ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭಗೊಂಡಿದೆ. ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿದೆ. ಇತ್ತ ಆಯೋಧ್ಯೆ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಪ್ರಧಾನಿ ಮೋದಿ ಆಗಮನಕ್ಕೆ ಆಯೋಧ್ಯೆ ಸಂಪೂರ್ಣ ಸಜ್ಜಾಗಿದೆ. ಆಯೋಧ್ಯೆಯಲ್ಲಿ ಪ್ರಧಾನಿ ಮೋದಿ ವೇಳಾಪಟ್ಟಿ ಇಲ್ಲಿದೆ.
ಆಯೋಧ್ಯೆ(ಜ.22) ಪ್ರಭು ಶ್ರೀರಾಮಚಂದ್ರ ವನವಾಸ ಮುಗಿಸಿ ಆಯೋಧ್ಯೆಗೆ ಮರಳಿದಾಗ ರಾಮನಗರಿ ಜನ ಅದ್ಧೂರಿ ಸ್ವಾಗತ ನೀಡಿ ಬರಮಾಡಿಕೊಂಡಿದ್ದರು. ಇದೀಗ ದೇಶಾದ್ಯಂತ ಅದೇ ರೀತಿ ಸಂಭ್ರಮ ಮನೆ ಮಾಡಿದೆ. ಸಂಪೂರ್ಣ ಆಯೋಧ್ಯೆ ಕಂಗೊಳಿಸುತ್ತಿದೆ. ರಾಮ ಭಕ್ತರು ಜೈ ಶ್ರೀರಾಮ್ ಘೋಷಣೆಯೊಂದಿಗೆ ಬೀದಿ ಬೀದಿಗಳಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ. ಇತ್ತ ಆಯೋಧ್ಯೆ ನಗರ, ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ ಸಜ್ಜಾಗಿದೆ. ಬೆಳಗ್ಗೆ 10.30ರ ವೇಳೆಗೆ ಮೋದಿ ಆಯೋಧ್ಯೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೋದಿಯನ್ನು ಬರಮಾಡಿಕೊಳ್ಳಲಿದ್ದಾರೆ.
ಪ್ರಾಣಪ್ರತಿಷ್ಠೆ ನೆರವೇರಿಸಲಿರುವ ಪ್ರಧಾನಿ ಮೋದಿ ಆಯೋಧ್ಯೆಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತಿದೆ. ಮಧ್ಯಾಹ್ನ 12.20ಕ್ಕೆ ಬಾಲರಾಮನ ಪ್ರಾಣಪ್ರತಿಷ್ಠೆ ವಿಧಿವಿಧಾನ ಆರಂಭಗೊಳ್ಳಲಿದೆ. 12.55ಕ್ಕೆ ಪ್ರಾಣಪ್ರತಿಷ್ಠೆ ಪೂಜಾ ಕೈಂಕರ್ಯ ಅಂತ್ಯಗೊಂಡು ಮಂದಿರ ಲೋಕಾರ್ಪಣೆಗೊಳ್ಳಲಿದೆ.
ಪ್ರಾಣಪ್ರತಿಷ್ಠೆಗೆ ಹೂವುಗಳಿಂದ ಕಂಗೊಳಿಸುತ್ತಿದೆ ಆಯೋಧ್ಯೆ ರಾಮ ಮಂದಿರ, ಇಲ್ಲಿದೆ ಫೋಟೋ!
ರಾಮಮಂದಿರ ಪ್ರಾಣಪ್ರತಿಷ್ಠೆ ದಿನ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
ಬೆಳಗ್ಗೆ 9.05: ದೆಹಲಿ ವಿಮಾನ ನಿಲ್ದಾಣದಿಂದ ಆಯೋಧ್ಯೆಗೆ ನಿರ್ಗಮಿಸಲಿದ್ದಾರೆ ಪ್ರಧಾನಿ ಮೋದಿ
ಬೆಳಗ್ಗೆ 10.30: ವಾಲ್ಮೀಕಿ ಮಹರ್ಷಿ ವಿಮಾನ ನಿಲ್ದಾಣ ಆಯೋಧ್ಯೆಗೆ ಮೋದಿ ಆಗಮನ
ಬೆಳಗ್ಗೆ 10.45: ಆಯೋಧ್ಯೆಗೆ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ
ಬೆಳಗ್ಗೆ 10.55: ರಾಮಜನ್ಮಭೂಮಿಗೆ ಆಗಮಿಸಲಿರುವ ಪ್ರಧಾನಿ ಮೋದಿ
ಮಧ್ಯಾಹ್ನ 12.20 : ರಾಮ ಮಂದಿರ ಬಾಲರಾಮನ ಪ್ರಾಣಪ್ರತಿಷ್ಠೆ ವಿಧಿವಿಧಾನ ಆರಂಭ
ಮಧ್ಯಾಹ್ನ 12.29:ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠೆ
ಮಧ್ಯಾಹ್ನ 12.55: ಗರ್ಭಗುಡಿಯಿಂದ ಹೊರಬರಲಿರುವ ಪ್ರಧಾನಿ ಮೋದಿ
ಮಧ್ಯಾಹ್ನ 1.15: ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಭಾಗಿ
ಮಧ್ಯಾಹ್ನ 2.10: ಕುಬೇರ್ ಟೀಲಾಗೆ ಪ್ರಧಾನಿ ಮೋದಿ ಭೇಟಿ
ಮಧ್ಯಾಹ್ನ 2.35: ಆಯೋಧ್ಯೆ ಹೆಲಿಪ್ಯಾಡ್‌ಗೆ ಪ್ರದಾನಿ ಮೋದಿ ಆಗಮನ
ಮಧ್ಯಾಹ್ನ 3.05: ಆಯೋಧ್ಯೆ ವಿಮಾನ ನಿಲ್ದಾಣದಿಂದ ಮೋದಿ ದೆಹಲಿಗೆ ನಿರ್ಗಮನ
ಸಂಜೆ 4.25: ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮನ
ಅಯೋಧ್ಯೆ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ: ಸರ್ಕಾರಿ ರಜೆ ಘೋಷಿಸುವಂತೆ ಬಿವೈ ವಿಜಯೇಂದ್ರ ಆಗ್ರಹ!
ಆಯೋಧ್ಯೆಯ ಬೀದಿ ಬೀದಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಆಯೋಧ್ಯೆಯತ್ತ ಗಣ್ಯರು ಆಗಮಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್, ಟಾಲಿವುಡ್ ಸ್ಟಾರ್ ರಾಮಚರಣ್ ಸೇರಿದಂತೆ ಸೆಲೆಬ್ರೆಟಿಗಳು ಇದೀಗ ಆಯೋಧ್ಯೆಗೆ ಆಗಮಿಸಿದ್ದಾರೆ. ವಿದೇಶಗಳಿಂದ ಆಗಮಿಸಿದ ಗಣ್ಯರು ರಾಮಜನ್ಮಭೂಮಿ ತಲುಪಿದ್ದಾರೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವು ಗಣ್ಯರು ಕೆಲವೇ ಕ್ಷಣಗಳಲ್ಲಿ ರಾಮಜನ್ಮಭೂಮಿಗೆ ಆಗಮಿಸಲಿದ್ದಾರೆ.