'ಬದುಕು ಅನಿವಾರ್ಯ' ನಗರದತ್ತ ವಲಸೆ ಕಾರ್ಮಿಕರ ಪುನರಾಗಮನ

Published : Aug 13, 2020, 10:15 PM ISTUpdated : Aug 13, 2020, 10:21 PM IST
'ಬದುಕು ಅನಿವಾರ್ಯ' ನಗರದತ್ತ ವಲಸೆ ಕಾರ್ಮಿಕರ ಪುನರಾಗಮನ

ಸಾರಾಂಶ

ನಗರಕ್ಕೆ ಮರುವಲಸೆ ಆರಂಭ/ ಕಾಲು ನಡಿಗೆಯಲ್ಲಿ ನಗರ ಬಿಟ್ಟವರು ಪುನಃ ಕೆಲಸಕ್ಕೆ/ ಬದುಕಿನ ಅನಿವಾರ್ಯಕ್ಕೆ ದುಡಿಮೆ ಬೇಕಲ್ಲ/ ನವದೆಹಲಿ ಕಡೆಗೆ ವಾಪಾಸಾಗುತ್ತಿರುವ ವಲಸೆ ಕಾರ್ಮಿಕರು

ನವದೆಹಲಿ(ಆ. 13)  ಕೊರೋನಾ ಅನ್ ಲಾಕ್ ಆದ ನಂತರ ನಿಧಾನವಾಗಿ  ನಗರ ಬಿಟ್ಟವರು ವಾಪಸ್ ಮರಳುತ್ತಿದ್ದಾರೆ. ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ಸಂದೀಪ್ ವಿಶ್ವಕರ್ಮ (22) ಹರಿಯಾಣದ ಕರ್ನಾಲ್‌ ಗೆ ತೆರಳಿದ್ದರು. ಅಲ್ಲಿ ಮಾಡುತ್ತಿದ್ದ ಕೆಲಸ ಕೈಕೊಟ್ಟಿತು.  ಇದಾದ ಮೇಲೆ ಕಾಲ್ನಡಿಗೆಯಲ್ಲೇ ಪಾಣಿಪತ್ ಗೆ ತೆರಳುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈಗ ಮತ್ತೆ ದೆಹಲಿಗೆ ಹನ್ನೊಂದು ಗಂಟೆ ಬಸ್ ಪ್ರಯಾಣ ಮಾಡಿ ವಾಪಸ್ ಆಗಿದ್ದಾರೆ.

ಗಾರೆ ಕೆಲಸ ಮಾಡುತ್ತಿದ್ದ ಸಂದೀಪ್ ಅವರು ಸೇರಿದಂತೆ ಅನೇಕರಿಗೆ ಗುತ್ತಿದಾರರೊಬ್ಬರು ಬಸ್ ವ್ಯವಸ್ಥೆ ಮಾಡಿದ್ದರು.  ತಿಂಗಳಿಗೆ 10,500 ರೂ. ಸಂಪಾದನೆ ಮಾಡುತ್ತಿದ್ದೆ ಇನ್ನು ಮುಂದೆ ರೇವರಿಯಲ್ಲಿ ಲಕೆಲಸ ಸಿಗುವ ನಂಬಿಕೆಯಿದ್ದು ಎಷ್ಟು ಸಂಪಾದನೆ ಮಾಡ್ತೆನೋ ಗೊತ್ತಿಲ್ಲ ಎಂದರು.

ಆನಂದ್ ವಿಹಾರ್ ನಲ್ಲಿಯೂ  ಉತ್ತರ ಪ್ರದೇಶ ಸೇರಿದಂತೆ ವಿವಿಧ ಕಡೆಯಿಂದ ವಲಸೆ ಕಾರ್ಮಿಕರು ಮರಳುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. 

ಮಾರ್ಚ್ 24 ರಂದು ಕಾಲ್ನಡಿಗೆಯಲ್ಲೇ ಅನೇಕರು ದೆಹಲಿಯಿಂದ ತಮ್ಮ ಊರಿನತ್ತ ಹೊರಟಿದ್ದರು. ನಂಗ್ಲೋಯ್ಲ್ಯೂಮಿನಿಯಂ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಗಿರಿರಾಜ್ ಸಿಂಗ್ (28)  ತಮ್ಮ ಹಳೆಯ ಕೆಲಸಕ್ಕೆ ಮರಳಿದ್ದು ಅವರಿಗೆ   ತಿಂಗಳಿಗೆ 12,000 ರೂ. ಸಿಗಲಿದೆ.

ಕೊರೋನಾ ವಿರುದ್ಧ ಹೋರಾಟಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಒಂಭತ್ತು ಕ್ರಮಗಳು

ಎಂಟು ಗಂಟೆಗಳ ಕೆಲಸ ಮಾಡುತ್ತಿದ್ದ ಗಿರಿರಾಜ್ ನನಗೆ ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಕೊರೋನಾಕ್ಕೆ ನಾನು ಹೆದರುತ್ತೇನೆ ಆದರೆ ದುಡಿಮೆ ಅನಿವಾರ್ಯ ಎಂದು ಹೇಳುತ್ತಾರೆ.

 ಶಹಜಹಾನಪುರದ ಜಲಾಲಾಬಾದ್‌ನ ಅವ್ನೀಶ್ ಸಾಗರ್ (19) ಮತ್ತು ಅವರ ಸಹೋದರ ಪತಿರಾಜ್ ಸಾಗರ್ (18) ಅವರು ಬಸ್ ನಿಲ್ದಾಣಕ್ಕೆ ಬಸ್ಸಿನ ಪಾತ್ರೆ ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡಲು ಆಗಮಿಸಿದ್ದಾರೆ. 'ಕೆಲಸ ಸ್ಥಗಿತಗೊಂಡಿದ್ದರಿಂದ ನಾವಿಬ್ಬರೂ ಲಾಕ್‌ಡೌನ್‌ಗೆ ಮುಂಚೆಯೇ ಹೊರಟೆವು. ಕಾರ್ಖಾನೆ ಈಗ ನಮ್ಮನ್ನು ಮರಳಿ ಕರೆದಿದೆ. ಮನೆಯಲ್ಲಿ ಯಾವುದೇ ಕೆಲಸವಿಲ್ಲ, ಸುಗ್ಗಿಯ ಅವಧಿ ಕೂಡ ಮುಗಿದಿದೆ ಎಂದು ಸಹೋದರರು ಹೇಳುತ್ತಾರೆ.

ದೆಹಲಿಯ ಹಲವಾರು ನೆರೆಹೊರೆಗಳು, ನಗರ ಗ್ರಾಮಗಳಲ್ಲಿ ವಲಸೆ ಕಾರ್ಮಿಕರು ವಾಸವಿದ್ದು ಎಲ್ಲರು ಮನೆ ಖಾಲಿ ಮಾಡಿದ್ದರು. ಮನೆ ಮಾಲೀಕರಿಗೂ ಈ ವಾಪಾಸಾತಿ ನೆಮ್ಮದಿ ತಂದಿದೆ.

ಒಬ್ಬೊಬ್ಬರದ್ದು ಒಂದೊಂದುನ ಕತೆ, ನಗರ ಬಿಟ್ಟು ಹಲ್ಳಿಗೆ ತೆರಳಿದ್ದ ಪರಿಣಾಮ ಅಲ್ಲಿ ಇಲ್ಲಿ ಮಾಡುವ ಕೆಲಸವೂ ಇಲ್ಲ, ಸಂಪಾದನೆಯೂನ ಇಲ್ಲ. ಬದುಕಿನ ಅನಿವಾರ್ಯತೆ ಮತ್ತೆ ಎಲ್ಲರನ್ನೂ ನಗರಕ್ಕೆ ಕರೆಸಿಕೊಳ್ಳುತ್ತಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹಿರಿಯ ನಾಗರಿಕರು, 45+ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೆ; ಇಲ್ಲಿದೆ ಸೂಪರ್ ಅಪ್‌ಡೇಟ್
ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು