ಭಾರತೀಯ ಚುನಾವಣಾ ಆಯೋಗವು ಶುಕ್ರವಾರದಂದು ಪಕ್ಷದ ಹೆಸರು "ಶಿವಸೇನೆ" ಮತ್ತು "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನೀಡಿದ್ದು, ಇದು ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆಯಾಗಿದೆ.
ಪುಣೆ, ಮಹಾರಾಷ್ಟ್ರ (ಫೆಬ್ರವರಿ 18, 2023): ಶಿವಸೇನೆ ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಅವರ ಪಕ್ಷ ಶಿವಸೇನೆಯ ಚಿಹ್ನೆಯಾದ "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ಕಳೆದುಕೊಂಡಿದ್ದರೆ. ಈ ಹಿನ್ನೆಲೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಬಣವೇ ನಿಜವಾದ ಶಿವಸೇನೆ ಎನಿಸಿಕೊಂಡಿದ್ದು, ಆ ಬಣಕ್ಕೆ ಶಿವಸೇನೆಯ ಅಧಿಕೃತ ಚಿಹ್ನೆಯೂ ದೊರೆತಿದೆ. ಈ ಹಿನ್ನೆಲೆ ತಮ್ಮ ಮಿತ್ರ ಪಕ್ಷವಾದ ಉದ್ಧವ್ ಠಾಕ್ರೆ ಬಣ ಚಿಹ್ನೆ ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಇದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಜನರು ಹೊಸ ಚಿಹ್ನೆಯನ್ನು (Symbol) ಒಪ್ಪಿಕೊಳ್ಳುತ್ತಾರೆ ಎಂದೂ ಶರದ್ ಪವಾರ್ (Sharad Pawar) ಹೇಳಿದರು. ಚುನಾವಣಾ ಆಯೋಗವು (Election Commission) ಪಕ್ಷದ ಹೆಸರು "ಶಿವಸೇನೆ" (Shivsena) ಮತ್ತು ಪಕ್ಷದ ಚಿಹ್ನೆ "ಬಿಲ್ಲು ಮತ್ತು ಬಾಣ"ವನ್ನು (Bow and Arrow) ಏಕನಾಥ್ ಶಿಂಧೆ (Eknath Shinde) ಬಣಕ್ಕೆ ನೀಡಲಾಗುವುದು ಎಂದು ಆದೇಶಿಸಿದ ನಂತರ ಶರದ್ ಪವಾರ್ ಈ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡು ಹೊಸ ಚಿಹ್ನೆಯನ್ನು ತೆಗೆದುಕೊಳ್ಳುವಂತೆಯೂ ಎನ್‌ಸಿಪಿ (NCP) ಮುಖ್ಯಸ್ಥರು ಉದ್ಧವ್ ಠಾಕ್ರೆ (Uddhav Thackeray) ಅವರಿಗೆ ಸಲಹೆ ನೀಡಿದ್ದಾರೆ.
ಇದನ್ನು ಓದಿ: ಏಕನಾಥ್ ಶಿಂಧೆ ಬಣಕ್ಕೆ ಗೆಲುವು, ಠಾಕ್ರೆ ಕೈತಪ್ಪಿದ ಶಿವಸೇನೆ ಹೆಸರು, ಪಕ್ಷದ ಚಿಹ್ನೆ!
“ಇದು ಚುನಾವಣಾ ಆಯೋಗದ ನಿರ್ಧಾರ, ಒಮ್ಮೆ ನಿರ್ಧಾರ ನೀಡಿದ ನಂತರ ಯಾವುದೇ ಚರ್ಚೆ ಸಾಧ್ಯವಿಲ್ಲ, ಅದನ್ನು ಸ್ವೀಕರಿಸಿ ಮತ್ತು ಹೊಸ ಚಿಹ್ನೆ ತೆಗೆದುಕೊಳ್ಳಿ. ಹಳೆಯ ಚಿಹ್ನೆಯ ನಷ್ಟ ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ. ಏಕೆಂದರೆ ಜನರು ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ. ಇದು ಮುಂದಿನ 15-30 ದಿನಗಳವರೆಗೆ ಚರ್ಚೆಯಲ್ಲಿರುತ್ತದೆ ಅಷ್ಟೇ ಎಂದೂ ಶರದ್ ಪವಾರ್ ಹೇಳಿದರು.
ಕೈಗೆ ನೊಗವಿರುವ ಎರಡು ಹೋರಿಗಳ ಚಿಹ್ ಹೊಂದಿದ್ದ ಕಾಂಗ್ರೆಸ್ ಪಕ್ಷ ತನ್ನ ಚಿಹ್ನೆಯನ್ನು ಬದಲಾಯಿಸಬೇಕಾಗಿರುವುದನ್ನು ಸ್ಮರಿಸಿದ ಶರದ್ ಪವಾರ್, ಕಾಂಗ್ರೆಸ್‌ನ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸಿದ ರೀತಿಯಲ್ಲಿ ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಜನರು ಸ್ವೀಕರಿಸುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಂದಿರಾಗಾಂಧಿ ಕೂಡ ಈ ಪರಿಸ್ಥಿತಿಯನ್ನು ಎದುರಿಸಿದ್ದು ನನಗೆ ನೆನಪಿದೆ. ಕಾಂಗ್ರೆಸ್‌ನಲ್ಲಿ ನೊಗವಿರುವ ಎರಡು ಎತ್ತುಗಳ ಚಿಹ್ನೆ ಇತ್ತು, ನಂತರ ಅವರು ಅದನ್ನು ಕಳೆದುಕೊಂಡರು ಮತ್ತು ಹೊಸ ಚಿಹ್ನೆಯಾಗಿ 'ಕೈ' ಅನ್ನು ಅಳವಡಿಸಿಕೊಂಡರು ಮತ್ತು ಜನರು ಅದನ್ನು ಒಪ್ಪಿಕೊಂಡರು. ಹಾಗೆಯೇ ಜನರು ಉದ್ಧವ್ ಠಾಕ್ರೆ ಬಣದ ಹೊಸ ಚಿಹ್ನೆಯನ್ನು ಸ್ವೀಕರಿಸುತ್ತಾರೆ ಎಂದು ಅವರು ಹೇಳಿದರು.
ಶಿವಸೇನೆ - ಕಾಂಗ್ರೆಸ್ ಮೈತ್ರಿ ಖತಂ..? ಸಾವರ್ಕರ್ ವಿರುದ್ಧ ಹೇಳಿಕೆ ಹಿನ್ನೆಲೆ ಉದ್ಧವ್ ಬಣದ ಚಿಂತನೆ
ಭಾರತೀಯ ಚುನಾವಣಾ ಆಯೋಗವು ಶುಕ್ರವಾರದಂದು ಪಕ್ಷದ ಹೆಸರು "ಶಿವಸೇನೆ" ಮತ್ತು "ಬಿಲ್ಲು ಮತ್ತು ಬಾಣ" ಚಿಹ್ನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಕ್ಕೆ ನೀಡಿದ್ದು, ಇದು ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆಯಾಗಿದೆ. ಈ ಹಿನ್ನೆಲೆ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್‌ಗೆ ಹೋಗುವುದಾಗಿ ಹೇಳಿದೆ.
ಈ ಮಧ್ಯೆ, ಚುನಾವಣಾ ಆಯೋಗದ ಆದೇಶದ ನಂತರ ಏಕನಾಥ್ ಶಿಂಧೆ ಬಣ ಇಂದು ನಾಸಿಕ್‌ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದೆ. ಇನ್ನೊಂದೆಡೆ, ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿದ ಉದ್ಧವ್ ಠಾಕ್ರೆ ಬಣ, ತರಾತುರಿಯಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದೆ. ಹಾಗೂ, ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸುತ್ತದೆ ಎಂದೂ ಟೀಕೆ ಮಾಡಿದೆ.
ಮುಂಬೈ ಪಾರ್ಕ್‌ಗೆ ಇಟ್ಟಿದ್ದ ಟಿಪ್ಪು ಹೆಸರು ಕಿತ್ತೆಸೆದ ಸಿಎಂ ಶಿಂಧೆ, ಸಿಹಿ ಹಂಚಿ ನಿವಾಸಿಗಳ ಸಂಭ್ರಮ!