ಅತ್ತ ಸರ್ಕಾರ ರಚನೆಗೆ ಶಿವಸೇನೆ ಕಸರತ್ತು, ಇತ್ತ ಎದೆ ನೋವಿನಿಂದ ಸಂಸದ ಆಸ್ಪತ್ರೆಗೆ ದಾಖಲು

By Web DeskFirst Published Nov 11, 2019, 7:00 PM IST
Highlights

ಒಂದೆಡೆ ಸರ್ಕಾರ ರಚನೆಗೆ ಶಿವಸೇನೆ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಶಿವಸೇನೆ ಸಂಸದ ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮುಂಬೈ, [ನ.11]: ಶಿವಸೇನೆಯ ಹಿರಿಯ ನಾಯಕ ಹಾಗೂ ಸಂಸದ ಸಂಜಯ್ ರಾವತ್ ಸಂಜಯ್ ರಾವತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದು, ಡಾ. ಜಲೀಲ್‌ ಪಾರ್ಕರ್ ಎನ್ನುವರು ಚಿಕಿತ್ಸೆ ನೀಡುತ್ತಿದ್ದಾರೆ. 

ಗಾನ ಕೋಗಿಲೆ ಆರೋಗ್ಯದಲ್ಲಿ ಏರುಪೇರು: ICUನಲ್ಲಿ ಚಿಕಿತ್ಸೆ

ಇಂದು [ಸೋಮವಾರ] ಮಧ್ಯಾಹ್ನ  ಮಹಾರಾಷ್ಟ್ರ ಸರಕಾರ ರಚನೆ ವಿಚಾರವಾಗಿ ಪಕ್ಷದ ನಿಲುವಿನ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ರಾವತ್,  ಎದೆ ನೋಯುತ್ತಿದೆ ಎಂದು ನೇರವಾಗಿ ಆಸ್ಪತ್ರೆಗೆ ತೆರಳಿದರು. 

Mumbai: Shiv Sena leader Sanjay Raut admitted at Lilavati hospital. More details awaited. (File Pic) pic.twitter.com/Y9vDO4GdUa

— ANI (@ANI)

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಶಿವಸೇನೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದರಲ್ಲಿ ಸಂಜಯ್ ರಾವತ್ ಕೂಡ ಪಕ್ಷದ ಚಟುವಟಿಕೆಯಲ್ಲಿ ಫುಲ್ ಬ್ಯುಸಿಯಾಗಿದ್ದರು. ಶಿವಸೇನಾ ಮುಖವಾಣಿ ಸಾಮ್ನಾದ ಕಾರ್ಯಕಾರಿ ಸಂಪಾದಕರಾಗಿರುವ ರಾವತ್, ಸರ್ಕಾರ ರಚನೆ ವಿಚಾರವಾಗಿ ಪಕ್ಷದ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

 ಮಹಾರಾಷ್ಟ್ರ ಫಲಿತಾಂಶ ಬಂದ ದಿನದಿಂದಲೂ ಪ್ರತಿದಿನ ಪಕ್ಷದ ನಿಲುವಿನ ಬಗ್ಗೆ ಮಾಧ್ಯಮದಲ್ಲಿ ಸುದ್ದಿಗೋಷ್ಠಿ ಹಾಗೂ ಬಿಜೆಪಿ ವಿರುದ್ಧ ಟ್ವೀಟ್‌ಗಳನ್ನು ಮಾಡುತ್ತಲೇ ಇದ್ದಾರೆ.

click me!