
ತಿರುವನಂತಪುರಂ(ಏ.18): ಕೊರೋನಾ ಪರೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಕ್ರಾಂತಿ ಉಂಟುಮಾಡಬಹುದಾದ ಸಂಶೋಧನೆಯೊಂದನ್ನು ಕೇರಳದ ಖಾಸಗಿ ಸಂಸ್ಥೆಯೊಂದು ಮಾಡಿದ್ದು, ಕೇವಲ 1000 ರು. ವೆಚ್ಚದಲ್ಲಿ 2 ತಾಸಿನಲ್ಲಿ ಕೊರೋನಾ ಪರೀಕ್ಷೆ ನಡೆಸುವ ಕಿಟ್ ಕಂಡುಹಿಡಿದಿದೆ. ತಿರುವನಂತಪುರಂನ ಶ್ರೀ ಚಿತ್ರಾ ತಿರುನಲ್ ಇನ್‌ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಯ ಡಾ.ಅನೂಪ್ ತೆಕ್ಕುವೀತಿಲ್ ಎಂಬ ಹಿರಿಯ ವಿಜ್ಞಾನಿ ಮೂರು ವಾರಗಳಲ್ಲಿ ಈ ಯಂತ್ರ ಆವಿಷ್ಕರಿಸಿದ್ದಾರೆ.
ಚಿತ್ರಾ ಜೀನ್‌ಲ್ಯಾಂಪ್-ಎನ್ ಹೆಸರಿನ ಈ ಯಂತ್ರದಲ್ಲಿ ಶೇ.100ರಷ್ಟುಕರಾರುವಾಕ್ಕಾದ ಫಲಿತಾಂಶ ಬರುತ್ತದೆ. ಅಲಪ್ಪುಳಾದ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ಈ ಯಂತ್ರದ ಮೂಲಕ ಕೊರೋನಾ ಟೆಸ್ಟಿಂಗ್‌ಗಳನ್ನು ನಡೆಸಲಾಗಿದೆ. ಇದನ್ನು ಬಳಸಿದರೆ ಸೋಂಕಿತ ವ್ಯಕ್ತಿಯ ಗಂಟಲ ದ್ರವವನ್ನು ಸಂಗ್ರಹಿಸುವುದರಿಂದ ಹಿಡಿದು ಪರೀಕ್ಷೆಯ ಫಲಿತಾಂಶ ನೀಡಲು ಕೇವಲ 2 ತಾಸು ಸಾಕು. 2.5 ಲಕ್ಷ ರು.ನ ಯಂತ್ರ ಇದಾಗಿದ್ದು, ಒಂದು ಬ್ಯಾಚ್‌ನಲ್ಲಿ 30 ಸ್ಯಾಂಪಲ್‌ಗಳನ್ನು ಪರೀಕ್ಷಿಸಬಹುದು. ಯಂತ್ರದೊಳಗೆ ಸ್ಯಾಂಪಲ್ ಇರಿಸಿದ ಕೇವಲ 10 ನಿಮಿಷದಲ್ಲಿ ಫಲಿತಾಂಶ ಸಿಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಸದ್ಯ ಕೊರೋನಾ ಪರೀಕ್ಷೆಗೆ ಕನಿಷ್ಠ 1 ದಿನ ಹಿಡಿಯುತ್ತದೆ. ಒಂದು ಪರೀಕ್ಷೆಗೆ 4500 ರು. ತಗಲುತ್ತದೆ. ಕೇರಳದ ಸಂಸ್ಥೆ ಕಂಡುಹಿಡಿದ ಕಿಟ್‌ಗೆ ಐಸಿಎಂಆರ್ ಒಪ್ಪಿಗೆ ದೊರೆತರೆ ಲೈಸನ್ಸ್ ಪಡೆದು ಉತ್ಪಾದನೆ ಆರಂಭಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ