ಮಹಾರಾಷ್ಟ್ರದಲ್ಲಿ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಸ್‌ಗೆ ಎಚ್ಚರಿಕೆ!

By Suvarna NewsFirst Published Sep 12, 2020, 3:48 PM IST
Highlights

ಮಹಾರಾಷ್ಟ್ರದ ಶಿವಸೇನಾ ಸರ್ಕಾರ ಇದೀಗ ತನ್ನ ಅಧಿಕಾರ ಬಳಸಿ ಹಲವರ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಅನ್ನೋ ಆರೋಪ ಬಲವಾಗಿ ಕೇಳಿಬರುತ್ತಿದೆ. ನಟಿ ಕಂಗನಾ ರನೌತ್ ವಿರುದ್ಧ ಸಮರ ಸಾರಿರುವ ಶಿವ ಸೇನಾ ಇದೀಗ ಶಿವ ಸೇನಾ ಸರ್ಕಾರದ ವಿರುದ್ಧ ಸುದ್ಧಿ ಬಿತ್ತಿರಿಸಿದ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್‌ಗಳಿ ತಾಕೀತು ಮಾಡಿದೆ.

ಮುಂಬೈ(ಸೆ.12): ಮಹಾರಾಷ್ಟ್ರ ಸರ್ಕಾರ ಒಂದೊಂದೇ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆ. ನಟಿ ಕಂಗನಾ ರನೌತ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋದ ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ ಸರ್ಕಾರ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ. ಸಿಎಂ ಉದ್ಧವ್ ಠಾಕ್ರೆ ಹಾಗೂ ಸರ್ಕಾರದ ನಡೆಯನ್ನು ಅವಮಾನಿಸಲಾಗುತ್ತಿದೆ. ಹಾಗೂ ಸಂವಿಧಾನಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ರಿಪಬ್ಲಿಕ್ ಟಿವಿ ಸುದ್ದಿವಾಹಿನಿ ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಸ್‌ಗೆ ಎಚ್ಚರಿಕೆ ನೀಡಿದೆ.

ಉದ್ಧವ್ ಸರ್ಕಾರಕ್ಕೆ ದೊಡ್ಡ ಮುಜುಗರ, ದೋಸ್ತಿಗಳ ವಿರುದ್ಧವೇ ಪವಾರ್ ಗುಟುರು!..

ಶಿವಸೇನಾ ಪಕ್ಷದ ಅಧೀನದಲ್ಲಿರುವ ಶಿವಕೇಬಲ್ ಸೇನಾ ನೆಟ್‌ವರ್ಕ್ ಇದೀಗ ಮಹಾರಾಷ್ಟ್ರದ ಎಲ್ಲಾ ಕೇಬಲ್ ಆಪರೇಟರ್ಸ್‌ಗೆ ಪತ್ರ ಬರೆದಿದೆ. ಯಾವುದೇ ಕಾರಣಕ್ಕೂ ಅರ್ನಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿ ಪ್ರಸಾರ ಮಾಡಬಾರದು. ಒಂದು ವೇಳೆ ಈ ಮಾತು ಉಲ್ಲಂಘಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದೆ

ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾನನಷ್ಟ ಕೇಸು ದಾಖಲು..!.

ಶಿವಕೇಬಲ್ ರವಾನಿಸಿರುವ ಪತ್ರದಲ್ಲಿ ಶಿವಸೇನಾ MLA ಸುನಿಲ್ ರೌತ್, MO ಸಂಜಯ್ ರೌತ್ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಸಹಿ ಹಾಕಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಿವ ಸೇನೆ, ಮುಖ್ಯಮಂತ್ರಿ ಸಂವಿಧಾನಿಕ ಹುದ್ದೆ. ಈ ಹುದ್ದೆಗೆ ರಿಪಬ್ಲಿಕ್ ಟಿವಿ ಅಗೌರವ ತೋರಿದೆ. ಇನ್ನು ಸಂವಿಧಾನ ವಿರೋಧಿಸಿ ಸುದ್ಧಿ ವಾಹಿನಿ ಕೋರ್ಟ್ ರೀತಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ರಿಪಬ್ಲಿಕ್ ಟಿವಿ ಸುದ್ಧಿವಾಹನಿಯನ್ನು ಬ್ಯಾನ್ ಮಾಡಬೇಕು ಎಂದು  ತೀವ್ರ ವಾಗ್ದಾಳಿ ನಡೆಸಿದೆ.

ಇತ್ತ ರಿಪಬ್ಲಿಕ್ ಟಿವಿ ಪ್ರಸಾರ ನಿರ್ಬಂಧಿಸಿದಂತೆ ಆದೇಶ ನೀಡೇಬೇಕು ಎಂದು ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿತ್ತು. ಶಿವಕೇಬಲ್ ಸುದ್ಧಿವಾಹಿನಿ ಪ್ರಸಾರ ನಿರ್ಬಂಧಿಸಲು ಕೇಬಲ್ ಆಪರೇಟರ್‌ಗಳಿಗೆ ಸೂಚಿಸಿದೆ ಎಂದು ಮನವಿಯಲ್ಲಿ ಹೇಳಿತ್ತು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. 

click me!