ಒಂದು ತಿಂಗಳಲ್ಲಿ ರಾಮಮಂದಿರಕ್ಕೆ 1511 ಕೋಟಿ ದೇಣಿಗೆ ಸಂಗ್ರಹ| ಫೆ.27ರವರೆಗೂ ನಡೆಯಲಿದೆ ದೇಣಿಗೆ ಸಂಗ್ರಹ ಅಭಿಯಾನ| 4 ಲಕ್ಷ ಹಳ್ಳಿಗಳ 11 ಕೋಟಿ ಕುಟುಂಬ ಭೇಟಿಯ ಉದ್ದೇಶ
ಸೂರತ್(ಫೆ.14): ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಮಾಡುವ ಅಭಿಯಾನಕ್ಕೆ ದೇಶವ್ಯಾಪಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ದೇಣಿಗೆ ಸಂಗ್ರಹ ಅಭಿಯಾನ ಆರಂಭವಾದ 1 ತಿಂಗಳಿಗೂ ಮೊದಲೇ 1500 ಕೋಟಿ ರು.ಗೂ ಹೆಚ್ಚಿನ ಹಣ ಹರಿದುಬಂದಿದೆ.
undefined
ಈ ಕುರಿತು ಹೇಳಿಕೆ ನೀಡಿರುವ ದೇಗುಲ ನಿರ್ಮಾಣದ ಹೊಣೆ ಹೊತ್ತಿರುವ ಟ್ರಸ್ಟ್‌ನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ ಗಿರಿ, ಇದುವರೆಗೆ ದೇಶದ ವಿವಿಧ ಭಾಗಗಳಿಂದ ಟ್ರಸ್ಟ್‌ನ ಖಾತೆಗೆ 1511 ಕೋಟಿ ರು. ಹಣ ಸಂದಾಯವಾಗಿದೆ. ನಮ್ಮ ಕಾರ್ಯಕರ್ತರು ಫೆ.27ರೊಳಗೆ ದೇಶದ 4 ಲಕ್ಷ ಹಳ್ಳಿಗಳ 11 ಕೋಟಿ ಕುಟುಂಬಗಳನ್ನು ಭೇಟಿ ಮಾಡಿ ದೇಣಿಗೆ ಸಂಗ್ರಹಿಸುವ ಗುರಿ ಹಾಕಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
:ಇಂಥದೊಂದು ಮಂದಿರ ನಿರ್ಮಾಣದ ಅವಕಾಶ 492 ವರ್ಷಗಳ ಬಳಿಕ ಸಿಕ್ಕಿರುವ ಹಿನ್ನೆಲೆಯಲ್ಲಿ ಭಕ್ತರು ಮನಃಪೂರ್ವಕವಾಗಿ ದೇಣಿಗೆ ನೀಡುತ್ತಿದ್ದಾರೆ’ ಎಂದು ಗಿರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಜ.15ರಂದು ಈ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು.