
ಕೊಚ್ಚಿ(ಜ.03): ದೇಶದಲ್ಲೀಗ ಕೊರೋನಾ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಇದರ ಬೆನ್ನಲ್ಲೇ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆ ತುರ್ತು ಬಳಕಿಗೆ ಅನುಮತಿ ಕೂಡ ಸಿಕ್ಕಿದೆ. ಆಕ್ಸ್‌ಫರ್ಡ್ ಅಸ್ಟ್ರಾಝನಿಕಾ ಕೊರೋನಾ ಲಸಿಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಭಾರತ ಭಯೋಟೆಕ್ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಲಸಿಕೆಗೂ ಅನುಮತಿ ನೀಡಲಾಗಿದೆ. ಭಾರತೀಯ ಐಷದ ನಿಯಂತ್ರಕ(DCGI) ಅನುಮತಿ ನೀಡಿದೆ. ಆದರೆ ಈ ನಿರ್ಧಾರ ಅಪಾಯಕ್ಕೆ ಅಹ್ವಾನ ನೀಡಿದಂತೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಭಾರತ ಅಭಿವೃದ್ಧಿ ಪಡಿಸಿದ ಕೋವ್ಯಾಕ್ಸಿನ್, ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ
ಭಾರತದ ಆಕ್ಸ್‌ಫರ್ಡ್ ಅಸ್ಟ್ರಾಝೆನಿಕ ಲಸಿಕೆಗೆ ಬಳಕೆ ಮಾಡಬಹುದು. ಆದರೆ ಭಾರತ ಅಭಿವೃದ್ಧಿ ಪಡಿಸಿದ ಕೋವಾಕ್ಸಿನ್ ಲಸಿಕೆ 3ನೇ ಹಂತದ ಪ್ರಯೋಗವೇ ನಡೆದಿಲ್ಲ. ಕೇವಲ 2 ಹಂತದ ಪ್ರಯೋಗದ ಬಳಿಕ ದಿಢೀರ್ ಅನುಮತಿ ನೀಡಿರುವುದು ಸರಿಯಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರನ್ನು ತರೂರ್ ಪ್ರಶ್ನಿಸಿದ್ದಾರೆ.
ದೇಶ ಅಭಿವೃದ್ಧಿ ಪಡಿಸಿದ ಲಸಿಕೆಯನ್ನು ತುರ್ತು ಕಾರಣ ನೀಡಿ ಬಳಕೆಗೆ ಅನುಮತಿ ನೀಡಲಾಗಿದೆ. ಇನ್ನೂ ಕೂಡ ಪ್ರಾಯೋಗಿಕ ಹಂತದ ಪರೀಕ್ಷೆಗಳು ಮುಗಿದೇ ಇಲ್ಲ. ಹೀಗಿರುವಾಗ ಲಾಬಿಗೆ ಮಣಿದು ಅನುಮತಿ ನೀಡಲಾಗಿದೆ ಎಂದು ತರೂರ್ ಆರೋಪಿಸಿದ್ದಾರೆ. ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಕೇಂದ್ರ ಸಾಕಷ್ಟು ಮುನ್ನಚ್ಚೆರಿಕೆ ವಹಿಸಬೇಕು. ಲಸಿಕೆ ಪಡೆದವರ ಮುಂದಿನ ಸ್ಥಿತಿ , ಅಡ್ಡಪರಿಣಾಮ ಕುರಿತು ಕೋವಾಕ್ಸಿನ್ ಪ್ರಯೋಗಗಳು ನಡೆದಿಲ್ಲ. ಹೀಗಾಗಿ ಭಾರತದ ಕೋವಾಕ್ಸಿನ್ ಲಸಿಕೆಯೊಂದಿಗೆ ಮುಂದುವರಿಯುವುದು ಅಪಾಯ ಎಂದು ತರೂರ್ ಹೇಳಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ