ಪತ್ನಿಯೆಂದು ಬಂದು ಹುತಾತ್ಮ ಪೈಲಟ್​ನ 21 ಲಕ್ಷ ಪರಿಹಾರ ಪಡೆದು ನಾಪತ್ತೆಯಾದಳು? ಕುಟುಂಬಸ್ಥರು ಕಂಗಾಲು

Published : Jun 19, 2026, 10:47 PM IST
Shubham Kumar

ಸಾರಾಂಶ

ಅಸ್ಸಾಂ ವಿಮಾನ ದುರಂತದಲ್ಲಿ ಹುತಾತ್ಮರಾದ ಪೈಲಟ್ ಶುಭಂ ಕುಮಾರ್ ಅವರ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ. ಅವರಿಗೆ ಸಿಗಬೇಕಿದ್ದ 21 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು, ತಮ್ಮನ್ನು ಪತ್ನಿ ಎಂದು ಹೇಳಿಕೊಂಡ ಅವರ ಸ್ನೇಹಿತೆ ಪಡೆದು ಪರಾರಿಯಾಗಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಅಸ್ಸಾಂನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಹುತಾತ್ಮರಾಗಿರುವ ಭಾರತೀಯ ವಾಯುಪಡೆಯ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್ ಅವರ ಕುಟುಂಬವೀಗ ಭಾರಿ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದೆ. ಇದಕ್ಕೆ ಕಾರಣ, ಅವರಿಗೆ ಸಿಕ್ಕ 21 ಲಕ್ಷ ರೂಪಾಯಿಗಳ ಪರಿಹಾರದ ಮೊತ್ತವನ್ನು ಅವರ ಸ್ನೇಹಿತೆ ಪಡೆದು ಪರಾರಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಶುಭಂ ಕುಟುಂಬದಲ್ಲಿ ಒಬ್ಬರೇ ಸಂಪಾದಿಸುತ್ತಿದ್ದರು, ಅವರ ಹಠಾತ್ ಸಾವು ಈಗ ಕುಟುಂಬಕ್ಕೆ ದುಃಖದಲ್ಲಿ ಮುಳುಗಿರುವುದಾಗಿ ತಂದೆ ಅಮರೇಂದ್ರ ಶರ್ಮಾ ಹೇಳಿದ್ದಾರೆ. ಶುಭಂ ಕುಮಾರ್ ಅವರ ಸ್ನೇಹಿತೆ ಪರಿಹಾರವಾಗಿ ಬಂದ 21 ಲಕ್ಷ ರೂಪಾಯಿ ಚೆಕ್ ಜೊತೆ ಓಡಿಹೋಗಿದ್ದರಿಂದ ಕುಟುಂಬ ಆಘಾತದಲ್ಲಿದೆ. ಅವರು ಪತ್ನಿಯೆಂದು ಬಂದಿದ್ದು, ಇವರು ಮದುವೆಯಾಗಿಲ್ಲ ಎನ್ನುವುದು ಕುಟುಂಬಸ್ಥರ ಆರೋಪ.

ಆಗಿದ್ದೇನು?

ಶುಭಂ ಕುಮಾರ್ ಅವರ ಕುಟುಂಬ ನೀಡಿದ ಮಾಹಿತಿಯ ಪ್ರಕಾರ, ಶುಭಂ ಮತ್ತು ಶ್ರೇಯಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳು ಅವರ ಮದುವೆಗೆ ಅನುಮತಿ ನೀಡಿದ್ದವು. ಈ ವರ್ಷ ನವೆಂಬರ್‌ನಲ್ಲಿ ಅವರು ಮದುವೆಯಾಗಬೇಕಿತ್ತು. ಆದಾಗ್ಯೂ, ಶುಭಂ ಅವರ ಅಜ್ಜಿಯ ಮರಣದಿಂದಾಗಿ, ಮದುವೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಯಿತು. ಇದರ ಅರ್ಥ ಅವರು ಇನ್ನೂ ಮದುವೆಯಾಗಿರಲಿಲ್ಲ. ಅವರು ಮದುವೆಯಾಗಿ ಒಟ್ಟಿಗೇ ಇದ್ದರೋ ನಮಗೆ ಗೊತ್ತಿಲ್ಲ ಎಂದಿದ್ದಾರೆ ಕುಟುಂಬದವರು. "ನನ್ನ ಮಗ ಶ್ರೇಯಾಳನ್ನು ಮದುವೆಯಾಗಿದ್ದರೂ ಅವಳು ಚೆಕ್​ ತೆಗೆದುಕೊಂಡು ಹೋಗಿದ್ದರೆ ನಮಗೆ ಯಾವುದೇ ಅಭ್ಯಂತರವಿರಲಿಲ್ಲ. ಆದರೆ ಚೆಕ್ ಸಿಕ್ಕ ತಕ್ಷಣ ಅವಳು ಹೊರಟುಹೋದಳು. ಅವಳು ನಮ್ಮೊಂದಿಗೆ ಇದ್ದು ನಮಗೆ ಧೈರ್ಯ ತುಂಬಬಹುದಿತ್ತು. ಆದರೆ 21 ಲಕ್ಷ ಪಡೆದು ಹೊರಟು ಹೋಗಿಬಿಟ್ಟಿದ್ದಾಳೆ ಎಂದಿದ್ದಾರೆ.

ಬಿಹಾರಕ್ಕೆ ಬಂದಿದ್ದ ಶ್ರೇಯಾ

ಶುಭಂ ಕುಮಾರ್ ಅವರ ಸಾವಿನ ಸುದ್ದಿ ತಿಳಿದ ನಂತರ, ಅವರ ಪತ್ನಿ ಎಂದು ಹೇಳಿಕೊಂಡು ಶ್ರೇಯಾ ರೈ ಅಜಂಗಢದಿಂದ ಬಿಹಾರಕ್ಕೆ ಬಂದರು. ಅವರು ಶುಭಂ ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದರು. ಆದರೆ ಮುಂದೆ ನಡೆದದ್ದು ಶುಭಂ ಅವರ ಕುಟುಂಬಕ್ಕೆ ದೊಡ್ಡ ಆಘಾತವನ್ನುಂಟು ಮಾಡಿತು. ಸುದ್ದಿ ವೆಬ್‌ಸೈಟ್ ಜಾಗರಣ್ ಪ್ರಕಾರ, ಹುಲಸ್‌ಗಂಜ್‌ನ ಸಿಒ ಶ್ರೇಯಾ ರೈ ಅವರಿಗೆ 21 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದ್ದರು.

ಶುಭಂ ಅವರ ತಂದೆ ಅಮರೇಂದ್ರ ಶರ್ಮಾ ಅವರಿಗೆ ಈ ವಿಷಯ ತಿಳಿದಾಗ, ಅವರು ಸಿಒ ಅವರನ್ನು ಈ ಬಗ್ಗೆ ಕೇಳಿದಾಗ ಅವರು ಚೆಕ್ ಅನ್ನು ತಮ್ಮ ಪತ್ನಿಗೆ ನೀಡಿರುವುದಾಗಿ ಹೇಳಿದರು. ಆದರೆ ಆಕೆ ಮದುವೆಯಾಗಿದ್ದಾಳೋ ಇಲ್ಲವೋ ಗೊತ್ತಿಲ್ಲದೇ ಇರುವುದು ಒಂದೆಡೆಯಾದರೆ, 21 ಲಕ್ಷ ಪಡೆದು ಸದ್ದಿಲ್ಲದೇ ಹೊರಟು ಹೋಗಿರುವುದರಿಂದ ಕುಟುಂಬಕ್ಕೆ ದಿಕ್ಕೇ ತೋಚದಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Cricket Record: ವೈಭವ್ ಸೂರ್ಯವಂಶಿ ಬೆನ್ನಲ್ಲೇ ಬಿಹಾರದ ಮತ್ತೊಬ್ಬ 15 ವರ್ಷದ ಬಾಲಕಿ 300+ ರನ್ ಬಾರಿಸಿ ಸಾಧನೆ!
ಕರ್ನಾಟಕದ ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ, ವಿಧಾನಸಭೆಯಲ್ಲಿ ಸಿಎಂ ವಿಜಯ್ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ!