ಶಿವನ ಪವಿತ್ರ ಕನ್ವಾರ್ ಯಾತ್ರೆ ಭಕ್ತರ ಮೇಲೆ ಕಲ್ಲು ತೂರಾಟ, ಹಲವರು ಗಂಭೀರ ಗಾಯ!

Published : Jul 23, 2023, 08:15 PM IST
ಶಿವನ ಪವಿತ್ರ ಕನ್ವಾರ್ ಯಾತ್ರೆ ಭಕ್ತರ ಮೇಲೆ ಕಲ್ಲು ತೂರಾಟ, ಹಲವರು ಗಂಭೀರ ಗಾಯ!

ಸಾರಾಂಶ

ಶಿವನ ಪವಿತ್ರ ಕನ್ವಾರಿಯಾ ಯಾತ್ರೆ ಸಾಗುತ್ತಿದ್ದ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮಸೀದಿ ಸಮೀಪದ ರಸ್ತೆಯಲ್ಲಿ ಸಾಗುತ್ತಿದ್ದ ಭಕ್ತರ ಮೇಲೆ ಕಲ್ಲುತೂರೂಟ ನಡೆಸಲಾಗಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಹಲವು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಬರೇಲಿ(ಜು.23) ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿದ ಶಿವನ ಪವಿತ್ರ ಕನ್ವಾರ್ ಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಶಿವನ ವಾರ್ಷಿಕ ಜಾತ್ರೆಯ ಪದ್ದತಿಯಂತೆ ಕಚ್ಲಾಘಾಟ್‌ನಿಂದ ನೀರು ತರಲು ಯಾತ್ರೆ ಸಾಗಿತ್ತು. ಆದರೆ ಜೋಗಿ ನವಾಡದ ಶಾಹನೂರಿ ಮಸೀದಿ ಬಳಿ ತಲುಪುತ್ತಿದ್ದಂತೆ ಭಕ್ತರ ಮೇಲೆ ಕಲ್ಲುಗಳು ತೂರಿ ಬಂದಿದೆ. ಮಸೀದಿಯ ಪಕ್ಕದ ರಸ್ತೆಯ ಮೂಲಕ ಯಾತ್ರೆ ಸಾಗುತ್ತಿದ್ದಂತೆ ಒಂದೇ ಸಮನೆ ಎಲ್ಲಾ ದಿಕ್ಕಿನಿಂದ ಕಲ್ಲುತೂರಾಟ ನಡೆಸಿದ್ದಾರೆ. ಇದರಿಂದ ಭಕ್ತರು ಮಾತ್ರವಲ್ಲ ಯಾತ್ರೆಗೆ ಭದ್ರತೆ ನೀಡುತ್ತಿದ್ದ ಹಲವು ಪೊಲೀಸರು ಗಾಯಗೊಂಡಿದ್ದಾರೆ. ಮಸೀದಿಯಿಂದ ಹಾಗೂ ಮಸೀದಿ ಪಕ್ಕದಲ್ಲಿರುವ ಕಟ್ಟಡ, ರಸ್ತೆಯಲ್ಲಿ ನಿಂತ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯ ವೈರಲ್ ಆಗಿದೆ.

ಬರೇಲಿಯ ಥಾನಾ ಬರಾದರಿಯಿಂದ ಪವಿತ್ರ ಕಾನ್ವಾರ್ ಯಾತ್ರೆ ಹೊರಟಿತ್ತು. ಶಿವನ ಭಜನೆ,ಸ್ತ್ರೋತ್ರಗಳ ಪಠಿಸುತ್ತಾ ಯಾತ್ರೆ ಸಾಗಿತ್ತು. ಶಾಂತಿಯುತವಾಗಿ ಸಾಗುತ್ತಿದ್ದ ಯಾತ್ರಗೆ ಉತ್ತರ ಪ್ರದೇಶ ಪೊಲೀಸರು ಭದ್ರತೆ ನೀಡಿದ್ದರು. ವಿನ್ಸಿಟಿ ಬಳಿ ಇರುವ ಶಿವನ ದೇಗುಲದಿಂದ ಹೊರಟ ಯಾತ್ರೆ ಯಾವುದೇ ಸಮಸ್ಯೆ ಇಲ್ಲದೆ ಸಾಗಿತ್ತು. ಹಲವು ಪ್ರದೇಶಗಳಲ್ಲಿ ಯಾತ್ರೆ ಸಾಗುತ್ತಿದ್ದ ದಾರಿಯಲ್ಲಿ ಹೂವಿನ ಸ್ವಾಗತ ನೀಡಲಾಗಿದೆ. ಹಲೆವೆಡೆ ದೀಪ ಬೆಳಗಿ ಸ್ವಾಗತ ಕೋರಲಾಗಿತ್ತು. ಆದರೆ ಜೋಗಿ ನವಾಡ ಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲು ಹಿಡಿದು ಸಜ್ಜಾಗಿ ನಿಂತಿದ್ದರು. ಮಸೀದಿಯ ಪಕ್ಕದ ರಸ್ತೆಯಲ್ಲಿ ಸಾಗಬೇಕಿದ್ದ ಯಾತ್ರೆ ಮೇಲೆ ಒಂದೇ ಸಮನೆ ಕಲ್ಲು ತೂರಾಟ ನಡೆಸಿದ್ದಾರೆ. 

ಬಸವ ಎಕ್ಸ್‌ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ; ಬೋಗಿ ಗಾಜು ಪುಡಿಪುಡಿ!

ಈ ಪ್ರದೇಶದಲ್ಲೇ ಯಾತ್ರೆ ಸಾಗಬಾರದು ಎಂದು ಘೋಷಣೆ ಕೂಗಿದ್ದಾರೆ. ಶಾಂತಿಯುತವಾಗಿ ಸಾಗುತ್ತಿದ್ದ ಯಾತ್ರೆ ಮೇಲೆ ಕಲ್ಲುಗಳು ತೂರಿ ಬಂದಿದೆ. ಸುಮಾರು 2,000ಕ್ಕೂ ಅಧಿಕ ಮಂದಿ ಕನ್ವಾರ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕಲ್ಲು ತೂರಾಟದಿಂದ ಭಕ್ತರು ತಪ್ಪಿಸಿಕೊಳ್ಳಲು ಓಡಬೇಕಾದ ಅನಿವಾರ್ಯತೆ ಎದುರಾಯಿತು. ಇತ್ತ ಪೊಲೀಸರು ಗಾಯಗೊಂಡಿದ್ದಾರೆ. ಕೆರಳಿದ ಕೆಲ ಭಕ್ತರು ಅದೇ ಕಲ್ಲುಗಳನ್ನು ವಾಪಸ್ ಎಸೆದಿದ್ದಾರೆ. ಇದರಿಂದ ಪರಿಸ್ಥಿತಿ ತೀವ್ರಸ್ವರೂಪ ಪಡೆದುಕೊಂಡಿತು. 

 

 

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಕನ್ವಾರ್ ಯಾತ್ರೆ ಮುಂದೇ ಸಾಗಿದೆ. ಬಳಿಕ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಯಿತು. ಬಿಗಿ ಭದ್ರತೆಯಲ್ಲಿ ಕನ್ವಾರ್ ಯಾತ್ರೆ ಮುಂದುವರಿಯಿತು.ಕಲ್ಲು ತೂರಾಟದ ವಿಡಿಯೋಗಳು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬಿಜೆಪಿ ಮಂಡಲ ಅಧ್ಯಕ್ಷನ ಕಾರಿನ ಮೇಲೆ ಕಲ್ಲೆಸೆತ, ಕಾಂಗ್ರೆಸ್ ಗೂಂಡಾಗಳನ್ನು ಬಂದಿಸುವಂತೆ ಪ್ರತಿಭಟನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌