RSSನ್ನು ತಾಲಿಬಾನ್‌ಗೆ ಹೋಲಿಕೆ: ಜಾವೆದ್ ಅಖ್ತರ್‌ಗೆ ಕಂಟಕ!

By Kannadaprabha NewsFirst Published Sep 28, 2021, 2:35 PM IST
Highlights

* ಆರ್‌ಎಸ್‌ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿದ ಜಾವೆದ್ ಅಖ್ತರ್

* ಮಹಾರಾಷ್ಟ್ರದಲ್ಲಿ ಜಾವೇದ್ ಅಖ್ತರ್ ವಿರುದ್ಧ ಸಿವಿಲ್ ಮೊಕದ್ದಮೆ

* ಸಾಹಿತಿ ಜಾವೇದ್ ಅಖ್ತರ್ ಅವರಿಗೆ ನ್ಯಾಯಾಲಯದ ನೋಟಿಸ್ 

ಮುಂಬೈ(ಸೆ.28): ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು(RSS) ತಾಲಿಬಾನ್(Taliban) ಗೆ ಹೋಲಿಸಿದ ಸಾಹಿತಿ ಜಾವೇದ್ ಅಖ್ತರ್‌ಗೆ(Javed Akhtar) ಇದೀಗ ಹೊಸ ತಲೆನೋವು ಆರಂಭವಾಗಿದೆ. ಹೌದು ಆರ್ ಎಸ್ ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಮಹಾರಾಷ್ಟ್ರದಲ್ಲಿ ಜಾವೇದ್ ಅಖ್ತರ್ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣವನ್ನು ಥಾಣೆ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ, ಇದರಲ್ಲಿ ಅಖ್ತರ್ ಸಂಘಟನೆಯನ್ನು ತಾಲಿಬಾನ್ ಗೆ ಹೋಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾಹಿತಿ ಜಾವೇದ್ ಅಖ್ತರ್ ಅವರಿಗೆ ನ್ಯಾಯಾಲಯ ನೋಟಿಸ್ ಕಳುಹಿಸಿದ್ದು, ಪ್ರಕರಣದ ಮುಂದಿನ ದಿನಾಂಕ ನವೆಂಬರ್ 12 ರಂದು ಹಾಜರಾಗುವಂತೆ ಸೂಚಿಸಿದೆ.

ಈ ಹಿಂದೆ, ಮಹಾರಾಷ್ಟ್ರ ಬಿಜೆಪಿ ಜಾವೇದ್ ಅಖ್ತರ್ ವಿರುದ್ಧ ಹಲವು ಬಾರಿ ಪ್ರತಿಭಟನೆ ನಡೆಸಿದೆ. ಮಹಾರಾಷ್ಟ್ರದ ಶಾಸಕ ಮತ್ತು ಬಿಜೆಪಿ ವಕ್ತಾರ ರಾಮ್ ಕದಮ್ ಅವರು ಜಾವೇದ್ ಅಖ್ತರ್ ಆರ್‌ಎಸ್‌ಎಸ್‌ ಬಳಿ ಕ್ಷಮೆಯಾಚಿಸುವವರೆಗೂ ದೇಶದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದೆಂದು ತಿಳಿಸಿದ್ದರು. 

Maharashtra | RSS worker Vivek Champanerkar files a civil suit against lyricist Javed Akhtar in Thane court for allegedly comparing the organisation with Taliban; court sends notice to Akhtar asking him to be present before it on the next date of hearing on November 12.

— ANI (@ANI)

ಜಾವೇದ್ ಅಖ್ತರ್ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ಮತ್ತು "ಹಿಂದೂ ರಾಷ್ಟ್ರವನ್ನು ಬಯಸುವವರಿಗೆ" ಸೈದ್ಧಾಂತಿಕ ಸಾಮ್ಯತೆ ಇದೆ ಎಂದು ಹೇಳಿದ್ದರು. ಬಿಜೆಪಿಯ ಸೈದ್ಧಾಂತಿಕ ಮಾತೃ ಸಂಘಟನೆಯಾಗಿರುವ ಆರೆಸ್ಸೆಸ್, ಭಾರತವು ಹಿಂದೂ 'ರಾಷ್ಟ್ರ' ಅಥವಾ ರಾಜ್ಯ ಎಂದು ಬಹಳ ಹಿಂದಿನಿಂದಲೂ ನಂಬಿದೆ ಎಂದು ಅವರು ಹೇಳಿದರು. ರಾಮ್ ಕದಮ್ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ, ಅಖ್ತರ್ ಅವರ ಹೇಳಿಕೆ ನಾಚಿಕೆಗೇಡು ಎಂದು ಎಚ್ಚರಿಸಿದ್ದರು.

ಇದು ಆರ್‌ಎಸ್‌ಎಸ್ ಮತ್ತು ವಿಎಚ್‌ಪಿ ಕಾರ್ಯಕರ್ತರಿಗೆ ಮತ್ತು ಅವರ ಸಿದ್ಧಾಂತವನ್ನು ನಂಬಿರುವ ಕೋಟಿಗಟ್ಟಲೆ ಜನರಿಗೆ ಅವಮಾನಕರವಾಗಿದೆ. ಮತ್ತೊಂದೆಡೆ, ಜಾವೇದ್ ಅಖ್ತರ್ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಜಾವೇದ್ ಅಖ್ತರ್ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಂಗನಾ ವಿರುದ್ಧ ಈ ಪ್ರಕರಣ ದಾಖಲಿಸಿದ್ದಾರೆ.

click me!