ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಟಫ್ ಫೈಟ್ ನೀಡಿದ್ರು ರಾಜೀವ್ ಚಂದ್ರಶೇಖರ್; ಶಶಿ ತರೂರು ಗೆಲುವಿನ ಅಂತರ ಎಷ್ಟು?

By Mahmad RafikFirst Published Jun 12, 2024, 6:39 PM IST
Highlights

ಕಾಂಗ್ರೆಸ್‌ನ ಶಶಿ ತರೂರ್ 3,58,155 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ರಾಜೀವ್ ಚಂದ್ರಶೇಖರ್ 3,42,078 ಮತಗಳನ್ನು ಪಡೆಯುವ ಮೂಲಕ ಶಶಿ ತರೂರ್ ಅವರಿಗೆ ಟಫ್‌ ಫೈಟ್ ನೀಡಿದ್ದರು. 

ನವದೆಹಲಿ: ಕೇಂದ್ರದಲ್ಲಿ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವ ಸರ್ಕಾರ ರಚನೆಯಾಗಿದೆ. ಪ್ರಧಾನಿಗಳು ಸೇರಿದಂತೆ ಸಂಪುಟ ಸಚಿವರು (Modi Cabinet) ತಮ್ಮ ಕೆಲಸಗಳನ್ನು ಆರಂಭಿಸಿದ್ದಾರೆ. ಮತ್ತೊಂದೆಡೆ ಬಿಜೆಪಿ (BJP) ಪಕ್ಷದೊಳಗೆ ಚುನಾವಣೆ ಫಲಿತಾಂಶದ (Election Results) ಕುರಿತು ಚರ್ಚೆಗಳು ಆರಂಭವಾಗಿವೆ. 400ಕ್ಕೂ ಅಧಿಕ ಕ್ಷೇತ್ರಗಳನ್ನು ಗುರಿ ತಲುಪವಲ್ಲಿ ಬಿಜೆಪಿ ವಿಫಲವಾದರೂ ಮೈತ್ರಿ ಪಕ್ಷಗಳ ಬೆಂಬಲದಿಂದ ಎನ್‌ಡಿಎ ಸರ್ಕಾರ (NDA Government) ರಚನೆಯಾಗಿದೆ. ಈ ಬಾರಿಯ ಚುನಾವಣೆಯಲ್ಲಿ (Loksabha Election 2024) ಈ ಹಿಂದೆ ಮೋದಿ ಸಂಪುಟದಲ್ಲಿದ್ದ 20 ಸಚಿವರು ಸೋತಿದ್ದಾರೆ. 

ಕೇಂದ್ರ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್ ಮೊದಲ ಬಾರಿ ಲೋಕಸಭಾ ಚುನಾವಣೆಯನ್ನು ಮೊದಲ ಬಾರಿ ಎದುರಿಸಿದ್ದರು. ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ರಾಜೀವ್ ಚಂದ್ರಶೇಖರ್ ಕಡಿಮೆ ಅಂತರಗಳಿಂದ ಸೋಲು ಕಂಡಿದ್ದಾರೆ. 

Latest Videos

16 ಸಾವಿರ ಮತಗಳಿಂದ ಸೋಲು

ಕಾಂಗ್ರೆಸ್‌ನ ಶಶಿ ತರೂರ್ 3,58,155 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ರಾಜೀವ್ ಚಂದ್ರಶೇಖರ್ 3,42,078 ಮತಗಳನ್ನು ಪಡೆಯುವ ಮೂಲಕ ಶಶಿ ತರೂರ್ ಅವರಿಗೆ ಟಫ್‌ ಫೈಟ್ ನೀಡಿದ್ದರು. ರಾಜೀವ್ ಚಂದ್ರಶೇಖರ್‌ಗಿಂತ ಶಶಿ ತರೂರ್ 16,077 ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಚುನಾವಣೆಯಲ್ಲಿ ಸೋತ ಕೇಂದ್ರ ಮಂತ್ರಿಗಳ ಪೈಕಿ ರಾಜೀವ್ ಚಂದ್ರೇಖರ್ ಕಡಿಮೆ ಅಂತರದಿಂದ ಸೋತವರಾಗಿದ್ದಾರೆ. 

ಅಂತಿಮ ಕ್ಷಣದಲ್ಲಿ ಹೆಸರು ಘೋಷಣೆ ಆಗಿದ್ದರಿಂದ ರಾಜೀವ್ ಚಂದ್ರಶೇಖರ್ ಅವರಿಗೆ ಪ್ರಚಾರಕ್ಕೂ ಹೆಚ್ಚು ಸಮಯ ಸಿಕ್ಕಿರಲಿಲ್ಲ. ಇದರ ಜೊತೆಗೆ ತಿರುವನಂತಪುರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದು ಬಿಂಬಿತವಾಗಿದೆ. ಶಶಿ ತರೂರ್ ಇಲ್ಲಿಂದ ಸತತವಾಗಿ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ ಭದ್ರಕೋಟೆಯಲ್ಲಿ ಕಾಂಗ್ರೆಸ್‌ಗೆ ಕೊನೆಯವರೆಗೂ ರಾಜೀವ್ ಚಂದ್ರಶೇಖರ್ ತೀವ್ರ ಸ್ಪರ್ಧೆಯನ್ನು ನೀಡಿದ್ದರು. 

ಒಡಿಶಾದಲ್ಲಿ ಬಿಜೆಪಿ ಹೊಸ ಸರ್ಕಾರಕ್ಕೆ ತಲೆನೋವಾದ ನವೀನ್ ಪಟ್ನಾಯಕ್ 24 ವರ್ಷದ ವರ್ಕ್ ಫ್ರಮ್ ಹೋಮ್

ಚುನಾವಣೆಯಲ್ಲಿ ಸೋತ ಮಂತ್ರಿಗಳು ಮತ್ತು ಲೋಕಸಭಾ ಕ್ಷೇತ್ರ
1.ರಾಜೀವ್ ಚಂದ್ರಶೇಖರ್: ತಿರುವನಂತಪುರಂ
2.ಸ್ಮೃತಿ ಇರಾನಿ: ಅಮೇಥಿ 
3.ಅಜಯ್ ಕುಮಾರ್ ಮಿಶ್ರಾ: ಲಖೀಂಪುರ ಖೇರಿ 
4.ಸುಭಾಶ್ ಸರ್ಕರ್: ಬಂಕೂರ
5.ಅರ್ಜುನ್ ಮುಂಡ: ಕುಂತಿ 
6.ಕೈಲಾಶ್ ಚೌಧರಿ: ಬಾರ್ಮೇರ
7.ಎಲ್ ಮುರುಗನ್: ನೀಲಗಿರಿ 
8.ನಿಶಿತ್ ಪ್ರಾಮಾಣಿಕ್: ಬೆಹರ್ 
9.ಸಂಜೀವ್ ಬಾಲ್ಯಾನ್: ಮುಜಾಫರ್ ನಗರ
10.ಕಪೀಲ್ ಪಾಟೀಲ್: ಭಿವಂಡಿ 
11.ರಾವ್‌ಸಾಹೇಬ್ ದನ್ವೆ: ಜಲ್ನಾ
12.ಭಾರತಿ ಪವಾರ್: ದಿಂಡೋರಿ 
13.ಕೌಶಲ್ ಕಿಶೋರ್: ಮೋಹನಲಾಲ್ ಗಂಜ್ 
14.ಭಗವಂತ್ಖ ಖುಬಾ: ಬೀದರ್ 
15.ವಿ ಮುರಳೀಧರನ್: ಅಟ್ಟಿಂಗಲ್
16.ಮಹೇಂದರನಾಥ್ ಪಾಂಡೆ: ಚಂದೌಲಿ 
17.ಸಾಧ್ವಿ ನಿರಂಜನ್ ಜ್ಯೋತಿ: ಫತೇಪುರ
18.ಭಾನು ಪ್ರತಾಪ್ ಸಿಂಗ್: ಜಲೌಣ್ 
19.ರಾಜ್‌ಕುಮಾರ್ ಸಿಂಗ್:ಅರ್ಹಾ
20.ದೇಬಸ್ರಿ ಚೌಧರಿ: ಕೋಲ್ಕತ್ತಾ ದಕ್ಷಿಣ

ಕಾರ್ಯಕರ್ತನ ಗುರುತಿಸಿ ಸಚಿವನನ್ನಾಗಿ ಮಾಡಿದ ಬಿಜೆಪಿಯನ್ನು ಶ್ಲಾಘಿಸಿದ ನಾಯ್ಡು: ವೀಡಿಯೋ ವೈರಲ್‌

click me!