೆ ಚಿನ್ನದ ಅವ್ಯವಹಾರದ ತನಿಖೆಯನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ್ದ ಕಾಂಗ್ರೆಸ್‌ ಮತ್ತು ಯುಡಿಎಫ್‌ಗೆ ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿಲ್ಲಿಯಲ್ಲಿ 2 ದಿನ ಇದ್ರೆ ನನಗೆ ಅಲರ್ಜಿ ಶುರು ಆಗುತ್ತೆ: ಸಚಿವ ಗಡ್ಕರಿ
ಚೀನಿಯರಿಗೆ ಅಕ್ರಮ ವೀಸಾ ಕೇಸಲ್ಲಿ ಚಿದು ಪುತ್ರಗೆ ಸಂಕಷ್ಟ