
ಪಿಎಂಒನಲ್ಲಿ ಶಕ್ತಿಕಾಂತ್ ದಾಸ್ ನೇಮಕಾತಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ದ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದರ ಜೊತೆಗೆ, ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿಯನ್ನು ಸಹ ವಿಸ್ತರಿಸುವ ಆದೇಶವನ್ನು ಹೊರಡಿಸಲಾಗಿದೆ.
ಸರ್ಕಾರದಿಂದ ಹೊರಡಿಸಲಾದ ಅಧಿಸೂಚನೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಶಕ್ತಿಕಾಂತ್ ದಾಸ್ ಅವರ ನೇಮಕಾತಿಯು ಪ್ರಧಾನಮಂತ್ರಿಯವರ ಅಧಿಕಾರಾವಧಿ ಮುಗಿಯುವವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಕ್ಯಾಬಿನೆಟ್ ನೇಮಕಾತಿ ಸಮಿತಿ ತಿಳಿಸಿದೆ.
ಬ್ಯಾಂಕ್‌ನಲ್ಲಿ ಹಣ ಹೂಡಿಕೆ ಮಾಡೋರಿಗೆ ಸರ್ಕಾರದ ಗುಡ್‌ನ್ಯೂಸ್, ಡೆಪಾಸಿಟ್ ಇನ್ಶುರೆನ್ಸ್ ಏರಿಕೆ ಸಾಧ್ಯತೆ!
ಗುಜರಾತ್ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ಮಿಶ್ರಾ ಅವರು ಈವರೆಗೆ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅಧಿಕೃತ ಆದೇಶದ ಪ್ರಕಾರ, ತಮಿಳುನಾಡು ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಈಗ ಪಿಎಂ ಅವರ ಪ್ರಧಾನ ಕಾರ್ಯದರ್ಶಿಯಾಗಿರುವ ಜವಾಬ್ದಾರಿ ನೀಡಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನ 25 ನೇ ಗವರ್ನರ್, ಭಾರತದ G20 ಶೆರ್ಪಾ ಮತ್ತು 15 ನೇ ಹಣಕಾಸು ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಳೆದ ಡಿಸೆಂಬರ್ 10 ರಂದು ಶಕ್ತಿಕಾಂತ ದಾಸ್ 25 ನೇ ಆರ್‌ಬಿಐ ಗವರ್ನರ್ ಹುದ್ದೆಯಿಂದ ಕೆಳಗಿಳಿದರು. ಭಾರತದ ಕೇಂದ್ರ ಬ್ಯಾಂಕ್‌ನ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಗವರ್ನರ್‌ಗಳಲ್ಲಿ ಅವರು ಒಬ್ಬರು.
ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿ ವಿಸ್ತರಣೆ ಸರ್ಕಾರಿ ಥಿಂಕ್ ಟ್ಯಾಂಕ್ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿಯನ್ನು ಸಹ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಅವರ ಅಧಿಕಾರಾವಧಿ 24 ಫೆಬ್ರವರಿ 2025 ರಿಂದ ಪ್ರಾರಂಭವಾಗುತ್ತದೆ. 1987 ರ ಬ್ಯಾಚ್‌ನ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾದ ಸುಬ್ರಹ್ಮಣ್ಯಂ ಅವರನ್ನು ಫೆಬ್ರವರಿ 2023 ರಲ್ಲಿ ನೀತಿ ಆಯೋಗದ ಸಿಇಒ ಆಗಿ ನೇಮಿಸಲಾಯಿತು.
ಹೊಸ 50 ರೂ. ನೋಟುಗಳನ್ನು ಬಿಡುಗಡೆಗೊಳಿಸಿದ RBI, ಹೇಗಿದೆ ನೋಡಿ ನೂತನ ನೋಟು
ಆರ್‌ಬಿಐ ಗವರ್ನರ್ ಆಗಿ ದಾಸ್ ನಿವೃತ್ತಿ ಶಕ್ತಿಕಾಂತ್ ದಾಸ್ ಡಿಸೆಂಬರ್ 2018 ರಿಂದ ಆರು ವರ್ಷಗಳ ಕಾಲ ಆರ್‌ಬಿಐ ಮುಖ್ಯಸ್ಥರಾಗಿದ್ದರು. ಅವರು ನಾಲ್ಕು ದಶಕಗಳ ಆಡಳಿತಾತ್ಮಕ ಸೇವೆಯ ವ್ಯಾಪಕ ಅನುಭವವನ್ನು ಹೊಂದಿದ್ದಾರೆ. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಹಣಕಾಸು, ತೆರಿಗೆ, ಕೈಗಾರಿಕೆ, ಮೂಲಸೌಕರ್ಯದಂತಹ ಪ್ರಮುಖ ಕ್ಷೇತ್ರಗಳಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಆರ್‌ಬಿಐ ಗವರ್ನರ್ ಆಗಿ, ಅವರು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಭಾರತದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಂಡರು. ಸಾಂಕ್ರಾಮಿಕದ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಹಣಕಾಸು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹಣಕಾಸು ನೀತಿ, ಲಿಕ್ವಿಡಿಟಿ ಸ್ಥಿತಿ ಮತ್ತು ನಿಯಂತ್ರಕ ನೀತಿಗಳ ಅಡಿಯಲ್ಲಿ ಸಾಂಪ್ರದಾಯಿಕ ಮತ್ತು ನವೀನ ಕ್ರಮಗಳನ್ನು ಜಾರಿಗೆ ತಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ