ಗುಜರಾತ್‌ನಲ್ಲೂ ರಾಮನವಮಿ ಗಲಭೆಕೋರರ ಮನೆ ಧ್ವಂಸ

Published : Apr 16, 2022, 06:47 AM IST
ಗುಜರಾತ್‌ನಲ್ಲೂ ರಾಮನವಮಿ ಗಲಭೆಕೋರರ ಮನೆ ಧ್ವಂಸ

ಸಾರಾಂಶ

* ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‌ ಸರ್ಕಾರದಿಂದ ಆರೋಪಿಗಳ ವಿರುದ್ಧ ಕ್ರಮ * ಗುಜರಾತ್‌ನಲ್ಲೂ ರಾಮನವಮಿ ಗಲಭೆಕೋರರ ಮನೆ ಧ್ವಂಸ * ಹಿಂಸೆ ಆರೋಪಿಗಳ ಮನೆಗೆ ಬುಲ್ಡೋಜರ್‌

ಅಹಮದಾಬಾದ್‌(ಏ.16): ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‌ ಸರ್ಕಾರವೂ ರಾಮನವಮಿಯಂದು ಖಂಬಾತ್‌ನಲ್ಲಿ ಗಲಭೆ ನಡೆಸಿದ ಆರೋಪಿಗಳ ಆಸ್ತಿ ಪಾಸ್ತಿಯನ್ನು ಬುಲ್ಡೋಜರ್‌ ಬಳಕೆ ಮಾಡಿ ಕೆಡವಲು ಆದೇಶಿಸಿದೆ.

ಖಂಬಾತ್‌ನಲ್ಲಿ ಮಸೀದಿ ಸುತ್ತಲಿನ ಕೆಲವು ಮನೆ ಹಾಗೂ ಕಟ್ಟಡದಲ್ಲಿ ಅವಿತಿದ್ದ ಆರೋಪಿಗಳು ರಾಮನವಮಿ ಮೆರವಣಿಗೆ ಮೇಲೆ ಕಲ್ಲು ಎಸೆದಿದ್ದರು ಎಂದು ಆರೋಪಿಸಲಾಗಿತ್ತು. ಹೀಗಾಗಿ ಈ ಮನೆಗಳನ್ನೇ ಗುರಿಯಾಗಿಸಿಕೊಂಡು ಧ್ವಂಸ ಕಾರಾರ‍ಯಚರಣೆ ನಡೆಸಲಾಗುತ್ತಿದೆ. ಇವುಗಳಲ್ಲಿ ಕೆಲವು ಅಕ್ರಮ ಕಟ್ಟಡಗಳೂ ಇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಲ ವಾರಗಳ ಹಿಂದೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ಹಿಂಸಾಚಾರ ಆರೋಪಿಗಳ ಮನೆ ಹಾಗೂ ಆಂಗಡಿಗಳನ್ನು ಬುಲ್ಡೋಜರ್‌ ಬಳಸಿ ಕೆಡವಲಾಗಿತ್ತು. ಆರೋಪಿಗಳ ಮನೆಯನ್ನು ಕೆಡವಿದ್ದಕ್ಕೆ ಸರ್ಕಾರದ ವಿರುದ್ಧ ವಿಪಕ್ಷಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದವು.

ಈ ನಡುವೆ ಗುಜರಾತಿನ ಖಂಬಾತ್‌ನಲ್ಲಿ ನಡೆಸಿದ ಹಿಂಸಾಚಾರ ಪೂರ್ವ ಯೋಜಿತ ಪಿತೂರಿಯೆಂದು ಗುಜರಾತ್‌ ಪೊಲೀಸರು ಹೇಳಿಕೆ ನೀಡಿದ್ದಾರೆ. ‘ರಾಮನವಮಿ ಶೋಭಾಯಾತ್ರೆಯ ವೇಳೆ ಕಲ್ಲು ತೂರಾಟ ನಡೆಸಲು ಯುವಕರನ್ನು ಬೇರೆಡೆಯಿಂದ ಕರೆ ತರಲಾಗಿತ್ತು. ಅಧಿಕಾರಿಗಳ ಕೈಯಲ್ಲಿ ಅವರು ಸಿಕ್ಕಿಬಿದ್ದರೂ ಅವರಿಗೆ ಹಣ ಹಾಗೂ ಕಾನೂನಾತ್ಮಕ ನೆರವು ಒದಗಿಸುವುದಾಗಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 9 ಜನರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಸುಪರಿಂಟೆಂಡೆಂಟ್‌ ಅಜಿತ್‌ ರಾಜಿಯನ್‌ ತಿಳಿಸಿದ್ದಾರೆ.

ಹಿಂಸಾಚಾರಕ್ಕೂ ಮೊದಲೇ ಜೈಲಿನಲ್ಲಿದ್ದವರ ವಿರುದ್ಧ ಕೇಸ್, ಈಗ ಮನೆಯೂ ಧ್ವಂಸ!

 

 ಮಧ್ಯಪ್ರದೇಶದ ಬರ್ವಾನಿಯಲ್ಲಿ, ಏಪ್ರಿಲ್ 10 ರಂದು ನಗರದಲ್ಲಿ ನಡೆದ ಕೋಮು ಘರ್ಷಣೆಯ ಸಂದರ್ಭದಲ್ಲಿ ಗಲಭೆ ಮತ್ತು ಬೆಂಕಿ ಹಚ್ಚಿದ ಆರೋಪದ ಮೇಲೆ ಮಾರ್ಚ್ 11 ರಿಂದ ಜೈಲಿನಲ್ಲಿರುವ ಮೂವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನಗರದಲ್ಲಿ ಕೋಮು ಗಲಭೆಯ ನಂತರ ಏಪ್ರಿಲ್ 10 ರಂದು ಎರಡು ಮೋಟಾರ್ ಸೈಕಲ್‌ಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮೂವರು ಆರೋಪಿಗಳಾದ ಶಹಬಾಜ್, ಫಕ್ರೂ ಮತ್ತು ರೌಫ್ ಎಂದು ಗುರುತಿಸಲಾಗಿದೆ. ಐಪಿಸಿಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದಲ್ಲಿ ಮೂವರು ಮಾರ್ಚ್ 5 ರಿಂದ ಜೈಲಿನಲ್ಲಿದ್ದಾರೆ.

ರಾಮನವಮಿ ಮೆರವಣಿಗೆಯಲ್ಲಿ ಕಲ್ಲು ತೂರಾಟ ಮತ್ತು ಹಿಂಸಾಚಾರದ ನಂತರ ಬರ್ವಾನಿ ಪೊಲೀಸರು ಸುಮಾರು 1 ಡಜನ್ ಎಫ್‌ಐಆರ್‌ಗಳನ್ನು ದಾಖಲಿಸಿ, ಪ್ರಕರಣ ದಾಖಲಿಸಲಾಗಿದೆ. ಹೀಗಿರುವಾಗ ಮಾರ್ಚ್ 11 ರಂದು ಸಿಕಂದರ್ ಅಲಿ ಮೇಲೆ ಗುಂಡು ಹಾರಿಸಿದ್ದಕ್ಕಾಗಿ ಶಹಬಾಜ್, ಫಕ್ರೂ ಮತ್ತು ರೌಫ್ ಅವರನ್ನು ಸೆಕ್ಷನ್ 307 ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಬರ್ವಾನಿ ಜಿಲ್ಲೆಯ ಎಸ್ಪಿ ಮಾರ್ಚ್ 11 ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಅಂದಿನಿಂದ ಮೂವರೂ ಜೈಲಿನಲ್ಲಿದ್ದಾರೆ.

ಆದರೆ ಈಗಾಗಲೇ ಜೈಲಿನಲ್ಲಿರುವ ಮೂವರು ಗಲಭೆ ನಡೆಸಿ ಬೆಂಕಿ ಹಚ್ಚುವುದು ಹೇಗೆ ಎಂಬುದಕ್ಕೆ ಬರ್ವಾನಿ ಪೊಲೀಸರ ಬಳಿ ಉತ್ತರವಿಲ್ಲ. ಈ ವಿಚಾರದಲ್ಲಿ ನಾವು ತನಿಖೆ ನಡೆಸುತ್ತೇವೆ ಮತ್ತು ತನಿಖೆಯಲ್ಲಿ ಜೈಲು ಅಧೀಕ್ಷಕರಿಂದ ಅವರ ಮಾಹಿತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಸೆಂಧ್ವಾ ಎಸ್‌ಡಿಒಪಿ ಮನೋಹರ್ ಸಿಂಗ್ ಈ ತಿಳಿಸಿದ್ದಾರೆ, ಈಗ ದಾಖಲಾಗಿರುವ ಪ್ರಕರಣವನ್ನು ದೂರುದಾರರ ಆರೋಪಗಳ ಆಧಾರದ ಮೇಲೆ ದಾಖಲಿಸಲಾಗಿದೆ.

ಕೋಮು ಘರ್ಷಣೆಯ ನಂತರ ತನ್ನ ಮನೆಯನ್ನು ಧ್ವಂಸಗೊಳಿಸಲಾಗಿದ್ದು, ತನಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಶೆಹಬಾಜ್ ತಾಯಿ ಸಕೀನಾ ಆರೋಪಿಸಿದ್ದಾರೆ. “ಪೊಲೀಸರು ಇಲ್ಲಿಗೆ ಬಂದರು, ನನ್ನ ಮಗ ಒಂದೂವರೆ ತಿಂಗಳಿನಿಂದ ಒಳಗೆ ಇದ್ದಾನೆ, ಮಾತಿನ ಚಕಮಕಿಯಿಂದ ನಡೆದ ಜಗಳದ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಆದರೆ ಇಲ್ಲಿ ಪೊಲೀಸರು ಬಂದು ನಮ್ಮನ್ನು ಹೊರಹಾಕಿ, ನಿಮ್ಮ ಮನೆ ಒಡೆಯಬೇಕು ಎಂದರು. ಮನೆಯಲ್ಲಿದ್ದ ವಸ್ತುಗಳನ್ನೂ ಚೆಲ್ಲಾಪಿಲ್ಲಿ ಮಾಡಿದರು. ಆದರೆ ಹಿಂಸಾಚಾರ ಪ್ರಕರಣಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಆತ ಇಲ್ಲಿರಲೇ ಇಲ್ಲ, ಜೈಲಿನಲ್ಲಿದ್ದ. ಅವನ ಮೇಲೆ ಎಫ್‌ಐಆರ್ ಏಕೆ ದಾಖಲಿಸಲಾಗಿದೆ ಎಂದು ಪೊಲೀಸರು ಉತ್ತರಿಸಬೇಕು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ