ಮಕ್ಕಳಲ್ಲಿ ಕೊರೊನಾ ಹರಡುವಿಕೆ ಇಳಿಕೆ| ಆದರೆ 10-20 ಹಾಗೂ 30 ವರ್ಷ ಮೇಲ್ಪಟ್ಟವರಲ್ಲಿ ಏರಿಕೆ| ಮೊದಲ ಅಲೆಗೂ 2ನೇ ಅಲೆಗೂ ಹೋಲಿಕೆ| ಕೇಂದ್ರ ಸರ್ಕಾರದಿಂದ ಅಂಕ ಅಂಶ ಬಿಡುಗಡೆ
ನವದೆಹಲಿ(ಏ22): ಕೊರೋನಾ ಮೊದಲ ಅಲೆಗೆ ಹೋಲಿಸಿದರೆ 2ನೇ ಅಲೆಯಲ್ಲಿ ಎಷ್ಟುಭೀಕರವಾಗಿದೆ. ಯಾವ ವಯಸ್ಸಿನವರಿಗೆ ಎಷ್ಟುಪ್ರಮಾಣದಲ್ಲಿ ಹಬ್ಬಿದೆ ಎಂಬ ಕುರಿತಾದ ಅಂಕಿ ಅಂಶಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದೆ. ಅದರಲ್ಲಿ 10ರಿಂದ 20 ವರ್ಷದವರಲ್ಲಿ ಕೊರೋನಾ ಹರಡುವಿಕೆ ಹೆಚ್ಚಳಗೊಂಡಿರುವುದು ಕಂಡುಬಂದಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಒದಗಿಸಿರುವ ಮಾಹಿತಿಯ ಪ್ರಕಾರ, 146 ಜಿಲ್ಲೆಗಳಲ್ಲಿ ಪಾಲಿಸಿಟಿವಿ ದರ ಶೇ.15ಕ್ಕಿಂತ ಹೆಚ್ಚಿದ್ದರೆ, 274 ಜಿಲ್ಲೆಗಳಲ್ಲಿ ಶೇ.5ರಿಂದ 15ರಷ್ಟುಪಾಸಿಟಿವಿಟಿ ದರ ದಾಖಲಾಗಿದೆ.
undefined
ವಯೋವಾರು ಕೊರೋನಾ ಹರಡುವಿಕೆ:
ವರ್ಷ| ಮೊದಲ ಅಲೆ| 2ನೇ ಅಲೆ
10 ವರ್ಷದ ಒಳಗಿನವರ| ಶೇ.4.03| ಶೇ.2.97
10ರಿಂದ 20 ವರ್ ಶೇ.8.07| ಶೇ.8.50
20ರಿಂದ 30 ವರ್ಷ| ಶೇ.20.41| ಶೇ.19.35
30 ವರ್ಷ ಮೇಲ್ಪಟ್ಟವರು| ಶೇ.67.5| ಶೇ.69.18